ಕೊಹ್ಲಿ-ಸೆಹ್ವಾಗ್ ಸನ್ಮಾನ ರದ್ದು: ಹುತಾತ್ಮರಿಗೆ ಹಣ

By Web Desk  |  First Published Mar 12, 2019, 9:53 AM IST

ಬುಧವಾರ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಏಕದಿನ ಪಂದ್ಯ ದೆಹಲಿಯ ಫಿರೋಜ್ ಷಾ ಕೊಟ್ಲಾ ಅಂಗಳದಲ್ಲಿ ನಡೆಯಲಿದ್ದು, ಈ ವೇಳೆ ಕ್ರಿಕೆಟ್ ದೈತ್ಯರನ್ನು ಸನ್ಮಾನಿಸಲು ಡಿಡಿಸಿಎ ನಿರ್ಧರಿಸಿತ್ತು. ಆದರೆ ಕಾರ್ಯಕ್ರಮವನ್ನು ರದ್ದು ಮಾಡಿದೆ. ಯಾಕೆ ಹೀಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...


ನವದೆಹಲಿ[ಮಾ.12]: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್‌ಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮವನ್ನು ರದ್ದುಗೊಳಿಸಿದ ಡೆಲ್ಲಿ ಕ್ರಿಕೆಟ್ ಸಂಸ್ಥೆ, ₹10 ಲಕ್ಷವನ್ನು ದೆಹಲಿಯ ಹುತಾತ್ಮ ಯೋಧರಿಗೆ ನೀಡಲು ನಿರ್ಧರಿಸಿದೆ.

ಇದೇ ಬುಧವಾರ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಏಕದಿನ ಪಂದ್ಯ ದೆಹಲಿಯ ಫಿರೋಜ್ ಷಾ ಕೊಟ್ಲಾ ಅಂಗಳದಲ್ಲಿ ನಡೆಯಲಿದ್ದು, ಈ ವೇಳೆ ಕ್ರಿಕೆಟ್ ದೈತ್ಯರನ್ನು ಸನ್ಮಾನಿಸಲು ಡಿಡಿಸಿಎ ನಿರ್ಧರಿಸಿತ್ತು. ಆದರೆ, ಐಪಿಎಲ್ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಿದ ಬಿಸಿಸಿಐ ಆ ಮೊತ್ತವನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ನೀಡುವುದಾಗಿ ಘೋಷಿಸಿತ್ತು. ಇದೇ ವೇಳೆ ಡೆಲ್ಲಿ ಕ್ರಿಕೆಟ್ ಸಂಸ್ಥೆ ಇದೇ ಮೊದಲ ಬಾರಿ ತನ್ನ ರಾಜ್ಯದ ಎಲ್ಲಾ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರಿಗೆ ಪಂದ್ಯಕ್ಕೆ ವಿಐಪಿ ಪಾಸ್ ವಿತರಿಸಿದೆ.

Tap to resize

Latest Videos

undefined

ರಾಂಚಿ ಪಂದ್ಯವನ್ನು ಸೈನಿಕರಿಗೆ ಅರ್ಪಿಸಿದ ಟೀಂ ಇಂಡಿಯಾ

ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಭಾರದ 40ಕ್ಕೂ ಹೆಚ್ಚು ಸಿಆರ್’ಪಿಎಫ್ ಯೋಧರು ಹುತಾತ್ಮರಾಗಿದ್ದರು. ಟೀಂ ಇಂಡಿಯಾ ಕೂಡಾ ಭಾರತೀಯ ಸೇನೆಗೆ ಗೌರವ ಸೂಚಕವಾಗಿ ರಾಂಚಿ ಏಕದಿನ ಪಂದ್ಯದಲ್ಲಿ ಆರ್ಮಿ ಕ್ಯಾಪ್ ತೊಟ್ಟು ಕಣಕ್ಕಿಳಿದಿತ್ತು. ಅಲ್ಲದೇ ಪಂದ್ಯದ ಪೂರ್ಣ ಸಂಭಾವನೆಯನ್ನು ಸೇನಾ ನಿಧಿಗೆ ನೀಡಿತ್ತು.

ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು - ಭಾರತೀಯರ ಹೃದಯ ಗೆದ್ದ ಬಿಸಿಸಿಐ!
ಈ ಮೊದಲು ಐಪಿಎಲ್ ಆಯೋಜಕರು ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಿ ಪುಲ್ವಾಮಾ ದಾಳಿ ಸಂತ್ರಸ್ತರಿಗೆ ನೀಡುವ ತೀರ್ಮಾನ ತೆಗೆದುಕೊಂಡು ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. 

click me!