ಧೋನಿಗೆ ದಾಖಲೆಯ ಪಂದ್ಯ: 150 ಸ್ಟಂಪ್ ಔಟ್ ಮಾಡಿದ ಏಕೈಕ ಕೀಪರ್

Published : Oct 23, 2016, 10:11 PM ISTUpdated : Apr 11, 2018, 12:40 PM IST
ಧೋನಿಗೆ ದಾಖಲೆಯ ಪಂದ್ಯ: 150 ಸ್ಟಂಪ್ ಔಟ್ ಮಾಡಿದ ಏಕೈಕ ಕೀಪರ್

ಸಾರಾಂಶ

ನಿನ್ನೆ 3 ಭರ್ಜರಿ ಸಿಕ್ಸ್​​​ ಭಾರಿಸುವ ಮೂಲಕ, ಟೀಮ್ ಇಂಡಿಯಾದ ಮಾಜಿ ನಾಯಕ ಸಚಿನ್​ ತೆಂಡೂಲ್ಕರ್ ರವರ  ದಾಖಲೆಯನ್ನು ಧೋನಿ  ಮುರಿದರು.  ಭಾರತದ ಪರ 195 ಸಿಕ್ಸರ್​ ಸಿಡಿಸಿರುವ ಸಚಿನ್​, ಏಕದಿನ ಕ್ರಿಕೆಟ್​'ನಲ್ಲಿ​ ಅತಿಹೆಚ್ಚು ಸಿಕ್ಸ್​ ಹೊಡೆದಿರುವ ಭಾರತೀಯನೆಂಬ ದಾಖಲೆ  ಹೊಂದಿದ್ದರು. ಆದರೆ  ಧೋನಿ ನಿನ್ನೆಯ ಪಂದ್ಯದಲ್ಲಿ 196ನೇ ಸಿಕ್ಸ್​​​ ಬಾರಿಸುವ ಮೂಲಕ  ಸಚಿನ್​ ದಾಖಲೆಯನ್ನ  ಮುರಿದರು. ಧೋನಿ ಇನ್ನೂ 4 ಸಿಕ್ಸರ್​​​ ಸಿಡಿಸಿದರೆ ಏಕದಿನ ಕ್ರಿಕೆಟ್​​​'ನಲ್ಲಿ ಅತೀ ಹೆಚ್ಚು ಸಿಕ್ಸ್​​​ ಬಾರಿಸಿದ ಪಟ್ಟಿಯಲ್ಲಿ ನ್ಯೂಜಿಲೆಂಡ್​​​'ನ ಬ್ರೆಂಡನ್​​​​ ಮೆಕ್ಲಮ್​​​​​'ರನ್ನ ಹಿಂದಿಕ್ಕಿ 4ನೇ ಸ್ಥಾನಕ್ಕೇರಲಿದ್ದಾರೆ. ಹೀಗೆ ಮುಂದುವರೆದರೆ ಹಲವು ದಾಖಲೆ ಬರೆಯಲಿದ್ದಾರೆ.

ಚಂಡೀಗಡ(ಅ.24): ನ್ಯೂಜಿಲೆಂಡ್​​​ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಆಟದ ಮೂಲಕ ಧೋನಿ ಮಿಂಚಿದರು. ಮಹಿ ಹಲವು ದಾಖಲೆಗಳಿಗೆ ಪಾತ್ರರಾದರು. ಯಾವೆಲ್ಲ ದಾಖಲೆಗಳನ್ನು ಧೋನಿ ಮುರಿದಿದ್ದಾರೆ  ಇಲ್ಲಿದೆ ಡಿಟೇಲ್ಸ್.

ನ್ಯೂಜಿಲೆಂಡ್​​​ ವಿರುದ್ಧದ ಪಂದ್ಯ ಧೋನಿಗೆ ದಾಖಲೆಯ ಪಂದ್ಯವಾಗಿತ್ತು. ಸಚಿನ್​​​, ದ್ರಾವಿಡ್​​​ರ ದಾಖಲೆಗಳನ್ನು ಧೋನಿ ಮುರಿಯುವುದರೊಂದಿಗೆ, ಹಲವು ದಾಖಲೆಗಳನ್ನು ಮಹಿ   ತಮ್ಮದಾಗಿಸಿಕೊಂಡರು.

ಸಚಿನ್​ ದಾಖಲೆ ಮುರಿದ ಮಹಿ

ನಿನ್ನೆ 3 ಭರ್ಜರಿ ಸಿಕ್ಸ್​​​ ಭಾರಿಸುವ ಮೂಲಕ, ಟೀಮ್ ಇಂಡಿಯಾದ ಮಾಜಿ ನಾಯಕ ಸಚಿನ್​ ತೆಂಡೂಲ್ಕರ್ ರವರ  ದಾಖಲೆಯನ್ನು ಧೋನಿ  ಮುರಿದರು.  ಭಾರತದ ಪರ 195 ಸಿಕ್ಸರ್​ ಸಿಡಿಸಿರುವ ಸಚಿನ್​, ಏಕದಿನ ಕ್ರಿಕೆಟ್​'ನಲ್ಲಿ​ ಅತಿಹೆಚ್ಚು ಸಿಕ್ಸ್​ ಹೊಡೆದಿರುವ ಭಾರತೀಯನೆಂಬ ದಾಖಲೆ  ಹೊಂದಿದ್ದರು. ಆದರೆ  ಧೋನಿ ನಿನ್ನೆಯ ಪಂದ್ಯದಲ್ಲಿ 196ನೇ ಸಿಕ್ಸ್​​​ ಬಾರಿಸುವ ಮೂಲಕ  ಸಚಿನ್​ ದಾಖಲೆಯನ್ನ  ಮುರಿದರು.

