ಚಿಯರ್'ಗರ್ಲ್ಸ್ ಬೇಡ ರಾಮಭಜನೆ ಹಾಕಿ’

By Suvarna Web DeskFirst Published Mar 26, 2017, 2:47 PM IST
Highlights

ಐಪಿಎಲ್ ಪಂದ್ಯಗಳಿಗೆ ಮನರಂಜನ ತೆರಿಗೆ ವಿನಾಯಿತಿ ನೀಡದಿರಲು ನಿರ್ಧರಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ವಿರುದ್ಧ ದಿಗ್ವಿಜಯ್ ವ್ಯಂಗ್ಯವಾಡಿದ್ದಾರೆ.

ಇಂದೋರ್(ಮಾ.26): ಐಪಿಎಲ್ ಪಂದ್ಯಗಳಲ್ಲಿ ಬೌಂಡರಿ, ಸಿಕ್ಸರ್ ಹಾಗೂ ವಿಕೆಟ್ ಪತನದ ವೇಳೆ ಚಿಯರ್‌ ಗರ್ಲ್ಸ್ ನೃತ್ಯದ ಬದಲು ಕ್ರೀಡಾಂಗಣದಲ್ಲಿ ರಾಮಭಜನೆಯನ್ನು ಹಾಕಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಆಯೋಜಕರಿಗೆ ಸಲಹೆ ನೀಡಿದ್ದಾರೆ.

ಐಪಿಎಲ್ ಪಂದ್ಯಗಳಿಗೆ ಮನರಂಜನ ತೆರಿಗೆ ವಿನಾಯಿತಿ ನೀಡದಿರಲು ನಿರ್ಧರಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ವಿರುದ್ಧ ದಿಗ್ವಿಜಯ್ ವ್ಯಂಗ್ಯವಾಡಿದ್ದಾರೆ. ‘‘ಐಪಿಎಲ್ ಪಂದ್ಯಗಳೆಂದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಪ್ರೇಕ್ಷಕರು ಬರುವುದೇ ಮನರಂಜನೆಗಾಗಿ. ಹೀಗಿರುವಾಗ ಜನಪ್ರಿಯ ಟೂರ್ನಿಗೆ ತೆರಿಗೆ ವಿನಾಯಿತಿ ನೀಡಲು ಏನು ಸಮಸ್ಯೆ. ಇದರಿಂದಾಗಿಯೇ ನಾನು ಚಿಯರ್‌ ಗರ್ಲ್ಸ್ ಬದಲಿಗೆ ಮೈದಾನದಲ್ಲಿ ರಾಮಭಜನೆ ಹಾಕಲು ಸಲಹೆ ನೀಡುತ್ತಿದ್ದೇನೆ’’ ಎಂದು ದಿಗ್ವಿಜಯ್ ಹೇಳಿದ್ದಾರೆ.

ಇಲ್ಲಿನ ಹೋಲ್ಕರ್ ಮೈದಾನದಲ್ಲಿ ಏಪ್ರಿಲ್ 8, 10 ಮತ್ತು 20ರಂದು ಮೂರು ಐಪಿಎಲ್ ಪಂದ್ಯಗಳು ನಡೆಯಲಿವೆ.

click me!