(Video)ಕ್ರಿಕೆಟ್ ಪ್ರಪಂಚಕ್ಕೆ ಹೊಸ ಶಾಟ್ ಎಂಟ್ರಿ!: ವಿನೂತನ ಶಾಟ್ ಪರಿಚಯಿಸಿದ ಲೇಡಿ ಕ್ರಿಕೆಟರ್!

By Suvarna Web DeskFirst Published Jul 14, 2017, 11:35 AM IST
Highlights

ವಿನೂತನ ಕ್ರಿಕೆಟ್​​ ಶಾಟ್​​​ ಅನ್ನ ಕಂಡು ಹಿಡಿದ ಆ ಮಹಿಳಾ ಕ್ರಿಕೆಟರ್​​ ಬೇಱರು ಅಲ್ಲ ಇಂಗ್ಲೆಂಡ್​​​ ತಂಡದ ಆಲ್​ರೌಂಡರ್​​​ ನಟಾಲಿಯಾ ಸಿವರ್. ಮೊನ್ನೆ ನ್ಯೂಜಿಲೆಂಡ್​​​ ವಿರುದ್ಧ ನಡೆದ ಮಹಿಳಾ ವಿಶ್ವಕಪ್​ನ ಲೀಗ್​ ಪಂದ್ಯದಲ್ಲಿ ಸಿವರ್ ಈ ಹೊಡೆತವನ್ನ ಪರಿಚಯಿಸಿದ್ರು. ಅದನ್ನ ನೋಡಿದ ಕ್ರಿಕೆಟ್​​ ಪಂಡಿತರು ಈ ವಿನೂತನ ಹೊಡೆತಕ್ಕೆ ನಟ್'​​ಮೆಗ್​​ ಶಾಟ್​​ ಅಂತ ಹೆಸರಿಟ್ಟಿದ್ದಾರೆ. ಅಷ್ಟಕ್ಕೂ ಆ ಶಾಟ್​​ ಹೇಗಿರುತ್ತೆ ನೀವೇ ನೋಡಿ.

ಕ್ರಿಕೆಟ್​​​ ಎನ್ನುವುದೇ ಒಂದು ರೀತಿ ಪ್ರಯೋಗಾಲಯ. ದಿನಕ್ಕೊಂದು ಹೊಡೆತಗಳು. ದಿನಕ್ಕೊಂದು ಬೌಲಿಂಗ್​​ ಸ್ಟೈಲ್​'ಗಳು ಕ್ರಿಕೆಟ್​​ ಜಗತ್ತಿನಲ್ಲಿ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಆದರೆ ಈ ಪ್ರಯೋಗಗಳು ಕೇವಲ ಪುರುಷ ಕ್ರಿಕೆಟ್​​​'ನಲ್ಲಿ ಮಾತ್ರ ಕಾಣಸಿಗುತ್ತಿತ್ತು. ಅದಕ್ಕೆ ಉತ್ತಮ ಉದಾಹರಣೆ​​ ವೀರೇಂದ್ರ ಸೆಹ್ವಾಗ್'​​ರ ಅಪ್ಪರ್​​​ ಕಟ್, ತಿಲಕರತ್ನೆ ದಿಲ್ಶಾಣ್​ ಅವರ ದಿಲ್​​ಸ್ಕೂಪ್, ಡೇವಿಡ್​ ವಾರ್ನರ್'​​​ರ ಸ್ವಿಚ್​​​ ಹಿಟ್​​​, ಧೋನಿಯ ಹೆಲಿಕಾಪ್ಟರ್​​​ ಶಾಟ್​​​. ಇವೆಲ್ಲಾ ಕ್ರಿಕೆಟ್​​'ಗೆ ಬಂದ ಹೊಸ ಆವಿಶ್ಕಾರದ ಹೊಡೆತಗಳು.

ಇವೆಲ್ಲಾ ಶಾಟ್​​ಗಳಲ್ಲಿ ಒಂದು ಕಾಮನ್​​ ಥಿಂಗ್​ ಇದೆ. ಅದು ಈ ಹೊಡೆತಗಳನ್ನೆಲ್ಲಾ ಪರಿಚಯಿಸಿದ್ದು ಪುರುಷ ಕ್ರಿಕೆಟರ್​​'ಗಳು. ಕ್ರಿಕೆಟ್'ನ್ನು ಆಳುತ್ತಿರುವ ಪುರುಷರು ಹೊಸ ಆವಿಷ್ಕಾರಗಳನ್ನು ಪರಿಚಯಿಸುವುದರಲ್ಲಿ ಎತ್ತಿದ ಕೈ. ಸದ್ಯ ಮತ್ತೊಂದು ಹೊಸ ಶಾಟ್​​​ ಕ್ರಿಕೆಟ್​​​ ಲೋಕಕ್ಕೆ ಎಂಟ್ರಿ ಕೊಟ್ಟಿದೆ. ಆದರೆ ಟ್ವಿಸ್ಟ್​​ ಏನ್​​ ಗೊತ್ತಾ? ಈ ವಿನೂತನ ಹೊಡೆತವನ್ನ ಪರಿಚಯಿಸಿರೋದು ಪುರುಷ ಕ್ರಿಕೆಟರ್​​ ಅಲ್ಲ ಬದಲಿಗೆ ಲೇಡಿ ಕ್ರಿಕೆಟರ್​​​.

