ಪ್ರತಿಷ್ಟಿತ ಬೆಂಗಳೂರು 10K ಮ್ಯಾರಥಾನ್ ಓಟ ಮುಕ್ತಾಯವಾಗಿದೆ. ಪುರುಷರ ವಿಭಾಗದಲ್ಲಿ ಓಟದಲ್ಲಿ ಇಥೋಪಿಯಾದ ಅನ್ದಮ್ಲಾಕ್ ಬೆಲಿಹು ಹಾಗೂ ಮಹಿಳೆಯರ ವಿಭಾಗದಲ್ಲಿ ಕೀನ್ಯಾದ ಆ್ಯಗ್ನೆಸ್ ತಿರೋಪ್ ಪ್ರಥಮ ಬಹುಮಾನ ಗೆದ್ದುಕೊಂಡಿದ್ದಾರೆ. ಇಲ್ಲಿದೆ ಓಟದ ಸಂಪೂರ್ಣ ವಿವರ.
ಬೆಂಗಳೂರು(ಮೇ.19): ಬೆಂಗಳೂರು 10k ಮ್ಯಾರಥಾನ್ ಓಟ ಅದ್ದೂರಿಯಾಗಿ ಅಂತ್ಯಗೊಂಡಿದೆ. ಈ ಬಾರಿ ಪುರುಷರ ವಿಭಾಗದಲ್ಲಿ ಓಟದಲ್ಲಿ ಇಥೋಪಿಯಾದ ಅನ್ದಮ್ಲಾಕ್ ಬೆಲಿಹು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಕೀನ್ಯಾದ ಆ್ಯಗ್ನೆಸ್ ತಿರೋಪ್ ಗೆದ್ದುಕೊಂಡಿದ್ದಾರೆ. ಬೆಂಗಳೂರು 10K ಮ್ಯಾರಥಾನ್ ಓಟ ಗೆದ್ದವರ ಸಂಪೂರ್ಣ ವಿವರ ಇಲ್ಲಿದೆ.
ಪುರಷರ ವಿಭಾಗ
ಪ್ರಥಮ: ಅನ್ದಮ್ಲಾಕ್ ಬೆಲಿಹು (ಇಥೋಪಿಯಾ)
ದ್ವಿತೀಯ: ಮಂಡೆ ಬುಶೆಂದಿಚ್ (ಉಗಾಂಡ)
ತೃತೀಯ: ಬಿರಾನು ಲೆಗೆಸಿ (ಇಥೋಪಿಯಾ)
ಭಾರತೀಯರ ವಿಭಾಗ
ಪ್ರಥಮ: ಕರಣ್ ಸಿಂಗ್
ದ್ವಿತೀಯ: ಲಕ್ಷ್ಮಣನ್ ಗೋವಿಂದನ್
ತೃತೀಯ: ಅವಿನಾಶ್ ಮುಕುಂದ್ ಸಬ್ಲೆ
ಮಹಿಳೆಯರ ವಿಭಾಗ
ಪ್ರಥಮ: ಆ್ಯಗ್ನೆಸ್ ತಿರೋಪ್ (ಕೀನ್ಯಾ)
ದ್ವಿತೀಯ: ಲೆಟೆಸೆನ್ಬೆಟ್ ಗಿಡೇ (ಇಥೋಪಿಯಾ)
ತೃತೀಯ: ಸೆನ್ಬೆರೇ ಥಿಫೆರಿ (ಇಥೋಪಿಯಾ)
ಭಾರತೀಯರ ವಿಭಾಗ
ಪ್ರಥಮ: ಸಂಜೀವಿನಿ ಜಾಧವ್
ದ್ವಿತೀಯ: ಪಾರುಲ್ ಚೌಧರಿ
ತೃತೀಯ: ಚಿಂತಾ ಯಾದವ್
ಇಂದು(ಮೇ.19) ಬೆಳಗ್ಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 10k ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಲಾಯಿತು. ಬೆಂಗಳೂರು 10k ರಾಯಭಾರಿ ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಪುನೀತ್, 10K ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿರುವುದು ಸಂತಸ ನೀಡಿದೆ. ಈ ರೀತಿಯ ಸ್ಪರ್ಧೆಗಳು ಬೆಂಗಳೂರಿನಲ್ಲಿ ನಡೆಯುತ್ತಿರಬೇಕು ಎಂದರು.
ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.