ವಿರಾಟ್ ಕೊಹ್ಲಿ, ಡಿಕಾಕ್ ದಾಖಲೆ ಮುರಿದ ಫಖರ್ ಜಮಾನ್ !

By Suvarna NewsFirst Published Jul 22, 2018, 3:04 PM IST
Highlights

ಪಾಕಿಸ್ತಾನ ಕ್ರಿಕೆಟರ್ ಫಖರ್ ಜಮಾನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟಿಗರ ದಾಖಲೆ ಮುರಿದಿದ್ದಾರೆ. ಫಕರ್ ಜಮಾನ್ ದ್ವಿಶತಕ ಸಿಡಿಸೋ ಮೂಲಕ  ನಿರ್ಮಿಸಿದ ನೂತನ ದಾಖಲೆ ಯಾವುದು? ಇಲ್ಲಿದೆ ವಿವರ.

ಬುಲವಾಯೊ(ಜು.22): ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ದಾಖಲೆ ಬರೆದ ಪಾಕಿಸ್ತಾನ ಬ್ಯಾಟ್ಸ್‌ಮನ್ ಫಖರ್ ಜಮಾನ್‌ ಇದೀಗ 5ನೇ ಏಕದಿನ ಪಂದ್ಯದಲ್ಲಿ  ಹಲವು ದಿಗ್ಗಜರ ದಾಖಲೆಗಳನ್ನ ಮುರಿದಿದ್ದಾರೆ.

ಸ್ಫೋಟಕ ಬ್ಯಾಟಿಂಗ್ ಮೂಲಕ ಫಖರ್ ಜಮಾನ್‌ ಏಕದಿನ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ 1000 ರನ್ ಪೂರೈಸಿದ ಕ್ರಿಕಟಿಗ ಅನ್ನೋ ದಾಖಲೆ ಬರೆದಿದ್ದಾರೆ. ಫಖರ್ ಜಮಾನ್‌ ಕೇವಲ 18 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು. ಈ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವೆಸ್ಟ್ಇಂಡೀಸ್ ದಿಗ್ಗಜ ವಿವ್ ರಿಚರ್ಡ್ಸ್ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರ ದಾಖಲೆ ಮುರಿದಿದ್ದಾರೆ.

ವೆಸ್ಟ್ಇಂಡೀಸ್ ದಿಗ್ಗಜ ವಿವ್ ರಿಚರ್ಡ್ಸ್, ಇಂಗ್ಲೆಂಡ್‌ನ ಕೆವಿನ್ ಪೀಟರ್ಸನ್, ಜೋನಾಥನ್ ಟ್ರಾಟ್, ಸೌತ್ಆಫ್ರಿಕಾದ ಕ್ವಿಂಟನ್ ಡಿಕಾಕ್ ಹಾಗೂ ಪಾಕಿಸ್ತಾನದ ಬಾಬರ್ ಅಜಮ್ 21 ಇನ್ನಿಂಗ್ಸ್‌ಗಳಲ್ಲಿ 1000 ರನ್ ಪೂರಿಸಿದ್ದರು. ಏಕದಿನದಲ್ಲಿ 1000 ರನ್ ಪೂರೈಸಿಲು ನಾಯಕ ವಿರಾಟ್ ಕೊಹ್ಲಿ 24 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. 

2017ರಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಿದ ಫಖರ್ ಜಮಾನ್‌ 3 ಶತಕ ಹಾಗೂ 5 ಅರ್ಧಶತಕ ದಾಖಲಿಸಿದ್ದಾರೆ. ಅದರಲ್ಲೂ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಫಕರ್ ಝಮಾನ್ ಭರ್ಜರಿ ಶತಕ ಸಿಡಿಸಿ ಭಾರತಕ್ಕೆ ಸೋಲಿನ ಶಾಕ್ ನೀಡಿದ್ದರು.

ಏಕದಿನದಲ್ಲಿ ಅತೀ ವೇಗದ 1000 ರನ್ ಸಾಧನೆ

ಇನ್ನಿಂಗ್ಸ್ ಬ್ಯಾಟ್ಸ್‌ಮನ್
18 ಫಕರ್ ಝಮಾನ್
21 ವಿವ್ ರಿಚರ್ಡ್ಸ್
21 ಕೆವಿನ್ ಪೀಟರ್ಸನ್
21 ಜೋನಾಥನ್ ಟ್ರಾಟ್
21 ಕ್ವಿಂಟನ್ ಡಿಕಾಕ್
21 ಬಾಬರ್ ಅಜಮ್

 

click me!