
ನವದೆಹಲಿ(ಡಿ.24): ಬಾಲಿವುಡ್'ನಲ್ಲಿ ಯಾರಾದರೂ ತಮ್ಮ ಕ್ರೀಡಾಜೀವನ ಕುರಿತಾದ ಚಲನಚಿತ್ರ ನಿರ್ಮಿಸಿದರೆ ಅದು ನನಗೆ ಖಂಡಿತಾ ಖುಷಿ ನೀಡಲಿದೆ ಎಂದು ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ತಿಳಿಸಿದ್ದಾರೆ.
ಹಿಂದಿ ಚಿತ್ರರಂಗದಲ್ಲಿ ಇತ್ತೀಚೆಗೆ ಕ್ರೀಡಾಳುಗಳ ಸಾಧನೆ ಕುರಿತಾದ ಚಿತ್ರಗಳು ಬರುತ್ತಿವೆ. ಇತ್ತೀಚೆಗಷ್ಟೇ ಕ್ರಿಕೆಟಿಗ ಎಂ.ಎಸ್. ಧೋನಿ ಕುರಿತಾದ ಚಿತ್ರ ಹಾಗೂ ಕುಸ್ತಿ ಪಟು ಗೀತಾ ಫೋಗಟ್ ಕುರಿತಾದ ‘ದಂಗಲ್’ ಚಿತ್ರಗಳು ಯಶಸ್ವಿಯಾಗಿವೆ. ಈ ಹೊತ್ತಿನಲ್ಲಿ ತಮ್ಮದೂ ಚಿತ್ರವೊಂದು ಬರಲೆಂದು ತಾವು ಹಾರೈಸುತ್ತಿರುವುದಾಗಿ ಸಾಕ್ಷಿ ಹೇಳಿದ್ದಾರೆ.
ಹಾಗಾದಲ್ಲಿ, ತಮ್ಮ ಪಾತ್ರವನ್ನು ಇಂಥದ್ದೇ ನಟಿ ಮಾಡಬೇಕೆಂಬ ಹಂಬಲವೇನೂ ತಮಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
23 ವರ್ಷದ ಸಾಕ್ಷಿ, ರಿಯೊ ಒಲಿಂಪಿಕ್'ನಲ್ಲಿ ಮಹಿಳೆ ಕುಸ್ತಿಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.