
ಮೂರು ತಿಂಗಳ ದೀರ್ಘ ಕಾಲದ ಭಾರತ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ತಂಡ ಈಗ ಬರಿಗೈಲಿ ತವರಿಗೆ ಮರಳಿದೆ. ಟೆಸ್ಟ್, ಓನ್ ಡೇ ಹಾಗೂ ಟಿ20 ಮೂರೂ ಪಾರ್ಮೆಟ್'ನಲ್ಲೂ ಆಂಗ್ಲರು ಪರಾಭವಗೊಂಡರು. ಆದರೆ ನಿಮಗೆ ಗೊತ್ತಿಲ್ಲ, ಇಂಗ್ಲೆಂಡ್ ಪಡೆಯ ಹಿನಾಯ ಸ್ಥಿತಿಗೆ ಕಾರಣ ಟೀಂ ಇಂಡಿಯಾ ಅಲ್ಲ ಬದಲಿಗೆ ಇಂಗ್ಲೆಂಡ್ ಆಟಗಾರರೇ. ಈ ಮೂರು ಸರಣಿಗಳನ್ನು ಗಮನಿಸಿದರೆ ಇಂಗ್ಲೆಂಡ್'ನ ಕಾಮನ್ ಎಡವಟ್ಟು ಯಾವುದು ಅಂತ ತಿಳಿಯುತ್ತೆ. ಅದರ ಒಂದು ವರದಿ ಇಲ್ಲಿದೆ.
ದೀರ್ಘ ಕಾಲದ ಭಾರತ ಪ್ರವಾಸವನ್ನು ಅಂತ್ಯಗೊಳಿಸಿರುವ ಇಂಗ್ಲೆಂಡ್ ಸದ್ಯ ತವರಿಗೆ ಮರಳಿ ಸೋಲಿಗೆ ಕಾರಣವೇನು ಅಂತ ಆತ್ಮಾವಲೋಕನ ಮಾಡಿಕೊಳ್ಳುತ್ತಿದೆ. ಭಾರತದ ಫ್ಲೈಟ್ ಹತ್ತುವ ಮುನ್ನ ಬಲಿಷ್ಠ ತಂಡ ಎನ್ನಿಸಿಕೊಂಡಿದ್ದ ಇಂಗ್ಲೆಂಡ್, ಪ್ರವಾಸ ಮುಗಿಸಿ ಮತ್ತೆ ಇಂಗ್ಲೆಂಡ್ ತಲುಪುವ ವೇಳೆಗೆ ಡಮ್ಮಿ ಟೀಂ ಎನ್ನಿಸಿಕೊಂಡಿದೆ. ಅದಕ್ಕೆ ಕಾರಣವಾದರೂ ಏನು ಅಂತ ತಿಳಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಿ.
ಟೆಸ್ಟ್ ಸರಣಿಯಲ್ಲಿ ಮಹಾಪತನ ಕಂಡ ಕುಕ್ ಪಡೆ: ಇಂಗ್ಲೆಂಡ್ಗೆ ಕಾಡಿದ ದಿಢೀರ್ ಪತನದ ಭೂತ
ಭಾರತಕ್ಕೆ ಕಾಲಿಟ್ಟಾಗ ಫುಲ್ ಜೋಶ್'ನಲ್ಲಿದ್ದ ಇಂಗ್ಲೆಂಡ್ ವಿಶ್ವಾಸದಿಂದಲೇ ಮೊದಲ ಟೆಸ್ಟ್ ಆಡಿದ ಇಂಗ್ಲೆಂಡ್ ಡ್ರಾ ಮಾಡಿಕೊಳ್ತು. 2ನೇ ಟೆಸ್ಟ್ ಗೆದ್ದೇ ಗೆಲ್ಲುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸದಿಂದ ಕಣಕ್ಕಿಳಿದ ಆಂಗ್ಲರು ಮಣ್ಣುಮುಕ್ಕಿದ್ರು. ಕುಕ್ ತೋಡಿದ ಅಳ್ಳಕ್ಕೆ ಅವರೇ ಬಿದ್ದರು. ದಿಢೀರ್ ಪತನದಿಂದ ಆಂಗ್ಲರು ತತ್ತರಿಸಿಹೋದರು.
