ಆಫ್ರಿಕಾಗೆ ಮತ್ತೊಂದು ಶಾಕ್; ಸುಮಾರು 9 ವರ್ಷಗಳ ಬಳಿಕ ಈ ಇಬ್ಬರು ಆಟಗಾರರಿಲ್ಲದೇ ಕಣಕ್ಕಿಳಿಯುತ್ತಿದೆ ಆಫ್ರಿಕಾ

Published : Feb 03, 2018, 02:13 PM ISTUpdated : Apr 11, 2018, 01:03 PM IST
ಆಫ್ರಿಕಾಗೆ ಮತ್ತೊಂದು ಶಾಕ್; ಸುಮಾರು 9 ವರ್ಷಗಳ ಬಳಿಕ ಈ ಇಬ್ಬರು ಆಟಗಾರರಿಲ್ಲದೇ ಕಣಕ್ಕಿಳಿಯುತ್ತಿದೆ ಆಫ್ರಿಕಾ

ಸಾರಾಂಶ

'ಕೈ ಬೆರಳಿಗೆ ಬಲವಾದ ಪೆಟ್ಟು ಬಿದ್ದಿದೆ. ಮುಂದಿನ ಪಂದ್ಯದ ವೇಳೆ ಸರಿ ಹೋಗುವ ವಿಶ್ವಾಸವಿದೆ'  ಎಂದು ಡು ಪ್ಲೆಸಿಸ್ ಡರ್ಬನ್ ಪಂದ್ಯ ಮುಕ್ತಾಯದ ಬಳಿಕ ಹೇಳಿದ್ದರು. ಆದರೆ ಸ್ಕ್ಯಾನಿಂಗ್ ವೇಳೆ ಬೆರಳು ಮುರಿದಿರುವುದು ದೃಢಪಟ್ಟಿದ್ದು, ಸರಿಹೋಗಲು 3-6 ವಾರಗಳು ಬೇಕಾಗುತ್ತದೆ ಎಂದು ವೈಧ್ಯರು ತಿಳಿಸಿದ್ದಾರೆ. 2009ರ ಜನವರಿ ಬಳಿಕ ಇದೇ ಮೊದಲ ಬಾರಿಗೆ ಎಬಿಡಿ ಹಾಗೂ ಡು ಪ್ಲೆಸಿಸ್ ಇಲ್ಲದೇ ಆಫ್ರಿಕಾ ತಂಡ ಕಣಕ್ಕಿಳಿಯುತ್ತಿದೆ.

ಭಾರತ ವಿರುದ್ಧ 6 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಸೋತು ಹಿನ್ನಡೆ ಅನುಭವಿಸಿರುವ ದಕ್ಷಿಣ ಆಫ್ರಿಕಾಗೆ ಮತ್ತೊಂದು ಆಘಾತ ಎದುರಾಗಿದೆ. ಮೊದಲ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದ ನಾಯಕ ಫಾಫ್ ಡು ಪ್ಲೆಸಿಸ್ ಬಲಗೈ ತೋರುಬೆರಳು ಮುರಿದುಕೊಂಡಿದ್ದು, ಏಕದಿನ ಹಾಗೂ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಈಗಾಗಲೇ ಮೊದಲ 3 ಪಂದ್ಯಗಳಿಂದ ಅನುಭವಿ ಆಟಗಾರ ಎಬಿ ಡಿವಿಲಿಯರ್ಸ್ ಹೊರಬಿದ್ದಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರ ಅನುಪಸ್ಥಿತಿ ಆಫ್ರಿಕಾ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

'ಕೈ ಬೆರಳಿಗೆ ಬಲವಾದ ಪೆಟ್ಟು ಬಿದ್ದಿದೆ. ಮುಂದಿನ ಪಂದ್ಯದ ವೇಳೆ ಸರಿ ಹೋಗುವ ವಿಶ್ವಾಸವಿದೆ'  ಎಂದು ಡು ಪ್ಲೆಸಿಸ್ ಡರ್ಬನ್ ಪಂದ್ಯ ಮುಕ್ತಾಯದ ಬಳಿಕ ಹೇಳಿದ್ದರು. ಆದರೆ ಸ್ಕ್ಯಾನಿಂಗ್ ವೇಳೆ ಬೆರಳು ಮುರಿದಿರುವುದು ದೃಢಪಟ್ಟಿದ್ದು, ಸರಿಹೋಗಲು 3-6 ವಾರಗಳು ಬೇಕಾಗುತ್ತದೆ ಎಂದು ವೈಧ್ಯರು ತಿಳಿಸಿದ್ದಾರೆ. 2009ರ ಜನವರಿ ಬಳಿಕ ಇದೇ ಮೊದಲ ಬಾರಿಗೆ ಎಬಿಡಿ ಹಾಗೂ ಡು ಪ್ಲೆಸಿಸ್ ಇಲ್ಲದೇ ಆಫ್ರಿಕಾ ತಂಡ ಕಣಕ್ಕಿಳಿಯುತ್ತಿದೆ.

 ಮಾ.01ರಿಂದ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಆರಂಭವಾಗಲಿದ್ದು, ಆ ವೇಳೆಗೆ ಡು ಪ್ಲೆಸಿಸ್ ಗುಣಮುಖವಾಗುವ ವಿಶ್ವಾಸದಲ್ಲಿದ್ದಾರೆ. ಡು ಪ್ಲೆಸಿಸ್ ಬದಲಿಗೆ ಫರ್ಹಾನ್ ಬೆಹರ್ದೀನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!