ನೋವಾಕ್ ಜೋಕೋವಿಚ್ ನೇತೃತ್ವದ ಸರ್ಬಿಯಾ ತಂಡವು 2-1 ಅಂತರದಲ್ಲಿ ಸ್ಪೇನ್ ತಂಡವನ್ನು ಮಣಿಸಿದೆ. ಈ ಮೂಲಕ ಚೊಚ್ಚಲ ಎಟಿಪಿ ಕಪ್ ಜಯಿಸುವಲ್ಲಿ ಸರ್ಬಿಯಾ ತಂಡ ಯಶಸ್ವಿಯಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ಸಿಡ್ನಿ(ಜ.13): ಉದ್ಘಾಟನಾ ಆವೃತ್ತಿಯ ಎಟಿಪಿ ಕಪ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ರಾಫೆಲ್ ನಡಾಲ್ ನೇತೃತ್ವದ ಸ್ಪೇನ್ ತಂಡವನ್ನು 2-1ರಿಂದ ಸೋಲಿಸಿದ ನೋವಾಕ್ ಜೋಕೋವಿಚ್‌ರ ಸರ್ಬಿಯಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಡೇವಿಸ್ ಕಪ್ ರೀತಿ ಹೊಸ ಟೆನಿಸ್ ಟೂರ್ನಿ
🇷🇸 HAVE WON IT!!! 🏆 pic.twitter.com/qCUj4DsS9T
— ATP Tour (@atptour)
undefined
ಫೈನಲ್ ಮುಖಾಮುಖಿಯ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವ ನಂ.10 ಸ್ಪೇನ್‌ನ ರೊಬೆರ್ಟೊ ಬಟಿಸ್ಟಾ, ದುಸಾನ್ ಲಜೊವಿಚ್ ವಿರುದ್ಧ 7-5, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.
Welcome to the HISTORY books!
Hoist that 🏆 high, 🇷🇸 pic.twitter.com/f81tbbCQdL
ಇನ್ನು 2ನೇ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವ ನಂ.1 ಜೋಕೋವಿಚ್ ಹಾಗೂ ವಿಶ್ವ ನಂ.2 ನಡಾಲ್ ಎದುರಾದರು. ಭಾರೀ ರೋಚಕತೆಯಿಂದ ಕೂಡಿದ್ದ ಪಂದ್ಯವನ್ನು ಜೋಕೋವಿಚ್ 6-2, 7-6(7/4) ಸೆಟ್‌ಗಳಲ್ಲಿ ಗೆದ್ದರು. ನಂತರ ಡಬಲ್ಸ್ ಪಂದ್ಯದಲ್ಲಿ ಜೋಕೋವಿಚ್ ಹಾಗೂ ವಿಕ್ಟರ್ ಟ್ರೊಯ್ಕಿ ಜೋಡಿ ಫೆಲಿಸಿಯಾನೋ ಲೊಪೆಜ್ ಹಾಗೂ ಪಾಬ್ಲೊ ಕರ್ರೆನೊ ವಿರುದ್ಧ 6-3, 6-4 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿ, ಟ್ರೋಫಿ ಎತ್ತಿಹಿಡಿಯಿತು.
Congratulations 🇷🇸 , the inaugural champions! 🏆 pic.twitter.com/WGDo1r1Yos
— ATPCup (@ATPCup)