2ನೇ ಟೆಸ್ಟ್.. ಮೊದಲ ಇನ್ನಿಂಗ್ಸ್..: 80ರನ್ಗಳಿಗೆ 5 ವಿಕೆಟ್
2ನೇ ಟೆಸ್ಟ್ನಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟ್ಮಾಡಿ 455 ರನ್ ಪೇರಿಸಿತ್ತು. ಇದರ ಉತ್ತರವಾಗಿ ಬ್ಯಾಟ್ ಮಾಡಲು ಇಳಿದ ಇಂಗ್ಲೆಂಡ್ ಕೇವಲ 80ರನ್ ಗಳಿಸುವಷ್ಟರಲ್ಲೇ ಪ್ರಮುಖ 5 ವಿಕೆಟ್ ಕಳೆದುಕೊಳ್ತು. ಇದರೊಂದಿಗೆ ಮೊದಲ ಬ್ಯಾಟಿಂಗ್ ವೈಫಲ್ಯ ಕಂಡಿತು.
2ನೇ ಟೆಸ್ಟ್.. ಎರಡನೇ ಇನ್ನಿಂಗ್ಸ್..: 43 ರನ್'ಗಳಿಗೆ 6 ವಿಕೆಟ್
ಮೊದಲ ಇನ್ನಿಂಗ್ಸ್'ನಲ್ಲಿ ಆರಂಭಿಕರ ಎಡವಟ್ಟನ್ನು ಏನ್ಕ್ಯಾಷ್ ಮಾಡಿಕೊಂಡ ಭಾರತ ಇಂಗ್ಲೆಂಡ್ಗೆ 405ರನ್ ಗಳ ಟಾರ್ಗೆಟ್ ನೀಡಿತು. ಬೃಹತ್ ಟಾರ್ಗೆಟ್'ನ್ನು ಬೆನ್ನತ್ತಿದ್ದ ಇಂಗ್ಲೆಂಡ್ 115 ರನ್'ಗಳಿಗೆ 4 ವಿಕೆಟ್ ಕಳೆದುಕೊಂಡು ಮುನ್ನುಗ್ಗುತಿತ್ತು. ಆದರೆ 115ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ 158 ರನ್ ಗಳಿಸುವಷ್ಟರಲ್ಲೆ ಆಲೌಟಾಗಿಬಿಡ್ತು. ಕೇವಲ 43 ರನ್ಗಳಿಗೆ 6 ವಿಕೆಟ್ ಕಳೆದುಕೊಳ್ಳುವ ಮೂಲಕ ಸರಣಿಯ ಮೊದಲ ಸೋಲನ್ನ ಒಪ್ಪಿಕೊಂಡಿತು.
3ನೇ ಟೆಸ್ಟ್.. ಎರಡನೇ ಇನ್ನಿಂಗ್ಸ್..: 70 ರನ್'ಗಳಿಗೆ 5 ವಿಕೆಟ್
ಮೂರನೇ ಟೆಸ್ಟ್ನಲ್ಲಾದರೂ ಇಂಗ್ಲೆಂಡ್ ಬುದ್ಧಿ ಕಲಿಯುತ್ತದೆ ಅಂತ ಅಂದುಕೊಂಡರೆ, ನೋ ಚಾನ್ಸ್'ಲ್ಲೂ ಅವರ ಶೀಘ್ರ ಪತನ ಮುಂದುವರಿತು. 3ನೇ ಟೆಸ್ಟ್'ನಲ್ಲಿ ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 213ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆದರೆ ನಂತರ 70 ರನ್ ಗಳಿಸುವಷ್ಟರಲ್ಲೆ ಕೊನೆಯ 5 ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದ ತಪ್ಪಿಗೆ ಇಂಗ್ಲೆಂಡ್ ಭಾರಿ ಮೊತ್ತವನ್ನೇ ತೆರಬೇಕಾಯಿತು.
