
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ವೃತ್ತಿ ಜೀವನದಲ್ಲಿ ಸಾಕಷ್ಟು ಪಾತ್ರಗಳನ್ನು ನಿಭಾಯಿಸಿದ್ದಾರೆ. 12ನೇ ಆಟಗಾರನಾಗಿ, ಆರಂಭಿಕ ಬ್ಯಾಟ್ಸ್'ಮನ್ ಆಗಿ, ಟೀಂ ಇಂಡಿಯಾದ ಯಶಸ್ವಿ ನಾಯಕನಾಗಿ, ಕ್ರಿಕೆಟ್ ಆಡಳಿತಾಧಿಕಾರಿಯಾಗಿರುವುದನ್ನು ನಾವು ನೋಡಿದ್ದೇವೆ. ಆದರೆ ಸರ್ದಾರ್'ಜೀ ಆಗಿದ್ದು..?
ಹೌದು, ದಾದಾ ಟೀಂ ಇಂಡಿಯಾ ನಾಯಕರಾಗಿದ್ದಾಗ ದುರ್ಗಾ ಪೂಜೆಗಾಗಿ ಸರ್ದಾರ್ ಜೀ ಆಗಿ ಬದಲಾಗಿದ್ದರು ಎಂಬ ಕುತೂಹಲಕಾರಿ ಅಂಶವೀಗ ಬಯಲಾಗಿದೆ. ಈ ತಿಂಗಳಾಂತ್ಯದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಸೌರವ್ ಗಂಗೂಲಿ ಬರೆದ "ಎ ಸೆಂಚುರಿ ಈಸ್ ನಾಟ್ ಎನಾಫ್" ಪುಸ್ತಕದಲ್ಲಿ ಇಂತಹ ಹತ್ತು ಹಲವು ಸ್ವಾರಸ್ಯಕರ ಘಟನೆಗಳನ್ನು ಅನಾವರಣ ಮಾಡಿದ್ದಾರೆ.
ದಾದಾ ಒಮ್ಮೆ ದುರ್ಗಾಪೂಜೆಯ ಸಂದರ್ಭದಲ್ಲಿ ಸಿಖ್ ವೇಷ ಹಾಕಿದ್ದರಂತೆ. ಬಾಬುಘಾಟ್'ಗೆ ಹೋದಾಗ ಪೊಲೀಸ್ ಇನ್ಸ್'ಪೆಕ್ಟರ್ ದಾದಾರನ್ನು ಗುರುತಿಸಿ ಕಿರುನಗೆ ನಕ್ಕರಂತೆ. ಆದರೆ ವಿಷಯ ರಹಸ್ಯವಾಗಿಡಿ ಎಂದು ಹೇಳಿ ದರ್ಶನ ಮಾಡಿಕೊಂಡು ಬಂದಿದ್ದರಂತೆ. ಗಂಗೂಲಿ ಅವರಿಗೆ ಪತ್ನಿ ಡೋನಾ ಮೇಕ್'ಅಪ್ ಮಾಡಿದ್ದರಂತೆ. ದಾದಾ ಇನ್ನಷ್ಟು ಸ್ವಾರಸ್ಯಕರ ವಿಚಾರ ಪುಸ್ತಕ ಖರೀದಿಸಿಯೇ ತಿಳಿಯಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.