
ನವದೆಹಲಿ(ಮಾ.01): ವರ್ಷಗಳ ಕಾಲ ವಿರೋಧಿಸುತ್ತಾ ಬಂದಿದ್ದ ಡಿಆರ್‌ಎಸ್ (ಅಂಪೈರ್ ತೀರ್ಪು ಮೇಲ್ಮನವಿ ಪದ್ಧತಿ) ತಂತ್ರಜ್ಞಾನವನ್ನು ಐಪಿಎಲ್ 11ನೇ ಆವೃತ್ತಿಯಲ್ಲಿ ಬಳಕೆ ಮಾಡಲು, ಬಿಸಿಸಿಐ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ.
2016ರ ಇಂಗ್ಲೆಂಡ್ ಸರಣಿ ವೇಳೆ ಭಾರತದಲ್ಲಿ ನಡೆಯುವ ಪಂದ್ಯಗಳಿಗೆ ಡಿಆರ್‌ಎಸ್ ಬಳಸಲು ಬಿಸಿಸಿಐ ಆರಂಭಿಸಿತ್ತು. ಆ ಬಳಿಕ ಪ್ರತಿ ಸರಣಿಯಲ್ಲೂ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಇದೀಗ ಐಪಿಎಲ್'ನ ಆಕರ್ಷಣೆ ಹೆಚ್ಚಿಸುವ ಹಾಗೂ ತಂಡಗಳಿಗೆ ಅನುಕೂಲ ಮಾಡಿಕೊಳ್ಳುವ ಉದ್ದೇಶದಿಂದ ಬಿಸಿಸಿಐ ಡಿಆರ್‌ಎಸ್ ಬಳಕೆಗೆ ಹಸಿರು ನಿಶಾನೆ ತೋರಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
‘ಡಿಆರ್‌ಎಸ್'ನತ್ತ ಬಿಸಿಸಿಐ ಕೆಲ ವರ್ಷಗಳಿಂದಲೇ ಒಲವು ತೋರುತ್ತಾ ಬಂದಿತ್ತು. ಈ ವರ್ಷ ಐಪಿಎಲ್'ನಲ್ಲಿ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಬೇಕು ಎನ್ನುವ ನಿರ್ಧಾರಕ್ಕೆ ಬರಲಾಗಿದೆ. ನಾವು ಶ್ರೇಷ್ಠ ವ್ಯವಸ್ಥೆಯೊಂದಿಗೆ ಐಪಿಎಲ್ ಆಯೋಜಿಸುತ್ತಿದ್ದೇವೆ. ಹಾಗಿದ್ದಾಗ ಡಿಆರ್‌ಎಸ್ ಯಾಕೆ ಇರಬಾರದು’ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ಅಂಪೈರ್'ಗಳಿಗೆ ತರಬೇತಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಸಿಸಿಐ 10 ಸ್ಥಳೀಯ ಅಂಪೈರ್'ಗಳಿಗೆ ವಿಶೇಷ ಕಾರ್ಯಗಾರವೊಂದನ್ನು ಆಯೋಜಿಸಿತ್ತು. ಈ ವೇಳೆ ಡಿಆರ್‌ಎಸ್ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಕೆ ಮಾಡುವ ಬಗ್ಗೆ ವಿಶೇಷ ತರಬೇತಿ ನೀಡಲಾಯಿತು ಎಂದು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದ ಅಂಪೈರ್'ವೊಬ್ಬರು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.