ಕಿಂಗ್ಸ್ ಇಲೆವೆನ್'ಗೆ ಸೆಹ್ವಾಗ್ ಕೋಚ್?

Published : Dec 24, 2016, 03:04 PM ISTUpdated : Apr 11, 2018, 12:54 PM IST
ಕಿಂಗ್ಸ್ ಇಲೆವೆನ್'ಗೆ ಸೆಹ್ವಾಗ್ ಕೋಚ್?

ಸಾರಾಂಶ

ಬಂಗಾರ್ ತೆರವಿನ ಬಳಿಕ ಸೆಹ್ವಾಗ್ ಆ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಐಪಿಎಲ್'ನಲ್ಲಿ ಡೆಲ್ಲಿ ಡ್ಯಾಶಿಂಗ್ ಓಪನರ್ ಮತ್ತೊಮ್ಮೆ ಕಮಾಲ್ ಮಾಡುವ ಸಾಧ್ಯತೆಯಿದೆ.

ನವದೆಹಲಿ(ಡಿ.24): ಭಾರತದ ಮಾಜಿ ಸ್ಪೋಟಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಹುದ್ದೆಗೇರಲಿದ್ದಾರಂತೆ. 2017ರ ಐಪಿಎಲ್ ಟೂರ್ನಿಯಲ್ಲಿ ಸೆಹ್ವಾಗ್, ಪಂಜಾಬ್ ತಂಡದ ತರಬೇತುದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಪಂಜಾಬ್ ಆಡಳಿತ ಮಂಡಳಿ ಕೂಡ ಸೆಹ್ವಾಗ್ ಅವರನ್ನು ಈ ಸ್ಥಾನಕ್ಕೆ ತರಬೇಕು ಎನ್ನುವ ಯೋಜನೆ ಹಾಕಿಕೊಂಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಹಿಂದೆ ಸಂಜಯ್ ಬಂಗಾರ್ ಪಂಜಾಬ್ ತಂಡಕ್ಕೆ ಕೋಚ್ ಆಗಿದ್ದರು. ಬಂಗಾರ್ ತೆರವಿನ ಬಳಿಕ ಸೆಹ್ವಾಗ್ ಆ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಐಪಿಎಲ್'ನಲ್ಲಿ ಡೆಲ್ಲಿ ಡ್ಯಾಶಿಂಗ್ ಓಪನರ್ ಮತ್ತೊಮ್ಮೆ ಕಮಾಲ್ ಮಾಡುವ ಸಾಧ್ಯತೆಯಿದೆ.

ಪ್ರಸಕ್ತ ಭಾರತ ತಂಡದ ಸಹಾಯಕ ಕೋಚ್ ಆಗಿರುವ ಬಂಗಾರ್, ಪಂಜಾಬ್ ತಂಡವನ್ನು 2014ರಲ್ಲಿ ರನ್ನರ್ ಅಪ್ ಸ್ಥಾನಕ್ಕೆ ಕೊಂಡೊಯ್ದಿದ್ದರು. ಬಂಗಾರ್ 'ಕಳೆದ ನವೆಂಬರ್‌'ನಲ್ಲಿಯೇ ಪಂಜಾಬ್ ತಂಡಕ್ಕೆ ಗುಡ್ ಬೈ ಹೇಳಿದ್ದೇನೆ. ಆದರೆ ಆಡಳಿತ ಮಂಡಳಿ ಈಗ ರಾಜೀನಾಮೆಯನ್ನು ಅಂಗೀಕರಿಸಿದೆ' ಎಂದು ಬಂಗಾರ್ ಹಿಂದೂಸ್ತಾನ್ ಟೈಮ್ಸ್ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರತಿ ಆವೃತ್ತಿಯಲ್ಲಿಯೂ ತಂಡದ ಆಟಗಾರರು ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಹೀಗಾಗಿ ಕಳೆದ 2 ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ತಂಡ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು ಎಂದು ಬಂಗಾರ್ ತಿಳಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡಿಗ ಕೆ.ಗೌತಮ್‌!
ಭಾರತ ಎದುರು ಅಂಡರ್-19 ಏಷ್ಯಾಕಪ್ ಗೆದ್ದ ಪಾಕ್ ಆಟಗಾರರಿಗೆ ಪ್ರಧಾನಿ ಭಾರೀ ಬಹುಮಾನ ಘೋಷಣೆ!