ವಿನೂತನ ಹೊಡೆತ ಕಂಡು ಹಿಡಿದ ಆ ಲೇಡಿ ಕ್ರಿಕೆಟರ್​​​ ಯಾರು.?

ವಿನೂತನ ಕ್ರಿಕೆಟ್​​ ಶಾಟ್​​​ ಅನ್ನ ಕಂಡು ಹಿಡಿದ ಆ ಮಹಿಳಾ ಕ್ರಿಕೆಟರ್​​ ಬೇಱರು ಅಲ್ಲ ಇಂಗ್ಲೆಂಡ್​​​ ತಂಡದ ಆಲ್​ರೌಂಡರ್​​​ ನಟಾಲಿಯಾ ಸಿವರ್. ಮೊನ್ನೆ ನ್ಯೂಜಿಲೆಂಡ್​​​ ವಿರುದ್ಧ ನಡೆದ ಮಹಿಳಾ ವಿಶ್ವಕಪ್​ನ ಲೀಗ್​ ಪಂದ್ಯದಲ್ಲಿ ಸಿವರ್ ಈ ಹೊಡೆತವನ್ನ ಪರಿಚಯಿಸಿದ್ರು. ಅದನ್ನ ನೋಡಿದ ಕ್ರಿಕೆಟ್​​ ಪಂಡಿತರು ಈ ವಿನೂತನ ಹೊಡೆತಕ್ಕೆ ನಟ್'​​ಮೆಗ್​​ ಶಾಟ್​​ ಅಂತ ಹೆಸರಿಟ್ಟಿದ್ದಾರೆ. ಅಷ್ಟಕ್ಕೂ ಆ ಶಾಟ್​​ ಹೇಗಿರುತ್ತೆ ನೀವೇ ನೋಡಿ.

If there's such thing as a 'Cruyff turn' in cricket we think Nat Sciver has just pulled it off 😮 pic.twitter.com/RSSBLqdpwS

— The Cricket Paper (@TheCricketPaper) July 12, 2017

ನಟ್​​ಮೆಗ್ ಅಂದ್ರೆ ಏನು.?

ಈ ಅದ್ಭುತ ಹೊಡೆತಕ್ಕೆ ನಟ್​'​ಮೆಗ್​​ ಎಂದು ಹೆಸರು ಇಡಲು ಪ್ರೇರಣೆ ಫುಟ್​​'ಬಾಲ್​​. ಹೌದು ಫುಟ್​​'ಬಾಲ್​ ಆಟದಲ್ಲಿ ಆಟಗಾರ ಬಾಲನ್ನು ವಿರೋಧಿ ಆಟಗಾರನ ಕಾಲ ಮಧ್ಯೆ ಒದ್ದು ಆತನನ್ನ ವಂಚಿಸಿ ಚಾಕ್ಯತೆ ಇಂದ ಬಾಲ್​​ ಅನ್ನ ಗೋಲ್​ ಕಡೆಗೆ ಕರೆದೊಯ್ಯುವುದಕ್ಕೆ ನಟ್​​'ಮೆಗ್​​ ಎಂದು ಕರೆಯುತ್ತಾರೆ.

How good is this? Always been talked about in club cricket nets but never seen it actually played! The "Nat-meg" by Natalie Sciver.... pic.twitter.com/qA0aE32Uac

— Ben McKeith (@benmckeith) July 12, 2017

ಅದೇ ರೀತಿ ನಟಾಲಿಯಾ ಸಿವರ್ ತಮ್ಮ ಎರಡು ಕಾಲುಗಳ ಮಧ್ಯೆ ಬಾಲನ್ನು ಬಾರಿಸಿ ಚಾಕ್ಯತೆ ಇಂದ ಬಾಲನ್ನ ಬೌಂಡರಿ ಗೆರೆಗೆ ದಾಟಿಸಿದ್ದರು. ಹೀಗಾಗಿ ಇದಕ್ಕೆ ನಟ್​'ಮೆಗ್​ ಎಂದು ಹೆಸರು ಬಂತು.

ಒಟ್ಟಿನಲ್ಲಿ ಈ ವಿನೂತನ ಶಾಟ್​​ ಸದ್ಯ ಯುವ ಕ್ರಿಕೆಟಿಗರ ಮನಗೆದ್ದಿದೆ. ಎಲ್ಲರೂ ಈ ಹೊಸ ಹೊಡೆತವನ್ನ ಟ್ರೈ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಪರುಷ ಪ್ರಧಾನವಾದ ಕ್ರಿಕೆಟ್​'ನಲ್ಲಿ ಮಹಿಳೆಯೊಬ್ಬಳ ಈ ಕೊಡುಗೆ ಎಲ್ಲರ ಹೃದಯ ಗೆದ್ದಿದೆ.

 

click me!