4ನೇ ಟೆಸ್ಟ್.. ಎರಡನೇ ಇನ್ನಿಂಗ್ಸ್..: 54 ರನ್'ಗಳಿಗೆ 7 ವಿಕೆಟ್
4ನೇ ಟೆಸ್ಟ್ನಲ್ಲೂ ಕುಕ್ ಪಡೆ ಮತ್ತೆ ಶೀಘ್ರ ಪತನವನ್ನೇ ಕಂಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 400ರನ್ ಪೇರಿಸಿತ್ತು. ಭಾರತ ಕೂಡ ಇದರ ಉತ್ತರವಾಗಿ 631ರನ್ ಗಳಿಸಿತು. ಆದರೆ 2ನೇ ಇನ್ನಿಂಗ್ಸ್'ನಲ್ಲಿ ಆಂಗ್ಲರು ಮತ್ತೆ ಎಡವಿದರು, 141ರನ್ಗಳಿಗೆ 3 ವಿಕೆಟ್ ಮಾತ್ರ ಕಳೆದುಕೊಂಡಿದ್ದ ಕುಕ್ ಪಡೆ 195ರನ್ ಆಗುವಷ್ಟರಲ್ಲೇ ಆಲೌಟಾದರು. ಕೇವಲ 54ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು.
5ನೇ ಟೆಸ್ಟ್.. ಎರಡನೇ ಇನ್ನಿಂಗ್ಸ್..: 81 ರನ್ಗಳಿಗೆ 8 ವಿಕೆಟ್
ಕೊನೆಯ ಟೆಸ್ಟ್ನಲ್ಲೂ ಇಂಗ್ಲೆಂಡ್ ಸ್ಥಿತಿ ಭಿನ್ನವಾಗೇನು ಇರಲಿಲ್ಲ. ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲೂ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಭಾರತದ ಬೌಲಿಂಗ್ಗೆ ಬೆಂಡಾಗಿ ಹೋಗಿದ್ದರು. ಪಂದ್ಯದ 2ನೇ ಇನ್ನಿಂಗ್ಸ್ ವೇಳೆ 126ಕ್ಕೆ 2 ವಿಕೆಟ್ ಕಳೆದುಕೊಂಡು ಡ್ರಾ ಮಾಡಿಕೊಳ್ಳುವ ಇರಾದೆ ಒಟ್ಟುಕೊಂಡಿದ್ದ ಇಂಗ್ಲೆಂಡ್ 207ರನ್ ಗಳಿಗೆ ಸರ್ವಪತನ ಕಾಣುವುದರೊಂದಿಗೆ ಟೆಸ್ಟ್ ಸರಣಿಯನ್ನ 0-4ರಿಂದ ಸೋತಿತ್ತು.
ಏಕದಿನ ಸರಣಿಯಲ್ಲಿ ಅದ್ಭುತ ಆಟವಾಡಿದ ಇಂಗ್ಲೆಂಡ್: ಟಿ20ಯಲ್ಲಿ ಮತ್ತೆ ಮುಗ್ಗರಿಸಿದ ಮಾರ್ಗನ್ ಪಡೆ
ಟೆಸ್ಟ್ ಸರಣಿಯ ಹೀನಾಯ ಸೋಲಿನಿಂದ ಕಂಗೆಟ್ಟಿದ್ದ ಇಂಗ್ಲೆಂಡ್ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡ್ತು. ಟೀಂ ಇಂಡಿಯಾಗೆ ಟಫ್ ಫೈಟ್ ನೀಡ್ತು. ಆದರೂ ಸಹ ಸರಣಿ ಗೆಲ್ಲಲೂ ಸಾಧ್ಯವಾಗಲಿಲ್ಲ, ಆದರೆ ಟಿ20 ಸರಣಿಯಲ್ಲಿ ಶುಭಾರಂಭ ಮಾಡುವ ಮೂಲಕ ತಂಡದಲ್ಲಿ ಎಲ್ಲವೂ ಸರಿಹೋಗಿದೆ ಅನ್ನುವಷ್ಟರಲ್ಲೇ ಟಿ20 ಸರಣಿಯ 2ನೇ ಪಂದ್ಯದಲ್ಲಿ ಮತ್ತೆ ಇಂಗ್ಲೆಂಡ್'ನ ಹಳೆ ರಾಗ ಶುರುವಾಯಿತು.
