Exclusive ಸಂದರ್ಶನ: RCB ತಂಡ ಸೇರಿಕೊಂಡ ಏಕೈಕ ಕನ್ನಡಿಗ ದೇವದತ್!

By Web Desk  |  First Published Dec 19, 2018, 4:18 PM IST

12ನೇ ಆವೃತ್ತಿ ಐಪಿಎಲ್ ಟೂರ್ನಿಯ ಹರಾಜಿನಲ್ಲಿ ಏಕೈಕ ಕನ್ನಡಿಗನನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ. 18ರ ಯವ ಪ್ರತಿಭಾನ್ವಿತ ಎಡಗೈ ಬ್ಯಾಟ್ಸ್‌ಮನ್ ದೇವದತ್ ಜೊತೆ ಸುವರ್ಣನ್ಯೂಸ್.ಕಾಂ ನಡೆಸಿದ Exclussive ಸಂದರ್ಶನ ಇಲ್ಲಿದೆ.
 


ಬೆಂಗಳೂರು(ಡಿ.19): ಪ್ರತಿ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕನ್ನಡಿಗರ ಕೊರತೆ ಎದ್ದು ಕಾಣುತ್ತೆ. 2018ರ ಆವೃತ್ತಿಯಲ್ಲಿ ತಂಡದಲ್ಲಿದ್ದ ಪವನ್ ದೇಶಪಾಂಡೆ ಹಾಗೂ ಅನಿರುದ್ ಜೋಶಿಯನ್ನ ತಂಡದಿಂದ ಕೈಬಿಟ್ಟ ಮೇಲೆ ಆರ್‌ಸಿಬಿ ತಂಡದಲ್ಲಿ ಕನ್ನಡಿಗರೇ ಇಲ್ಲದಾಗಿತ್ತು. ಹೀಗಾಗಿ 2019ರ ಐಪಿಎಲ್ ಹರಾಜಿನಲ್ಲಿ 18ರ ಪೋರ ದೇವದತ್ ಪಡಿಕ್ಕಲ್‌ ಖರೀದಿಸೋ ಮೂಲಕ ಏಕೈಕ ಕನ್ನಡಿಗನನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಇದನ್ನೂ ಓದಿ: ಹರಾಜಿನ ಬಳಿಕ RCB ಕಂಪ್ಲೀಟ್ ತಂಡ ಹೀಗಿದೆ ನೋಡಿ!

Latest Videos

undefined

ಹರಾಜಿನಲ್ಲಿ ದೇವದತ್ ಪಡಿಕ್ಕಲ್‍ಗೆ ಮೂಲ ಬೆಲೆ 20 ಲಕ್ಷ ರೂಪಾಯಿ ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿತು. RCB ತಂಡ ಸೇರಿಕೊಂಡ ಏಕೈಕ ಕನ್ನಡಿಗ ದೇವದತ್  ಸುವರ್ಣ ನ್ಯೂಸ್.ಕಾಂ ಜೊತೆ  ತಮ್ಮ ಸಂತಸ ಹಂಚಿಕೊಂಡರು.

ಆರ್‌ಸಿಬಿ ತಂಡ ಸೇರಿಕೊಂಡ ದೇವದತ್ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಜೊತೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳಲು ಕಾತರನಾಗಿದ್ದೇನೆ ಎಂದು ಮೊದಲ ಪ್ರತಿಕ್ರಿಯೆ ನೀಡಿದರು.  ಪ್ರತಿಯೊಬ್ಬ ಕನ್ನಡಿಗನಿಗೂ ತವರಿನ ಆರ್‌ಸಿಬಿ ತಂಡದಲ್ಲಿ ಆಡಬೇಕು ಅನ್ನೋ ಕನಸಿರುತ್ತೆ. ನನ್ನ ಚೊಚ್ಚಲ ಐಪಿಎಲ್ ಟೂರ್ನಿಯಲ್ಲೇ ಆರ್‌ಸಿಬಿ ಸೇರಿಕೊಂಡಿರುವುದು ಇನ್ನಷ್ಟು ಖುಷಿ ನೀಡಿದೆ ಎಂದಿದ್ದಾರೆ. 

ಇದನ್ನೂ ಓದಿ: ಲಿಯೋನೆಲ್ ಮೆಸ್ಸಿಗೆ ಒಲಿಗೆ ಚಿನ್ನದ ಶೂ

ನಾನು ಕಲಿಯಲು ಸಾಕಷ್ಟಿದೆ. ನನ್ನ ಮಂತ್ರ ಒಂದೆ ಅವಕಾಶಕ್ಕಾಗಿ ತಾಳ್ಮೆಯಿಂದ ಕಾಯುತ್ತೇನೆ. ವಿಶೇಷವಾಗಿ ವಿಶ್ವದ ಶ್ರೇಷ್ಠ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಜೊತೆ ಡ್ರಸ್ಸಿಂಗ್ ರೂಂ ಹಂಚಿಕೊಳ್ಳುತ್ತಿರುವುದೇ ನನ್ನ ಬಹುದೊಡ್ಡ ಸಾಧನೆ ಎಂದಿದ್ದಾರೆ.

