
ಕೊಚ್ಚಿ(ಆ.24): ಅಜೀವ ನಿಷೇಧದ ಶಿಕ್ಷೆ ಕಡಿತಗೊಂಡ ಸಂತಸದಲ್ಲಿದ್ದ ಟೀಂ ಇಂಡಿಯಾ ವೇಗಿ ಶ್ರೀಶಾಂತ್‌ಗೆ ದಿಢೀರ್ ಆಘಾತ ಎದುರಾಗಿದೆ. ಕೊಚ್ಚಿಯಲ್ಲಿರುವ ಶ್ರೀಶಾಂತ್ ಮನೆಯಲ್ಲಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಭೀಕರ ಸ್ಫೋಟ ಹಾಗೂ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಶ್ರೀಶಾಂತ್ ಮನೆಯಲ್ಲಿ ಇರಲಿಲ್ಲ. ಆದರೆ ಮನೆಯಲ್ಲಿ ಮಲಗಿದ್ದ ಶ್ರೀಶಾಂತ್ ಪತ್ನಿ ಹಾಗೂ ಮಕ್ಕಳನ್ನು ಅಗ್ನಿಶಾಮಕ ಸಿಬ್ಬಂಧಿ ರಕ್ಷಿಸಿದ್ದಾರೆ.
ಇದನ್ನೂ ಓದಿ: ಶ್ರೀಶಾಂತ್‍ಗೆ ಬಿಗ್ ರಿಲೀಫ್; ನಿಷೇಧ ಕಡಿತಗೊಳಿಸಿದ BCCI!
ಮುಂಜಾನೆ 2 ಗಂಟೆಗೆ ಸುಮಾರಿಗೆ ಶ್ರೀಶಾಂತ್ ಮನೆಯ ಅಡುಗೆ ಕೋಣೆಯಲ್ಲಿ ಭೀಕರ ಸ್ಫೋಟಕ ಸಂಭವಿಸಿದೆ. ಸ್ಫೋಟಕದ ರಭಸಕ್ಕೆ ಕೋಣೆಯಲ್ಲಿನ ಎಲ್ಲಾ ವಸ್ತುಗಳು ಪುಡಿ ಪುಡಿಯಾಗಿದ್ದು, ಬೆಂಕಿ ಹತ್ತಿಕೊಂಡಿದೆ. ಪಕ್ಕದ ಕೊಣೆಗಳು, ಎಲೆಕ್ಟ್ರಿಕ್ ವೈಯರಿಂಗ್ ಸೇರಿದಂತೆ ಮನೆಯ ಮೆಲ್ಚಾವಣಿಯಲ್ಲಿ ಮಸ್ತುಗಳು ಸುಟ್ಟು ಕರಕಲಾಗಿದೆ. ತಕ್ಷಣವೇ ಆಗ್ನಿಶಾಮಕ ಸಿಬ್ಬಂಧಿ ಸ್ಥಳಕ್ಕೆ ಧಾವಿಸಿ ಮನೆಯೊಳಗಿದ್ದ ಶ್ರೀಶಾಂತ್ ಪತ್ನಿ ಹಾಗೂ ಮಕ್ಕಳನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‌ನಲ್ಲಿ 100 ನನ್ನ ವಿಕೆಟ್ ಗುರಿ; ಮತ್ತೆ ಕಣಕ್ಕಳಿಯಲು ರೆಡಿಯಾದ ಶ್ರೀ!
ಸ್ಫೋಟದ ಶಬ್ದಕ್ಕೆ ಮಧ್ಯರಾತ್ರಿಯಲ್ಲಿ ಎಲ್ಲರೂ ಎಚ್ಚರಗೊಂಡಿದ್ದಾರೆ. ಶ್ರೀಶಾಂತ್ ಮನೆಯೊಳಗಿಂದ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಗಾಂಧಿನಗರ ಹಾಗೂ ತಕ್ಕಿಕೆರ ವಿಭಾಗದ ಅಗ್ನಿಶಾಮಕ ಸಿಬ್ಬಂಧಿಗೆ ವಿಷಯ ತಳಿಸಿದ್ದಾರೆ. ತಕ್ಷಣವೆ ನೆರವಿಗೆ ಧಾವಿಸಿದ ಅಗ್ನಿಶಾಮಕ, ಶ್ರೀಶಾಂತ್ ಕುಟುಂಬವನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಸ್ಫೋಟ ಸಂಭವಿಸಿದೆ ಅನ್ನೋ ಮಾತುಗಳು ಕೇಳಿಬಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.