ವಿಶ್ವಕಪ್ 2019: ವಿಂಡೀಸ್ ಮೀಸಲು ಆಟಗಾರನಾಗಿ ಬ್ರಾವೋ ಆಯ್ಕೆ!

By Web DeskFirst Published 19, May 2019, 10:41 AM IST
Highlights

ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಿಸಿರುವ ವೆಸ್ಟ್ ಇಂಡೀಸ್ ಇದೀಗ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಮೀಸಲು ಆಟಗಾರನ ಪಟ್ಟಿಗೆ ಕೀರನ್ ಪೊಲಾರ್ಡ್ ಸೇರಿಸಿಕೊಂಡ ಬೆನ್ನಲ್ಲೇ ಇದೀಗ ಬ್ರಾವೋಗೂ ಸ್ಥಾನ ನೀಡಲಾಗಿದೆ.

ಆ್ಯಂಟಿಗುವಾ(ಮೇ.19): ವಿಶ್ವಕಪ್ ಟೂರ್ನಿಗೆ ವೆಸ್ಟ್ ಇಂಡೀಸ್ ಭರ್ಜರಿ ತಯಾರಿ ಆರಂಭಿಸಿದೆ. ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ವಿಂಡೀಸ್,  ಬಲಿಷ್ಠ ತಂಡವನ್ನೇ ಆಯ್ಕೆ ಮಾಡಿದೆ. ಇದೀಗ ಟೂರ್ನಿಗೆ ಕೆಲ ದಿನಗಳಿರುವಾಗಲೇ ಮೀಸಲು ಆಟಗಾರರ ಪಟ್ಟಿಗೂ ಸ್ಟಾರ್ ಆಲ್ರೌಂಡರ್ ಆಯ್ಕೆ ಮಾಡಿದೆ. ಐಪಿಎಲ್ ಪ್ರದರ್ಶನದ ಬಳಿಕ ಕೀರನ್ ಪೊಲಾರ್ಡ್‌ಗೆ ಮೀಸಲು ಆಟಗಾರನ ಪಟ್ಟಿಯಲ್ಲಿ ಸ್ಥಾನ ನೀಡಲಾಗಿತ್ತು. ಇದೀಗ ಆಲ್ರೌಂಡರ್ ಡ್ವೇನ್ ಬ್ರಾವೊಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಕೊಹ್ಲಿ ಕಾಲೆಳೆದ ಹಾಡ್ಜ್‌ ವಿರುದ್ಧ ನೆಟ್ಟಿಗರ ಆಕ್ರೋಶ!

ಐಪಿಎಲ್ ಟೂರ್ನಿಯಲ್ಲಿ ಡ್ವೇನ್ ಬ್ರಾವೋ ಅದ್ಬುತ ಪ್ಪದರ್ಶನ ನೀಡಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಲ್ರೌಂಡರ್ ಪ್ರದರ್ಶನ ನೀಡಿದ ಬ್ರಾವೋ ಇದೀಗ ವೆಸ್ಟ್ ಇಂಡೀಸ್ ಮೀಸಲು ಆಟಗಾರ ಪಟ್ಟಿಗೆ ಬ್ರಾವೋ ಸೇರಿಸಿಕೊಳ್ಳಲಾಗಿದೆ.

ವಿಂಡೀಸ್ ತಂಡ:
ಜೇಸನ್ ಹೋಲ್ಡರ್(ನಾಯಕ), ಆ್ಯಂಡ್ರೆ ರಲೆಸ್, ಆ್ಯಶ್ಲೆ ನರ್ಸ್, ಕಾರ್ಲೋಸ್ ಬ್ರಾಥ್ವೈಟ್, ಕ್ರಿಸ್ ಗೇಲ್, ಡರೆನ್ ಬ್ರಾವೋ, ಎವಿನ್ ಲಿವಿಸ್, ಫ್ಯಾಬಿಯನ್ ಅಲೆನ್, ಕೆಮರ್ ರೋಚ್, ನಿಕೋಲಸ್ ಪೂರನ್, ಒಶಾನೆ ಥಾಮಸ್, ಶೈ ಹೋಪ್, ಶ್ಯಾನನ್ ಗೆಬ್ರಿಯಲ್, ಶೆಲ್ಡನ್ ಕಾಟ್ರೆಲ್, ಶಿಮ್ರನ್ ಹೆಟ್ಮೆಯರ್

Last Updated 19, May 2019, 10:41 AM IST