ಕೊಹ್ಲಿ ದಾಖಲೆಯಾಟ,ರೋಹಿತ್ ಶತಕದ ಸೊಬಗು: ಸೋಲಿನ ಭೀತಿಯಲ್ಲಿ ಶ್ರೀಲಂಕಾ

Published : Nov 26, 2017, 07:49 PM ISTUpdated : Apr 11, 2018, 12:42 PM IST
ಕೊಹ್ಲಿ ದಾಖಲೆಯಾಟ,ರೋಹಿತ್ ಶತಕದ ಸೊಬಗು: ಸೋಲಿನ ಭೀತಿಯಲ್ಲಿ ಶ್ರೀಲಂಕಾ

ಸಾರಾಂಶ

ಆರಂಭದ ಕೆಲ ಓವರ'ಗಳ ನಂತರ ತಂಡದ ಮೊತ್ತ 399 ರನ್ ಆಗಿದ್ದಾಗ ಪೂಜಾರ 143 ರನ್ ಗಳಿಸಿ ಔಟಾದರು.362 ಎಸೆತಗಳ ಅವರ ಆಟದಲ್ಲಿ 14 ಬೌಂಡರಿಗಳಿದ್ದವು. ನಂತರ ಬಂದ ರಹಾನೆ 2 ರನ್ ಗಳಿಸಿ ಪೆವಿಲಿಯನ್'ಗೆ ತೆರಳಿದರು. ಏಕದಿನ ಪಂದ್ಯದ ಸ್ಫೋಟಕ ಆಟಗಾರ ರೋಹಿತ್ ಶರ್ಮಾ ಅವರ ಜೊತೆಗೂಡಿ 173 ರನ್'ಗಳನ್ನು ಸಿಡಿಸಿದರು.

ನಾಗ್ಪುರ(ನ.26): ಕೊಹ್ಲಿ ದಾಖಲೆಯ ದ್ವಿಶತಕ, ರೋಹಿತ್ ಶತಕದ ಕನಲಿ ಹೋದ ಶ್ರೀಲಂಕಾ ಆಟಗಾರರು ಸೋಲಿನ ಭೀತಿಗೆ ಸಿಕ್ಕಿದ್ದಾರೆ.

2ನೇ ದಿನದಲ್ಲಿ ಅರ್ಧ ಶತಕ ಗಳಿಸಿ ಅಜೇಯರಾಗಿದ್ದ ನಾಯಕ ವಿರಾಟ್ ಕೊಹ್ಲಿ ಇಂದು ದ್ವಿಶತಕ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನೂತನ ದಾಖಲೆ ನಿರ್ಮಿಸಿದರು. ರೋಹಿತ್ ಶರ್ಮಾ ಅವರ ಜೊತೆಯಾಟದೊಂದಿಗೆ ಸೇರಿಕೊಂಡ ವಿರಾಟ್ ತಮ್ಮ ವೃತ್ತಿ ಜೀವನದ 5ನೇ ದ್ವಿಶಕ ಬಾರಿಸಿದರು. 267 ಎಸೆತಗಳನ್ನು ಎದುರಿಸಿದ ಅವರು 17 ಬೌಂಡರಿ, 2 ಸಿಕ್ಸರ್'ನೊಂದಿಗೆ 213 ರನ್ ಸಿಡಿಸಿದರು.    

3ನೇ ದಿನದಂತ್ಯಕ್ಕೆ ಪಂದ್ಯದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿರುವ ಟೀಂ ಇಂಡಿಯಾ  ನಾಳೆಯೇ ಗೆಲುವು ಸಾಧಿಸುವ ತವಕದಲ್ಲಿದೆ. ಮೊದಲ ಇನ್ನಿಂಗ್ಸ್ನಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 610 ರನ್ ಗಳಿಸಿ 405 ರನ್'ಗಳ ಮುನ್ನಡೆಯೊಂದಿಗೆ  ಡಿಕ್ಲೇರ್ ಮಾಡಿಕೊಂಡಿತು.ಶ್ರೀಲಂಕಾ ತಂಡ 2ನೇ ಇನ್ನಿಂಗ್ಸ್‌ನಲ್ಲಿ 22 ರನ್‌ಗೆ 1 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಲಂಕಾ ಪಡೆಗೆ ಇನ್ನೂ 394 ರನ್‌ಗಳ ಅಗತ್ಯವಿದೆ.

ಆರಂಭದ ಕೆಲ ಓವರ'ಗಳ ನಂತರ ತಂಡದ ಮೊತ್ತ 399 ರನ್ ಆಗಿದ್ದಾಗ ಪೂಜಾರ 143 ರನ್ ಗಳಿಸಿ ಔಟಾದರು.362 ಎಸೆತಗಳ ಅವರ ಆಟದಲ್ಲಿ 14 ಬೌಂಡರಿಗಳಿದ್ದವು. ನಂತರ ಬಂದ ರಹಾನೆ 2 ರನ್ ಗಳಿಸಿ ಪೆವಿಲಿಯನ್'ಗೆ ತೆರಳಿದರು. ಏಕದಿನ ಪಂದ್ಯದ ಸ್ಫೋಟಕ ಆಟಗಾರ ರೋಹಿತ್ ಶರ್ಮಾ ಅವರ ಜೊತೆಗೂಡಿ 173 ರನ್'ಗಳನ್ನು ಸಿಡಿಸಿದರು. 160 ಎಸತಗಳಲ್ಲಿ 8 ಬೌಂಡರಿ, 1 ಸಿಕ್ಸ್'ರ್'ನೊಂದಿಗೆ ಶತಕದ(102) ಮಿಂಚು ಹರಿಸಿ ಅಜೇಯರಾಗಿ ಉಳಿದರು. ಶ್ರೀಲಂಕಾ ಪರ ಪೆರೇರ 202/3 ವಿಕೇಟ್ ಕಿತ್ತರು.

ಶ್ರೀಲಂಕಾದ ಮೊದಲ ವಿಕೇಟ್ ಪತನ  

405 ರನ್'ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್' ಆರಂಭಿಸಿದ ಲಂಕಾ ಪಡೆ ಮೊದಲ ಓವರ್'ನಲ್ಲಿಯೇ ಆರಂಭಿಕ ಆಟಗಾರ ಸಮರ ವಿಕ್ರಮ ಅವರ ವಿಕೇಟ್ ಕಳೆದುಕೊಂಡಿದೆ. ವೇಗಿ ಇಶಾಂತ್ ಶರ್ಮಾಗೆ ಸಮರ ವಿಕ್ರಮ ಬೌಲ್ಡ್ ಆದರು.  ಕರುಣಾ'ರತ್ನೆ ಹಾಗೂ ತಿರಮ್ಮನೆ ಅಜೇಯರಾಗುಳಿದಿದ್ದಾರೆ.

 

ಸ್ಕೋರ್ ವಿವರ

ಭಾರತ ಮೊದಲ ಇನ್ನಿಂಗ್ಸ್ 176.1 ಓವರ್'ಗಳಲ್ಲಿ 610/6 ಡಿಕ್ಲೇರ್ಡ್

(ಕೊಹ್ಲಿ 213, ಪೂಜಾರ 143,ಎಂ.ವಿಜಯ್ 128, ರೋಹಿತ್ ಅಜೇಯ 102)

ಶ್ರೀಲಂಕಾ  205/10 ಹಾಗೂ 9 ಓವರ್'ಗಳಲ್ಲಿ 21/1

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?