2ನೇ ಟಿ20 ಪಂದ್ಯ: ಮಹತ್ವದ ಸಮಯದಲ್ಲೇ ವಿಕೆಟ್ ಒಪ್ಪಿಸಿದ ಇಂಗ್ಲೆಂಡ್
ಮೊದಲ ಟಿ20 ಗೆದ್ದು 2ನೇ ಪಂದ್ಯವನ್ನ ಗೆಲ್ಲೂವ ಉತ್ಸಹಾಹದಲಿದ್ದ ಇಂಗ್ಲೆಂಡ್ 2ನೇ ಟಿ20 ಪಂದ್ಯದಲ್ಲಿ ಭಾರತವನ್ನ 144ರನ್ಗಳಿಗೆ ಕಟ್ಟಿಹಾಕಿತ್ತು. 145ರನ್ಗಳ ಸರಳ ಮೊತ್ತವನ್ನ ಬೆನ್ನತ್ತಿದ್ದ ಇಂಗ್ಲೆಂಡ್ ಗೆಲುವಿನ ದಡಕ್ಕೆ ಬಂದು ನಿಂತಿತ್ತು. ಕೊನೆಯ 24 ಎಸೆತಗಳಲ್ಲಿ 32 ರನ್ ಅವಶ್ಯಕತೆ ಇದ್ದಾಗ ಜೋಸ್ ಬಟ್ಲರ್ ಹಾಗೂ ಜೊ ರೂಟ್ ಔಟಾಗಿ ಇಂಗ್ಲೆಂಡ್ ಸರಣಿ ಕನಸಿಗೆ ತಣ್ಣೀರು ಎರಚಿದರು.
3ನೇ ಟಿ20 ಪಂದ್ಯ: 19 ಬಾಲ್.. 8 ರನ್.. 8 ವಿಕೆಟ್..
ಬೆಂಗಳೂರಿನ 3ನೇ ಹಾಗೂ ಅಂತಿಮ ಪಂದ್ಯವನ್ನ ಭಾರತದ ಕ್ರಿಕೆಟ್ ಅಭಿಮಾನಿಗಳು ಮರೆಯೋಕೆ ಸಾಧ್ಯವೇ ಇಲ್ಲ. ಟೀಂ ಇಂಡಿಯಾ ಪೇರಿಸಿದ್ದ 203 ರನ್ಗಳ ಬೃಹತ್ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್, 13.2 ಓವರ್ನಲ್ಲಿ 2 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿತ್ತು.ಆದ್ರೆ 16.3 ಓವರ್ನಲ್ಲಿ 127 ರನ್ಗೆ ಆಲೌಟ್ ಆದ್ರು. 19 ಬಾಲ್ನಲ್ಲಿ 8 ರನ್ಗಳ ಅಂತರದಲ್ಲಿ 8 ವಿಕೆಟ್ಗಳು ಪತನವಾದ್ವು. ಇಂಗ್ಲೆಂಡ್ ಹೀನಾಯ ಸೋಲು ಅನುವಿಸಿತು.
ಒಟ್ಟಿನಲ್ಲಿ ಇಂಗ್ಲೆಂಡ್'ಗೆ ಭಾರತದ ಪ್ರವಾಸ ಬಿಸಿ ತುಪ್ಪವಾಗಿದಂತೂ ಸುಳ್ಳಲ್ಲ. ತಮ್ಮ ಪ್ರತೀ ಪಂದ್ಯದಲ್ಲೂ ಸಡನ್ ಕೊಲಾಪ್ಸ್ನಿಂದ ಇಂಗ್ಲೆಂಡ್ ಟೂರ್ನಿಯನ್ನ ಕೈಚೆಲ್ಲುವಂತಾಯಿತು. ಏನೇ ಆದರೂ ಇಂಗ್ಲೆಂಡ್ ಬರಿಗೈಯಲ್ಲಿ ತವರಿಗೆ ಮರಳಿದ್ದು ನಿಜಕ್ಕೂ ಅವರದ್ದೇ ವೈಫಲ್ಯ ಕಾರಣ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.