ಗುಜರಾತ್ ವಿರುದ್ಧ ರಣಜಿ ಪಂದ್ಯದ ಬಳಿಕ ಮನೆಗೆ ಬಂದ ನಾನು, ಕುಟುಂಬದ ಜೊತೆ ಐಪಿಎಲ್ ಹರಾಜು ವೀಕ್ಷಿಸುತ್ತಿದ್ದೆ. ನನ್ನ ಹೆಸರು ಹರಾಜಿಗೆ ಬಂದಾಗ ನಾನು ಎದ್ದು ಹೊರನಡೆದೆ. ಇಷ್ಟೇ ಅಲ್ಲ ನಾನು ಹರಾಜಾಗುತ್ತೇನೆ ಅನ್ನೋ ಯಾವುದೇ ನಿರೀಕ್ಷೆ ಕೂಡ ಇರಲಿಲ್ಲ.  ಹೊರಬರುತ್ತಿದ್ದಂತೆ, ಕುಟುಂಬ ಸದಸ್ಯರು ಕುಣಿಯುತ್ತಿದ್ದರು. ಎಲ್ಲರೂ ಖುಷಿಯಲ್ಲಿ ತೇಲಾಡುತ್ತಿದ್ದರು.  ಅಷ್ಟರಲ್ಲೇ ನನ್ನ ಫೋನ್‌ಗೆ ಶುಭಾಶಯದ ಕರೆಗಳು, ಸಂದೇಶಗಳು ಬರತೊಡಗಿತು ಎಂದು ದೇವದತ್ ಹರಾಜಿನ ಕುರಿತ ಪ್ರಶ್ನೆಗೆ ಉತ್ತರಿಸಿದರು.

ಇದನ್ನೂ ಓದಿ: ಅಬ್ ಆಯೇಗಾ ಮಜಾ: ಮುಂಬೈ ಸೇರಿದ ಯುವಿ ಖಡಕ್ ವಾರ್ನಿಂಗ್..!

ಕೋಚ್ ರಾಹುಲ್ ದ್ರಾವಿಡ್ ಗರಡಿಯಲ್ಲಿ ಅಂಡರ್ 19 ಆಡಿದ್ದ ದೇವದತ್ ಪ್ರಸಕ್ತ ವರ್ಷದಲ್ಲಿ ರಣಜಿ ಟೂರ್ನಿಗೆ ಪಾದಾರ್ಪಣೆ ಮಾಡಿದ್ದಾರೆ. ಸದ್ಯ ನಡೆಯುತ್ತಿರುವ ರಣಜಿ ಟೂರ್ನಿಯಲ್ಲಿ 2 ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. 

2018ರ ಇಡೀ ವರ್ಷ ನನ್ನ ಪಾಲಿಗೆ ಅವಿಸ್ಮರಣೀಯವಾಗಿತ್ತು. ಅಂಡರ್ 19, ಕರ್ನಾಟಕ ಪ್ರಿಮಿಯರ್ ಲೀಗ್(KPL) ಹಾಗೂ ಸದ್ಯ ನಡೆಯುತ್ತಿರುವ ರಣಜಿ ಟೂರ್ನಿ ಎಲ್ಲವೂ ನನಗೆ ಅತ್ಯುತ್ತಮ ವೇದಿಕೆ ಕಲ್ಪಿಸಿದೆ ಎಂದು ದೇವದತ್ ಹೇಳಿದರು.

ಇದನ್ನೂ ಓದಿ: ಟೆಸ್ಟ್ ಸರಣಿ ಅರ್ಧಕ್ಕೆ ಬಿಟ್ಟು ತವರಿಗೆ ರೋಹಿತ್ ಶರ್ಮಾ ವಾಪಸ್..?

ಒಂದು ಬಾರಿ ವಿರಾಟ್ ಕೊಹ್ಲಿಯನ್ನ ಭೇಟಿಯಾಗಿರುವ ದೇವದತ್ ಹಳೆ ನನೆಪನ್ನ ಬಿಚ್ಚಿಟ್ಟರು. ಪ್ರಾಯೋಜಕತ್ವದ ಟೂರ್ನಿ ಪ್ರಶಸ್ತಿ ಸಮಾರಂಭಕ್ಕೆ ಬೆಂಗಳೂರಿಗೆ ಆಗಮಿಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ,  ನನಗೆ ಮೆಡಲ್ ವಿತರಿಸಿದ್ದರು. ಈ ಫೋಟೋ ನನ್ನಲ್ಲಿದೆ. ಇದೀಗ ನಾನು ವಿರಾಟ್ ಕೊಹ್ಲಿ ಜೊತೆ ಆಡುತ್ತಿದ್ದೇನೆ ಅನ್ನೋದೆ  ನನಗೆ ಇನ್ನಿಲ್ಲದ ಖುಷಿ ನೀಡುತ್ತಿದೆ ಎಂದು ಇಡೀ ವೃತ್ತಾಂತವನ್ನ ಬಿಚ್ಚಿಟ್ಟರು.

ಇದನ್ನೂ ಓದಿ: ಮೈದಾನದಲ್ಲೇ ಕಿತ್ತಾಡಿಕೊಂಡ ಜಡೇಜಾ-ಇಶಾಂತ್..! ವಿಡಿಯೋ ವೈರಲ್

2008ರಿಂದ 2018ರ ವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಶಸ್ತಿಗಾಗಿ ಹೋರಾಟ ನಡೆಸಿದೆ. ಆದರೆ ಈ ಬಾರಿ ಆರ್‌ಸಿಬಿ ಲಕ್ ಬದಲಾಗಲಿದೆ ಅನ್ನೋ ವಿಶ್ವಾಸ ನನ್ನದು. ಅತ್ಯುತ್ತಮ ಟೂರ್ನಿಯನ್ನ ಎದುರುನೋಡುತ್ತಿದ್ದೇನೆ ಎಂದು ದೇವದತ್ ಸಂತಸವನ್ನ ಸುವರ್ಣ ನ್ಯೂಸ್.ಕಾಂ ಜೊತೆ ಹಂಚಿಕೊಂಡರು.

ಈ ಸಂದರ್ಶನವನ್ನು ಇಂಗ್ಲೀಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ:

click me!