
ಮ್ಯಾಂಚೆಸ್ಟರ್(ಜೂ.24): ಆಸ್ಟ್ರೇಲಿಯಾ ವಿರುದ್ದಧ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 1 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಜೋಸ್ ಬಟ್ಲರ್ ಭರ್ಜರಿ ಶತಕದ ನೆರವಿನಿಂದ ಇಂಗ್ಲೆಂಡ್ 48.3 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಮೂಲಕ 5-0 ಅಂತರದಲ್ಲಿ ಸರಣಿಯಲ್ಲಿ ಕ್ಲೀನ್ ಸ್ವೀಪ್ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾ ಮತ್ತೆ ವೈಫಲ್ಯ ಅನುಭವಿಸಿತು. ಆರೋನ್ ಫಿಂಚ್ 22 ರನ್ ಸಿಡಿಸಿ ಔಟಾದರೆ, ಟ್ರಾವಿಸ್ ಹೆಡ್ ಅರ್ಧಶತಕ ಸಿಡಿಸಿ ಆಸರೆಯಾದರು. ಹೆಡ್ 56 ರನ್ ಸಿಡಿಸಿ ಔಟಾದರು. ನಂತರ ಬಂದ ಮಾರ್ಕ್ ಸ್ಟೋಯಿನ್ಸ್, ಶಾನ್ ಮಾರ್ಶ್ ಅಬ್ಬರಿಸಲಿಲ್ಲ. ಆಲೆಕ್ಸ್ ಕ್ಯಾರಿ ಸಿಡಿಸಿದ 44 ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ ಚೇತರಿಸಿಕೊಂಡಿತು.
ನಾಯಕ ಟಿಮ್ ಪೈನ್ ಕೇವಲ 1 ರನ್‌ಗೆ ಔಟಾದರೆ, ಆಸ್ಟಿನ್ ಅಗರ್, ಕೇನ್ ರಿಚರ್ಡ್ಸನ್ ಸೇರಿದಂತೆ ಆಸಿಸ್ ಬ್ಯಾಟ್ಸ್‌ಮನ್‌ಗಳು ಬಹುಬೇಗನೆ ಪೆವಿಲಿಯನ್ ಸೇರಿದರು. ಡಾರ್ಕಿ ಶಾರ್ಟ್ ಅಜೇಯ 47 ರನ್ ಸಿಡಿಸಿದರು. ಈ ಮೂಲಕ ಆಸ್ಟ್ರೇಲಿಯಾ 34.4 ಓವರ್‌ಗಳಲ್ಲಿ 205 ರನ್‌ಗೆ ಆಲೌಟ್ ಆಯಿತು.
206 ರನ್ ಸುಲುಭ ಗುರಿ ಪಡೆದ ಇಂಗ್ಲೆಂಡ್ ಕೂಡ ಆರಂಭದಲ್ಲೇ ಮುಗ್ಗರಿಸಿತು. ಜಾಸನ್ ರಾಯ್, ಅಲೆಕ್ಸ್ ಹೇಲ್ಸ್, ಜಾನಿ ಬೈರಿಸ್ಟೋ ಹಾಗೂ ಜೋ ರೂಟ್ ರನ್ ಗಳಿಸಲಿಲಲ್ಲ. ನಾಯಕ ಇಯಾನ್ ಮಾರ್ಗನ್ ಶೂನ್ಯ ಸುತ್ತಿದರು.
ಜೋಸ್ ಬಟ್ಲರ್ ಅಬ್ಬರದಿಂದ ಇಂಗ್ಲೆಂಡ್ ಚೇತರಿಸಿಕೊಂಡಿತು. ಆದರೆ ಬಟ್ಲರ್‌ಗೆ ಉತ್ತಮ ಸಾಥ್ ಸಿಗಲಿಲ್ಲ. ಏಕಾಂಗಿ ಹೋರಾಟ ನೀಡಿದ ಬಟ್ಲರ್ ಭರ್ಜರಿ ಶತಕ ಸಿಡಿಸಿ ಆಸರೆಯಾದರು. ಬಟ್ಲರ್ ಅಜೇಯ 110 ರನ್ ಸಿಡಿಸಿ ಇಂಗ್ಲೆಂಡ್ ತಂಡಕ್ಕೆ ಗೆಲುವು ತಂದುಕೊಟ್ಟರು. ಇಂಗ್ಲೆಂಡ್ 48.3 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. 5 ಏಕದಿನ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಎಲ್ಲಾ ಪಂದ್ಯ ಗೆಲ್ಲೋ ಮೂಲಕ ಸರಣಿಯನ್ನ ಗೆದ್ದುಕೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.