ಫಿರೋಜ್ ಷಾ ಕೋಟ್ಲಾ ಪಿಚ್ ಬಗ್ಗೆ ವ್ಯಾಟ್ಸನ್ ಹೇಳಿದ್ದೇನು..?

By Suvarna Web DeskFirst Published Feb 4, 2017, 11:30 AM IST
Highlights

ಆ ಪಂದ್ಯವನ್ನು ಟೀಂ ಇಂಡಿಯಾ ಆರು ವಿಕೆಟ್ ಅಂತರಲ್ಲಿ ಗೆದ್ದುಕೊಂಡಿದ್ದು ಮಾತ್ರವಲ್ಲದೆ ಆಸ್ಟ್ರೇಲಿಯಾವನ್ನು 4-0 ಅಂತರದಲ್ಲಿ ಸರಣಿಯನ್ನು ಕ್ಲೀನ್'ಸ್ವೀಪ್ ಮಾಡಿಕೊಂಡಿತ್ತು.

ನವದೆಹಲಿ(ಫೆ.04): ಭಾರತದ ಎದುರು ಏಕೈಕ ಟೆಸ್ಟ್ ಪಂದ್ಯವನ್ನು ಮುನ್ನೆಡೆಸಿರುವ ಆಸೀಸ್ ಆಲ್ರೌಂಡರ್ ಶೇನ್ ವ್ಯಾಟ್ಸನ್  ಭಾರತದ ಹಳೆಯ ಪಿಚ್'ಗಳಲ್ಲಿ ಒಂದಾಗಿರುವ ದೆಹಲಿಯ ಫಿರೋಜ್ ಷಾ ಕೋಟ್ಲಾ ಪಿಚ್ ಬಗ್ಗೆ ಟೀಕೆಯ ಸುರಿಮಳೆ ಸುರಿಸಿದ್ದಾರೆ.

2013ರಲ್ಲಿ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ವ್ಯಾಟ್ಸನ್ ಎರಡನೇ ಇನಿಂಗ್ಸ್'ನಲ್ಲಿ ಗ್ಲೇನ್ ಮ್ಯಾಕ್ಸ್'ವೆಲ್'ರನ್ನು ಆರಂಭಿಕರನ್ನಾಗಿ ಕಣಕ್ಕಿಳಿಸಿ ವ್ಯಾಪಕ ಟೀಕೆಗೊಳಗಾಗಿದ್ದರು. ಮ್ಯಾಕ್ಸ್'ವೆಲ್ ಕೇವಲ 8 ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದ್ದರು. ಮ್ಯಾಕ್ಸ್'ವೆಲ್ ಆರಂಭಿಕನಾಗಿ ಕ್ರೀಸ್'ಗಿಳಿದಿದ್ದು ಬೌಲರ್'ಗಳಿಗೆ ಸಾಕಷ್ಟು ಒತ್ತಡದ ಪರಿಸ್ಥಿತಿ ಉಂಟುಮಾಡಿತ್ತು. ಪಂದ್ಯದ ಗತಿಯನ್ನೇ ಬದಲಾಯಿಸುವ ಮ್ಯಾಕ್ಸ್'ವೆಲ್ ಸಾಮರ್ಥ್ಯದ ಬಗ್ಗೆ ಭಾರತೀಯ ಬೌಲರ್'ಗಳಿಗೆ ಗೊತ್ತಿತ್ತು. ಆದರೆ ಪಿಚ್ ಅನಿರೀಕ್ಷಿತವಾಗಿ ವರ್ತಿಸಿದ ಪರಿಣಾಮ ನಾವು ಶರಣಾಗಬೇಕಾಯಿತು ಎಂದು ತಾವು ನಾಯಕತ್ವ ವಹಿಸಿದ್ದ ಪಂದ್ಯವನ್ನು ವ್ಯಾಟ್ಸನ್ ಮೆಲುಕು ಹಾಕಿದ್ದಾರೆ.

ನನಗಿನ್ನು ನೆನಪಿದೆ ಲಂಗ್ತ್ ಬಾಲೊಂದು ಅನಿರೀಕ್ಷಿತ ಬೌನ್ಸರ್'ನೊಂದಿಗೆ ಫಿಲ್ ಹ್ಯೂಸ್'ಗೆ ಬಡಿದಿತ್ತು. ಆ ಪಂದ್ಯವನ್ನು ಟೀಂ ಇಂಡಿಯಾ ಆರು ವಿಕೆಟ್ ಅಂತರಲ್ಲಿ ಗೆದ್ದುಕೊಂಡಿದ್ದು ಮಾತ್ರವಲ್ಲದೆ ಆಸ್ಟ್ರೇಲಿಯಾವನ್ನು 4-0 ಅಂತರದಲ್ಲಿ ಸರಣಿಯನ್ನು ಕ್ಲೀನ್'ಸ್ವೀಪ್ ಮಾಡಿಕೊಂಡಿತ್ತು.

click me!