ENG vs PAK: ಧೋನಿ ಅನುಕರಿಸಿದ ಆದಿಲ್ ರಶೀದ್-ವಿಡೀಯೋ ವೈರಲ್!

Published : May 20, 2019, 10:50 AM IST
ENG vs PAK: ಧೋನಿ ಅನುಕರಿಸಿದ ಆದಿಲ್ ರಶೀದ್-ವಿಡೀಯೋ ವೈರಲ್!

ಸಾರಾಂಶ

ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ 5ನೇ ಏಕದಿನ ಪಂದ್ಯದಲ್ಲಿ ಸ್ಪಿನ್ನರ್ ಆದಿಲ್ ರಶೀದ್ ಮಾಡಿರುವ ರನೌಟ್ ವಿಡೀಯೋ ವೈರಲ್ ಆಗಿದೆ. ಧೋನಿ ರೀತಿ ರನೌಟ್ ಮಾಡಿರುವ ರಶೀದ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಲೀಡ್ಸ್(ಮೇ.20): ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಧೋನಿ ಅನುಕರಿಸಲಾಗಿದೆ. ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್, ಧೋನಿ ಸ್ಟೈಲ್ ಅನುಕರಿಸಿ ಸುದ್ದಿಯಾಗಿದ್ದಾರೆ. ಧೋನಿ ರೀತಿ ರನೌಟ್ ಮಾಡುವಲ್ಲಿ ಯಶಸ್ವಿಯಾಗಿರುವ ಆದಿಲ್ ರಶೀದ್, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಇದನ್ನೂ ಓದಿ: ಧೋನಿ ಮಾಸ್ಟರ್ ಕ್ಲಾಸ್ ರನೌಟ್‌ಗೆ ಟ್ವಿಟರಿಗರ ಮೆಚ್ಚುಗೆ!

352 ರನ್ ಟಾರ್ಗೆಟ್ ಚೇಸ್ ಮಾಡುತ್ತಿದ್ದ ಪಾಕಿಸ್ತಾನ ತಂಡವನ್ನು ಕಟ್ಟಿಹಾಕಲು 27ನೇ ಓವರ್ ಬೌಲಿಂಗ್ ಮಾಡಲು ಆದಿಲ್ ರಶೀದ್ ಮುಂದಾದರು. ಬಾಬರ್ ಅಜಮ್ ಹಾಗೂ ಪಾಕ್ ನಾಯಕ ಸರ್ಫರಾಜ್ ಖಾನ್ ಜೊತೆಯಾಟ ಸಾಗುತ್ತಿತ್ತು. ಸರ್ಫರಾಜ್ ಲೆಗ್‌ ಲೈಡ್‌ಗೆ ಪುಶ್ ಮಾಡಿ ರನ್ ಓಡಲು ಸಜ್ಜಾದರು. ಅಷ್ಟರಲ್ಲೇ ನಾನ್ ಸ್ಟ್ರೈಕ್‌ನಲ್ಲಿದ್ದ ಬಾಬರ್ ಅರ್ಧ ಕ್ರೀಸ್ ತಲುಪಿಯಾಗಿತ್ತು. ಇತ್ತ ಸರ್ಫರಾಜ್ ಮಾತ್ರ ಕ್ರೀಸ್‌ನಿಂದ ಅಲುಗಾಡಲಿಲ್ಲ. ಹೀಗಾಗಿ ವಾಪಾಸ್ ನಾನ್ ಸ್ಟ್ರೈಕ್ ಕಡೆ ಮತ್ತೆ ಓಡಿದ ಬಾಬರ್ ರನೌಟ್‌ಗೆ ಬಲಿಯಾದರು.

 

 

ಇದನ್ನೂ ಓದಿ: ಧೋನಿಗೆ ಚಾಲೆಂಜ್ - ಯುವಿ ಹೆಲಿಕಾಪ್ಟರ್ ಸಿಕ್ಸರ್ ವೈರಲ್!

ಜೋಸ್ ಬಟ್ಲರ್ ತಕ್ಷಣವೇ ಬಾಲ್ ಕೈಗೆತ್ತಿಕೊಂಡು ರಶೀದ್‍‌ಗೆ ಥ್ರೋ ಮಾಡಿದರು. ಆದರೆ ವಿಕೆಟ್‌ನಿಂದ ದೂರ ಹೋದ ಬಾಲ್ ಪಡೆದ ರಶೀದ್ ಹಿಂತಿರುಗಿ ಧೋನಿ ರೀತಿ ರನೌಟ್ ಮಾಡಿದರು. 2016ರಲ್ಲಿ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ರಾಸ್ ಟೇಲರ್‌ನ್ನು ಧೋನಿ ಇದೇ ರೀತಿ ರನೌಟ್ ಮಾಡಿದ್ದರು. ಇದೀಗ ರಶೀದ್ ಅದ್ಬುತ ರನೌಟ್ ಮಾಡಿ 80 ರನ್ ಸಿಡಿಸಿ ಶತಕದತ್ತ ಮುನ್ನಗ್ಗುತ್ತಿದ್ದ ಬಾಬರ್ ವಿಕೆಟ್ ಕಬಳಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana