ಆಸ್ಟ್ರೇಲಿಯಾದ ಕಳಂಕಿತ ಕ್ರಿಕೆಟಿಗ, ಮಾಜಿ ನಾಯಕ ಸ್ಟೀವ್ ಸ್ಮಿತ್ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಶನಿವಾರ ತಮ್ಮ ಬಹುಕಾಲದ ಪ್ರೇಯಸಿ ಡ್ಯಾನಿ ವಿಲ್ಲೀಸ್‌ರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಿಡ್ನಿ, (ಸೆ.16): ಆಸ್ಟ್ರೇಲಿಯಾದ ಕಳಂಕಿತ ಕ್ರಿಕೆಟಿಗ, ಮಾಜಿ ನಾಯಕ ಸ್ಟೀವ್ ಸ್ಮಿತ್ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಶನಿವಾರ ತಮ್ಮ ಬಹುಕಾಲದ ಪ್ರೇಯಸಿ ಡ್ಯಾನಿ ವಿಲ್ಲೀಸ್‌ರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸ್ಮಿತ್, ತಮ್ಮ ಮದುವೆ ಫೋಟೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿ ಸಂತಸ ವ್ಯಕ್ತಪಡಿಸಿದ್ದಾರೆ. ‘ನನ್ನ ಆಪ್ತ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇನೆ. ಇಂದು ನನ್ನ ಜೀವನದ ಅದ್ಭುತ ದಿನ’ ಎಂದು ಬರೆದಿದ್ದಾರೆ.
A post shared by Steve Smith (@steve_smith49) on Sep 15, 2018 at 2:06am PDT
ಬಿಗ್ ಬ್ಯಾಷ್ ಲೀಗ್ ವೇಳೆ ಡ್ಯಾನಿ ವಿಲ್ಲೀಸ್‌ರನ್ನು ಭೇಟಿಯಾದ್ದ 29 ವರ್ಷದ ಸ್ಮಿತ್, ಬಳಿಕ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಪ್ರಸಕ್ತ ಋತುವಿನ ಮಾರ್ಚ್‌ನಲ್ಲಿ ಸ್ಮಿತ್, ಬಾಲ್‌ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದು, ಕ್ರಿಕೆಟ್ ಆಸ್ಟ್ರೇಲಿಯಾದಿಂದ ನಿಷೇಧಕ್ಕೊಳಗಾಗಿದ್ದರು.