ಅಂಪೈರ್'ಗೆ ಬಾಲ್'ನಿಂದ ಹೊಡೆದ ಭುವಿ

By Suvarna Web DeskFirst Published Dec 8, 2016, 4:16 AM IST
Highlights

ಅಶ್ವಿನ್ ಬೌಲಿಂಗ್​'ನಲ್ಲಿ ಕೇಟನ್ ಜೆನ್ನಿಂಗ್ಸ್ ಒಂಟಿ ರನ್ ಕದ್ದರು. ಆ ಬಾಲ್'ನ್ನು ಭುವನೇಶ್ವರ್​ ಕೀಪರ್​ ಬಳಿ ಎಸೆದರು. ಆದರೆ ಅದು ಲೆಗ್ ಅಂಪೈರಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯಾದ ಅಂಪೈರ್ ಪಾಲ್ ರಿಫೆಲ್​ ತೆಲೆಗೆ ಬಡಿಯಿತು.

ಮುಂಬೈ(ಡಿ.08): ಕ್ರಿಕೆಟ್​'ನಲ್ಲಿ ಅಂಪೈರ್​'ಗೆ ಚೆಂಡು ಬಡಿದು ಗಾಯಾಳುವಾಗುವುದು ಸಾಮಾನ್ಯ. ಆದ್ರೆ ಅಂಪೈರ್​'ಗೆ ಆಟಗಾರ ಬಾಲ್ ಹೊಡೆದು ಗಾಯಗೊಳಿಸಿದ್ದು ಅಪರೂಪ.

ಇಂತಹ ಅಪರೂಪದ ಘಟನೆ ಮುಂಬೈ ಟೆಸ್ಟ್​​'ನಲ್ಲಿ ಮೊದಲ ದಿನ ನಡೆಯಿತು. ಅಶ್ವಿನ್ ಬೌಲಿಂಗ್​'ನಲ್ಲಿ ಕೇಟನ್ ಜೆನ್ನಿಂಗ್ಸ್ ಒಂಟಿ ರನ್ ಕದ್ದರು. ಆ ಬಾಲ್'ನ್ನು ಭುವನೇಶ್ವರ್​ ಕೀಪರ್​ ಬಳಿ ಎಸೆದರು. ಆದರೆ ಅದು ಲೆಗ್ ಅಂಪೈರಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯಾದ ಅಂಪೈರ್ ಪಾಲ್ ರಿಫೆಲ್​ ತೆಲೆಗೆ ಬಡಿಯಿತು.

ಅವರು ಸ್ಥಳದಲ್ಲೇ ಕುಸಿದು ಬಿದ್ದರು. ಬಳಿಕ ಅವರು ಮೈದಾನದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. 4ನೇ ಅಂಪೈರ್ ಮೈದಾನಕ್ಕಿಳಿದರು.

 

click me!