ಭಾರತ-ಆಫ್ಘಾನ್ ಟೆಸ್ಟ್'ಗೆ ಕೋಲ್ಕತಾ ಆತಿಥ್ಯ?

By Suvarna Web DeskFirst Published Dec 13, 2017, 4:19 PM IST
Highlights

ಈ ಐತಿಹಾಸಿಕ ಪಂದ್ಯವನ್ನು ಭಾರತದ ಐತಿಹಾಸಿಕ ಕ್ರೀಡಾಂಗಣದಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಇದೇ ವೇಳೆ ಆಫ್ಘಾನಿಸ್ತಾನದ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ನೀಡಲು ಬಿಸಿಸಿಐ ತೆಗೆದುಕೊಂಡ ನಿರ್ಧಾರವನ್ನು ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿ ಸ್ವಾಗತಿಸಿದೆ.

ನವದೆಹಲಿ(ಡಿ.13): 2019ರಲ್ಲಿ ನಡೆಯಲಿರುವ ಭಾರತ-ಆಫ್ಘಾನಿಸ್ತಾನ ಟೆಸ್ಟ್ ಪಂದ್ಯಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್ ಆತಿಥ್ಯ ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.

ಈ ಐತಿಹಾಸಿಕ ಪಂದ್ಯವನ್ನು ಭಾರತದ ಐತಿಹಾಸಿಕ ಕ್ರೀಡಾಂಗಣದಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಇದೇ ವೇಳೆ ಆಫ್ಘಾನಿಸ್ತಾನದ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ನೀಡಲು ಬಿಸಿಸಿಐ ತೆಗೆದುಕೊಂಡ ನಿರ್ಧಾರವನ್ನು ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿ ಸ್ವಾಗತಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ‘ಆಫ್ಘಾನಿಸ್ತಾನವನ್ನು ಟೆಸ್ಟ್ ಕ್ರಿಕೆಟ್‌'ಗೆ ಸ್ವಾಗತಿಸಲು ಬಿಸಿಸಿಐ ತೆಗೆದುಕೊಂಡ ನಿರ್ಧಾರ ಬಹಳ ಸಂತೋಷ ನೀಡಿದೆ. ಹೆಚ್ಚೆಚ್ಚು ತಂಡಗಳು ಟೆಸ್ಟ್ ಆಡುವುದರಿಂದ ಆಟದ ಸೊಬಗು ಹೆಚ್ಚಾಗಲಿದೆ’ ಎಂದು ರಾಯ್ ಹೇಳಿದ್ದಾರೆ.

click me!