Venkata Datta Sai Net Worth: ಎರಡು ಬಾರಿ ಒಲಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ವೆಂಕಟ್ ದತ್ತ ಸಾಯಿ ಅವರನ್ನು ವಿವಾಹವಾಗಿದ್ದಾರೆ. ವೆಂಕಟ್ ದತ್ತ ಸಾಯಿ ಒಟ್ಟು ಆಸ್ತಿ ಎಷ್ಟು ಎಂದು ವರದಿಯಾಗಿದೆ. ಐಟಿ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ವೆಂಕಟ್ ಕೆಲಸ ಮಾಡಿದ್ದಾರೆ.
ನವದೆಹಲಿ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ, ಎರಡು ಬಾರಿ ಒಲಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಹೆಜ್ಜೆ ಇರಿಸಿದ್ದಾರೆ. ವೆಂಕಟ್ ದತ್ತ ಸಾಯಿ ಎಂಬವರ ಜೊತೆ ವೈವಾಹಿಕ ಜೀವನಕ್ಕೆ ಪಿ.ವಿ.ಸಿಂಧು ಕಾಲಿಟಿದ್ದಾರೆ. ಹೈದರಾಬಾದ್ ಮೂಲದ ಉದ್ಯಮಿ ವೆಂಕಟ ದತ್ತ ಸಾಯಿ ಪೋಸಿಡೆಕ್ಸ್ ಟೆಕ್ನಾಲಜೀಸ್ ಕಂಪನಿಯಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೆಂಕಟ್ ದತ್ತ ಸಾಯಿ ಒಟ್ಟು ಆಸ್ತಿ ಎಷ್ಟು ಅಂತ ಗೊತ್ತಿದೆಯಾ? ಆ ಕುರಿತ ವರದಿಯೊಂದು ಇಲ್ಲಿದೆ.
ಪಿವಿ ಸಿಂಧು ಮದುವೆಯಾಗಿರುವ ವೆಂಕಟ್ ದತ್ತ ಸಾಯಿ ಹೆಸರು ಐಟಿ ಕ್ಷೇತ್ರದಲ್ಲಿ ಚಿರಪರಿಚಿತ. ವೃತ್ತಿ ಜೀವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ವೆಂಕಟ್, ತಮ್ಮ ಕಾರ್ಯಕೌಶಲ್ಯಗಳಿಂದಲೇ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಕೆಲ ವರದಿಗಳ ಪ್ರಕಾರ, ವೆಂಟಕ್ ದತ್ತ ಸಾಯಿ ಅವರ ಒಟ್ಟು ಆಸ್ತಿ 150 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಐಟಿ ಜೊತೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ವೆಂಕಟ್ ದತ್ತ ಸಾಯಿ ಹೊಂದಿದ್ದಾರೆ.
undefined
ವೆಂಕಟ್ ಸಾಯಿ ಕೇವಲ ಐಟಿ ಕ್ಷೇತ್ರ ಮಾತ್ರವಲ್ಲದೇ ಕ್ರೀಡಾ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. JSW ಕಂಪನಿಯೊಂದಿಗೆ ಕೆಲಸ ಮಾಡುವ ಸಂದರ್ಭದಲ್ಲಿ ಐಪಿಎಲ್‌ನ ದೆಹಲಿ ಕ್ಯಾಪಿಟಲ್ಸ್ ತಂಡದ ನಿರ್ವಹಣೆಯ ಜವಾಬ್ದಾರಿ ವೆಂಕಟ್ ಅವರ ಮೇಲಿತ್ತು. ಐಪಿಎಲ್ ತಂಡದ ಜೊತೆಗೆ ಕೆಲಸ ಮಾಡಿದ ಅನುಭವ ತಮ್ಮ ವೃತ್ತಿ ಜೀವನದಲ್ಲಿ ತುಂಬಾ ವಿಶೇವಾಗಿರುತ್ತದೆ ಎಂದು ವೆಂಕಟ್ ಅವರೇ ಹೇಳಿಕೊಂಡಿದ್ದಾರೆ.