ಧೋನಿ ಇನ್ನೂ 4 ಸಿಕ್ಸರ್​​​ ಸಿಡಿಸಿದರೆ ಏಕದಿನ ಕ್ರಿಕೆಟ್​​​'ನಲ್ಲಿ ಅತೀ ಹೆಚ್ಚು ಸಿಕ್ಸ್​​​ ಬಾರಿಸಿದ ಪಟ್ಟಿಯಲ್ಲಿ ನ್ಯೂಜಿಲೆಂಡ್​​​'ನ ಬ್ರೆಂಡನ್​​​​ ಮೆಕ್ಲಮ್​​​​​'ರನ್ನ ಹಿಂದಿಕ್ಕಿ 4ನೇ ಸ್ಥಾನಕ್ಕೇರಲಿದ್ದಾರೆ. ಹೀಗೆ ಮುಂದುವರೆದರೆ ಹಲವು ದಾಖಲೆ ಬರೆಯಲಿದ್ದಾರೆ.

9 ಸಾವಿರ ಕ್ಲಬ್​ಗೆ ಸೇರಿದ  ಧೋನಿ

ಏಕದಿನ ಕ್ರಿಕೆಟ್​​'ನಲ್ಲಿ  9 ಸಾವಿರ ರನ್​ಗಳಿಸಿದ ಹಿರಿಮೆಗೆ ಧೋನಿ ಪಾತ್ರರಾದರು.  ಸಚಿನ್, ಗಂಗೂಲಿ,  ದ್ರಾವಿಡ್​ ಮತ್ತು ಮೊಹ್ಮದ್​ ಅಜರುದ್ದೀನ್ ನಂತರ ಈ ಸಾಧನೆ ಮಾಡಿದ ಆಟಗಾರ ಎನಿಸಿಕೊಂಡರು. ಏಕದಿನ ಕ್ರಿಕೆಟ್​ನಲ್ಲಿ ಭಾರತದ ಪರ 9 ಸಾವಿರ ರನ್​ಗಳಿಸಿದ ಐದನೇ ಭಾರತೀಯನೆಂಬ ಶ್ರೇಯಸ್ಸಿಗೆ ಧೋನಿ ಪಾತ್ರರಾದರು. 9 ಸಾವಿರ ರನ್​ ಪೂರೈಸಿದ ಧೋನಿ ಈ ಸಾಧನೆ ಮಾಡಿದ 3ನೇ ಹಾಗೂ ಭಾರತದ ಮೊದಲ ವಿಕೆಟ್​​​ ಕೀಪರ್​​​ ಎನ್ನಿಸಿಕೊಂಡರು.

150 ಸ್ಟಂಪ್​​​ ಔಟ್​​​ ಮಾಡಿದ ಮೊದಲ ಕೀಪರ್​​

ಅಂತಾರಾಷ್ಟ್ರೀಯ ಕ್ರಿಕೆಟ್‌'ನಲ್ಲಿ ಧೋನಿ 150 ಸ್ಟಂಪ್‌‌‌ ಔಟ್‌ ಮಾಡಿದ ವಿಶ್ವದ ಏಕೈಕ ವಿಕೆಟ್‌ ಕೀಪರ್‌ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅಮಿತ್ ಮಿಶ್ರಾ ಎಸೆದ 29ನೇ ಓವರ್‌ನಲ್ಲಿ ರಾಸ್ ಟೇಲರ್‌ ಅವರನ್ನು ಸ್ಟಂಪ್ ಔಟ್‌‌ ಮಾಡುವ ಮೂಲಕ 150ನೇ ಸ್ಟಂಪಿಂಗ್ ಮಾಡಿದರು. ನಂತರ 31ನೇ ಓವರ್‌ನಲ್ಲಿ ಲ್ಯೂಕ್​ ರೊಂಚಿ ಅವರನ್ನೂ ಸ್ಟಂಪ್‌ ಔಟ್‌ ಮಾಡಿದರು.

ಒಟ್ಟಾರೆ ನಿನ್ನೆಯ ಪಂದ್ಯ ತಮ್ಮ ದಾಖಲೆಗಳಿಂದ ಧೋನಿಗೆ ಅವಿಸ್ಮರಣೀಯ ಪಂದ್ಯವಾಯಿತು. ತಮ್ಮ ಅಬ್ಬರದ ಆಟದಿಂದಲೇ ಮಹಿ ಮಿನುಗಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು, ಇಸ್ಲಾಮಾಬಾದ್‌ನಲ್ಲಿ ಕೋಲಾಹಲ
ಐಪಿಎಲ್ ಹರಾಜಿನ ಬಳಿಕ 4 ಬಲಿಷ್ಠ ತಂಡ ಆಯ್ಕೆ ಮಾಡಿದ ಆರ್. ಅಶ್ವಿನ್; ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಲ್ಲ ಸ್ಥಾನ!