ಬಿಸಿಸಿಐಗೆ ಚಾಟಿ ಬೀಸಿದ ಮಾಹಿತಿ ಆಯೋಗ

First Published Jul 13, 2018, 1:57 PM IST
Highlights

ಬಿಸಿಸಿಐ ಹಾಗೂ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಬಿಸಿ ಮುಟ್ಟಿಸಿದೆ. 

ನವದೆಹಲಿ[ಜು.13]: ಬಿಸಿಸಿಐ ಹಾಗೂ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಬಿಸಿ ಮುಟ್ಟಿಸಿದೆ. 

ನ್ಯಾಯಾಲಯದ ಆದೇಶ ಹಾಗೂ ಕಾನೂನು ಆಯೋಗದ ನಿರ್ದೇಶನವಿದ್ದರೂ ಮಾಹಿತಿ ಹಕ್ಕು (ಆರ್‌ಟಿಐ) ಅಡಿ ಕೇಳಲಾದ ಪ್ರಶ್ನೆಗಳಿಗೆ ಬಿಸಿಸಿಐ ಏಕೆ ಸೂಕ್ತವಾಗಿ ಉತ್ತರ ನೀಡುತ್ತಿಲ್ಲ. ನ್ಯಾಯಾಲಯದ ಆದೇಶವನ್ನು ಬಿಸಿಸಿಐ ಅಷ್ಟು ಲಘುವಾಗಿ ತೆಗೆದುಕೊಂಡಿದೆಯೆ?. ಅದು ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲವೆ?. ಹಾಗಾದರೆ ಬಿಸಿಸಿಐ ಆಯ್ಕೆ ಮಾಡುವ ತಂಡವನ್ನೇಕೆ ರಾಷ್ಟ್ರೀಯ ತಂಡವೆಂದು ಪರಿಗಣಿಸಬೇಕು ಎಂದು ಮಾಹಿತಿ ಆಯೋಗ ಖಾರವಾಗಿ ಪ್ರಶ್ನಿಸಿದೆ. ಆರ್‌ಟಿಐ ಕಡೆಗಣನೆಗೆ ಸೂಕ್ತ ಉತ್ತರ ನೀಡುವಂತೆ ಸೂಚಿಸಿದೆ.

ಬಿಸಿಸಿಐ ನಾಡಾ ವ್ಯಾಪ್ತಿಗೆ..?

ದುಬೈ: ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ)ದ ಒಳಪಡುವ ವಿಚಾರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಕೆಂಗೆಣ್ಣಿಗೆ ಬಿಸಿಸಿಐ ಗುರಿಯಾಗಿದೆ ಎನ್ನಲಾಗಿದೆ. 
ನಾಡಾ, ಕ್ರಿಕೆಟಿಗರ ಪರೀಕ್ಷೆ ನಡೆಸುವುದನ್ನು ಬಿಸಿಸಿಐ ವಿರೋಧಿಸಿತ್ತು. ಈ ಹಿನ್ನೆಲೆಯಲ್ಲಿ ವಾಡಾ (ಅಂತಾರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ), ಬಿಸಿಸಿಐ ಅನ್ನು ನಾಡಾ ವ್ಯಾಪ್ತಿಗೆ ತರುವಂತೆ ಐಸಿಸಿ ಮೇಲೆ ಒತ್ತಡವೇರಿತ್ತು ಎಂದು ಮೂಲಗಳು ಹೇಳಿವೆ. 

ಇದೀಗ ಐಸಿಸಿ ಒತ್ತಡದ ಹಿನ್ನೆಲೆಯಲ್ಲಿ ಮುಂದಿನ ವಾರ ಕೋಲ್ಕತಾದಲ್ಲಿ ಬಿಸಿಸಿಐ ತನ್ನ ಕಾನೂನು ಸಲಹೆಗಾರರು ಸೇರಿದಂತೆ ಉನ್ನತ ಅಧಿಕಾರಿಗಳ ತುರ್ತು ಸಭೆಯನ್ನು ಕರೆದಿದೆ ಎಂದು ತಿಳಿದು ಬಂದಿದೆ

click me!