ಬಿಬಿಎ ವ್ಯಾಸಂಗದಲ್ಲಿ ಹಣಕಾಸು ಮತ್ತು ಅರ್ಥಶಾಸ್ತ್ರ ಓದಿದ್ದರಿಂದ ಐಪಿಎಲ್ ತಂಡವೊಂದರ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಯ್ತು. ಕ್ರೀಡೆ ಮತ್ತು ತಂತ್ರಜ್ಞಾನದ ಮೇಲಿನ ಪ್ರೀತಿ ಅವರ ವ್ಯಕ್ತಿತ್ವವನ್ನು ಹೆಚ್ಚು ವಿಶೇಷಗೊಳಿಸುತ್ತದೆ ಎಂದು ವೆಂಕಟ್ ದತ್ತ ಸಾಯಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ: ಪಿ.ವಿ. ಸಿಂಧು vs ಸಾನಿಯಾ ಮಿರ್ಜಾ: ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?
ವೆಂಕಟ್ ದತ್ತ ಸಾಯಿ ಐಟಿ ಕ್ಷೇತ್ರದಲ್ಲಿ ಪರಿಣಿತರಾಗಿದ್ದು, ಹಣಕಾಸಿನ ವಿಷಯದಲ್ಲಿಯೂ ಜ್ಞಾನ ಹೊಂದಿದ್ದಾರೆ. ವೆಂಕಟ್ ದತ್ತ ಸಾಯಿ ಲಿಂಕ್ಡ್ ಇನ್ ಪ್ರೊಫೈಲ್ ಪ್ರಕಾರ, ಭಾರತದ ಪ್ರಮುಖ ಬ್ಯಾಂಕ್‌ಗಳಾಗಿರುವ ಹೆಚ್‌ಡಿಎಫ್‌ಸಿ ಮತ್ತು ಐಸಿಐಸಿಐಗೆ ಪ್ರಮುಖ ತಾಂತ್ರಿಕ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ. ಹಣಕಾಸಿನ ಪ್ರಕ್ರಿಯೆಗಳನ್ನು ಸುಧಾರಿಸುವುದು ಮತ್ತು ಸಂಕೀರ್ಣ ಸಮಸ್ಯೆಗಳಿಗೆ ಸರಳ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುವುದು ವೆಂಕಟ್ ಅವರ ಪ್ರಮುಖ ಕೆಲಸವಾಗಿದೆ.
ವೆಂಕಟ್ ದತ್ತ ಸಾಯಿ ಶಿಕ್ಷಣ
2018 ರಲ್ಲಿ ಪುಣೆಯ ಫ್ಲೇಮ್ ವಿಶ್ವವಿದ್ಯಾನಿಲಯದಿಂದ ಅಕೌಂಟಿಂಗ್ ಮತ್ತು ಫೈನಾನ್ಸ್‌ನಲ್ಲಿ ಬಿಬಿಎ, ಬೆಂಗಳೂರಿನ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿಯಿಂದ ಡೇಟಾ ಸೈನ್ಸ್ ಮತ್ತು ಮೆಷಿನ್ ಲರ್ನಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಇದಲ್ಲದೆ ಲಿಬರಲ್ ಆರ್ಟ್ಸ್ ಮತ್ತು ಸೈನ್ಸಸ್‌ನಲ್ಲಿ ಡಿಪ್ಲೊಮಾವನ್ನು ಪಡೆದಿದ್ದಾರೆ.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಿ.ವಿ ಸಿಂಧು; ಇಲ್ಲಿವೆ ಮದುವೆ ಫೋಟೋ ಝಲಕ್
Pleased to have attended the wedding ceremony of our Badminton Champion Olympian PV Sindhu with Venkatta Datta Sai in Udaipur last evening and conveyed my wishes & blessings to the couple for their new life ahead. pic.twitter.com/KlE0BFjr3w
— 𝐍𝐞𝐞𝐫𝐚𝐣 𝐒𝐢𝐧𝐠𝐡 (@NeerajSinghSays)Newest bride in town…Gorgeous Mrs. PV Sindhu! ♥️
She’s sooo pretty! 🥹😍 pic.twitter.com/BnwkyZpUM1