
ಮುಂಬೈ(ಡಿ.09): ಭಾರತದ ಸ್ಪಿನ್ ಮೋಡಿಗೆ ಮರುಳಾದ ಪ್ರವಾಸಿ ಆಂಗ್ಲರ ಪಡೆ ಎರಡನೇ ದಿನದಾಟದ ಚಹ ವಿರಾಮದ ಅಂತ್ಯದ ವೇಳೆಗೆ 400 ರನ್'ಗಳಿಗೆ ಸರ್ವಪತನ ಕಂಡಿದೆ.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ ಶತಕ ಗಳಿಸಿ ಮಿಂಚಿದ್ದ ಆರಂಭಿಕ ಆಟಗಾರ ಕೇತಾನ್ ಜಿನ್ನಿಂಗ್ಸ್ ತಂಡವನ್ನು ಗೌರವಾನ್ವಿತ ಮೊತ್ತದತ್ತ ತೆಗೆದುಕೊಂಡು ಹೋಗುವ ವಿಶ್ವಾಸ ಮೂಡಿಸಿದ್ದರು. ಆದರೆ ಭಾರತದ ಅಗ್ರ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಸ್ಪಿನ್ ಜಾಲದಲ್ಲಿ ಸಿಲುಕಿದ ಆಂಗ್ಲರ ಪಡೆ 400 ರನ್'ಗಳಿಗೆ ಆಲೌಟ್ ಆಯಿತು.
ಇಂಗ್ಲೆಂಡ್ ಪರ ಕೆಳ ಕ್ರಮಾಂಕದಲ್ಲಿ ಜೋಸ್ ಬಟ್ಲರ್(76) ಹಾಗೂ ಜಾಕ್ ಬೆಲ್(31) ಗಳಿಸಿ ತಂಡವನ್ನು 400ರ ಗಡಿ ಮುಟ್ಟಿಸುವಲ್ಲಿ ಸಫಲರಾದರು.
ಮೋಡಿ ಮಾಡಿದ ಜಡೇಜಾ-ಅಶ್ವಿನ್:
ಭಾರತದ ಪರ ಶಿಸ್ತುಬದ್ಧ ದಾಳಿ ನಡೆಸಿದ ಆಫ್'ಸ್ಪಿನ್ನರ್ ಆರ್. ಅಶ್ವಿನ್ ಆರಂಬದಿಂದಲೂ ಇಂಗ್ಲೆಂಡ್ ಪಡೆಗೆ ಕಂಟಕವಾಗಿ ಪರಿಣಮಿಸಿಬಿಟ್ಟರು. ಅಗ್ರ ಕ್ರಮಾಂಕದ ಐವರು ಬ್ಯಾಟ್ಸ್'ಮನ್'ಗಳೂ ಸೇರಿದಂತೆ ಕೆಳಕ್ರಮಾಂಕದಲ್ಲಿ ಉತ್ತಮ ರನ್ ಕಲೆಹಾಕುತ್ತಿದ್ದ ಜಾಕ್ ಬೆಲ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಅಶ್ವಿನ್ 112 ರನ್ ನೀಡಿ ಪ್ರಮುಖ 6 ವಿಕೆಟ್ ಪಡೆಯುವಲ್ಲಿ ಸಫಲರಾದರು. ಇನ್ನೊಬ್ಬ ಸ್ಪಿನ್ನರ್ ರವೀಂದ್ರ ಜಡೇಜಾ 109 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಒಟ್ಟು 10 ವಿಕೆಟ್'ಗಳನ್ನು ಈ ಇಬ್ಬರು ಬೌಲರ್'ಗಳೇ ಹಂಚಿಕೊಂಡಿದ್ದು ಇನ್ನೊಂದು ವಿಶೇಷ.
ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್ ಮೊದಲ ಇನಿಂಗ್ಸ್: 400/10
ಕೇತಾನ್ ಜಿನ್ನಿಂಗ್ಸ್: 112
ಜೋಸ್ ಬಟ್ಲರ್: 76
ಬೌಲಿಂಗ್:
ಆರ್. ಅಶ್ವಿನ್: 112/6
ಆರ್. ಜಡೇಜಾ: 109/4
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.