
ಕೊಲಂಬೋ[ಆ.10]: ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟಿ20 ಪಂದ್ಯಕ್ಕೆ 15 ಆಟಗಾರರನ್ನೊಳಗೊಂಡ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದ್ದು, ಕ್ರೀಡಾ ಸ್ಪೂರ್ತಿ ಉಲ್ಲಂಘಿಸಿ ಐಸಿಸಿಯಿಂದ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಲಂಕಾ ತಂಡದ ನಾಯಕ ದಿನೇಶ್ ಚಾಂಡಿಮಲ್ ತಂಡಕ್ಕೆ ಕಮ್’ಬ್ಯಾಕ್ ಮಾಡಿದ್ದಾರೆ.
ವೆಸ್ಟ್’ಇಂಡಿಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ದಿನೇಶ್ ಚಾಂಡಿಮಲ್ ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದಿದ್ದರು. ಐಸಿಸಿಯ ಲೆವೆಲ್ ಮೂರನೇ ಹಂತದ ತಪ್ಪು ಮಾಡಿದ್ದರಿಂದ ಎರಡು ಟೆಸ್ಟ್ ಹಾಗೂ 4 ಏಕದಿನ ಪಂದ್ಯಗಳ ಮಟ್ಟಿಗೆ ಐಸಿಸಿ ಚಾಂಡಿಮಲ್’ಗೆ ನಿಷೇಧ ಹೇರಿತ್ತು. ದಿನೇಶ್ ಚಾಂಡಿಮಲ್ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲೆರಡು ಟೆಸ್ಟ್ ಹಾಗೂ ನಾಲ್ಕು ಏಕದಿನ ಪಂದ್ಯಗಳಿಂದ ಹೊರಬಿದ್ದಿದ್ದರು.
ಇನ್ನು ಲಸಿತ್ ಮಾಲಿಂಗ ಮತ್ತೊಮ್ಮೆ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಕೆನಡಾದಲ್ಲಿ ನಡೆದ ಗ್ಲೋಬಲ್ ಟಿ20 ಲೀಗ್’ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಮಾಲಿಂಗ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಆದರೂ ಆಯ್ಕೆಗಾರರ ಮನ ಗೆಲ್ಲಲು ಮಾಲಿಂಗ ಯಶಸ್ವಿಯಾಗಿಲ್ಲ. ಮಾಲಿಂಗ ಕಳೆದ ವರ್ಷದ ಸೆಪ್ಟೆಂಬರ್’ನಲ್ಲಿ ಭಾರತ ವಿರುದ್ಧ ಕೊನೆಯ ಬಾರಿಗೆ ಅಂತರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದರು. ಶ್ರೀಲಂಕಾ-ದಕ್ಷಿಣ ಆಫ್ರಿಕಾ ನಡುವಿನ ಏಕೈಕ ಟಿ20 ಪಂದ್ಯವು ಆಗಸ್ಟ್ 14ರಂದು ಕೊಲಂಬೋದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ.
ಶ್ರೀಲಂಕಾ ತಂಡ ಹೀಗಿದೆ:
ಆ್ಯಂಜಲೋ ಮ್ಯಾಥ್ಯೂಸ್[ನಾಯಕ], ದಿನೇಶ್ ಚಾಂಡಿಮಲ್, ಅಕಿಲಾ ಧನಂಜಯ, ಧನಂಜಯ ಡಿಸಿಲ್ವಾ, ಬಿನುರಾ ಫರ್ನಾಂಡೋ, ಶೆಹಾನ್ ಜಯಸೂರ್ಯ, ಲಹಿರೂ ಕುಮಾರ, ಶೆಹಾನ್ ಮದುಶೆನ್ಕಾ, ಕುಸಾಲ್ ಮೆಂಡಿಸ್, ಕುಸಾಲ್ ಪೆರೆರಾ[ವಿಕೆಟ್ ಕೀಪರ್], ತಿಸಾರ ಪೆರೆರಾ, ಲಕ್ಷನ್ ಸಂದಕನ್, ದಶೂನ್ ಶೆನಕಾ, ಉಫುಲ್ ತರಂಗಾ, ಜೆಫ್ರಿ ವೆಂಡರ್ಸೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.