
ನವದೆಹಲಿ(ಮೇ.02): ಡೆಲ್ಲಿಯ ಮೖದಾನದಲ್ಲಿ ಮಳೆಯ ಸುರಿಮಳೆಯ ಜೊತೆ ಸಿಕ್ಸ್'ರ್ ಸುರಿಮಳೆ ಕೂಡ ಹರಿಯಿತು. ಎರಡೂ ತಂಡಗಳ ಸಿಕ್ಸ್'ರ್'ರ್ಗಳ ಆಟದಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ತಂಡ 4ರನ್'ಗಳ ರೋಚಕ ಜಯ ಸಾಧಿಸಿ ಪ್ಲೇ ಆಫ್ ಕನಸು ಜೀವಂತವಾಗಿಸಿಕೊಂಡಿದೆ.
12 ಓವರ್'ನಲ್ಲಿ 151 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ ಬಟ್ಲರ್, ಶಾರ್ಟ್ ಸಿಕ್ಸ್'ರ್ ಸುರಿಮಳೆಯೊಂದಿಗೆ 146/5 ರನ್ ದಾಖಲಿಸಿತು. ಬಟ್ಲರ್ 26 ಚಂಡುಗಳಲ್ಲಿ 7 ಭರ್ಜರಿ ಸಿಕ್ಸ್'ರ್' 1 ಬೌಂಡರಿಯೊಂದಿಗೆ 67 ಸಿಡಿಸಿದರೆ, ಶಾರ್ಟ್ 25 ಎಸೆತಗಳಲ್ಲಿ 4 ಸಿಕ್ಸ್'ರ್ 2 ಬೌಂಡರಿಯೊಂದಿಗೆ 44 ರನ್ ಸ್ಪೋಟಿಸಿದರು. ಕನ್ನಡಿಗ ಗೌತಮ್ ಕೂಡ ಕೊನೆಯಲ್ಲಿ ಭರವಸೆ ಮೂಡಿಸಿದರೂ ಜಯ ದೊರಕಲಿಲ್ಲ.
ಪಂತ್ ಅಬ್ಬರ
ಟಾಸ್ ಸೋತ ಡೆಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿ ಬೃಹತ್ ಮೊತ್ತ ದಾಖಲಿಸಿದರು. ಶಾ ಹಾಗೂ ನಾಯಕ ಅಯ್ಯರ್ ಜೋಡಿ 2ನೇ ವಿಕೇಟ್'ಗೆ ಬಿರುಗಾಳಿಯನ್ನೇ ಅಬ್ಬರಸಿದರು. ಶಾ 8 ನೇ ಓವರ್ ನಲ್ಲಿ 25 ಚಂಡುಗಳಲ್ಲಿ
4 ಸಿಕ್ಸ್'ರ್ ಹಾಗೂ 4 ಬೌಂಡರಿಯೊಂದಿಗೆ 47 ಸಿಡಿಸಿ ಔಟಾದರು. ಅನಂತರ ಆರಂಭವಾಗಿದ್ದು ಮತ್ತೊಂದು ಆರ್ಭಟ. ಪಂತ್ ಸಿಡಿಲಬ್ಬರದ ಆಟಕ್ಕೆ ರಾಜಸ್ಥಾನ್ ಆಟಗಾರರು ನಲುಗಿ ಹೋದರು.
ಇವರಿಬ್ಬರ ಜೋಡಿ ಮೂರನೆ ವಿಕೇಟ್ ನಷ್ಟಕ್ಕೆ 14.3 ಓವರ್'ಗಳಲ್ಲಿ 172 ರನ್ ಪೇರಿಸಿದರು. ಅಯ್ಯರ್ 35 ಎಸತಗಳಲ್ಲಿ 3 ಸಿಕ್ಸ್'ರ್ 3 ಬೌಂಡರಿಯೊಂದಿಗೆ 50 ರನ್ ಬಾರಿಸಿದರೆ, ಪಂತ್ ಕೇವಲ 27 ಚಂಡುಗಳಲ್ಲಿ 5 ಸಿಕ್ಸ್'ರ್ 7 ಬೌಂಡರಿಯೊಂದಿಗೆ 69 ರನ್ ಚಚ್ಚಿದರು. ತಂಡದ ಮೊತ್ತ 17.1 ಓವರ್'ಗಳಲ್ಲಿ 191 ಇದ್ದಾಗ ಮತ್ತೆ ಮಳೆ ಶುರುವಾಗಿ ಒಂದು ಕಡೆಯ ಆಟವನ್ನು ಸಮಾಪ್ತಿಗೊಳಿಸಿ ರಾಜಸ್ಥಾನ್ ತಂಡಕ್ಕೆ 12 ಓವರ್'ಗಳಲ್ಲಿ 151 ಗುರಿ ನೀಡಲಾಗಿದೆ.
ಸ್ಕೋರ್
ಡೆಲ್ಲಿ ಡೇರ್'ಡೇವಿಲ್ಸ್ 196/6
(ಪಂತ್ 69, ಅಯ್ಯರ್ 50,ಶಾ 47 )
ರಾಜಸ್ಥಾನ್ ರಾಯಲ್ಸ್ 12ಓವರ್'ಗಳಲ್ಲಿ 146/5
(ಶಾರ್ಟ್ 44, ಬಟ್ಲರ್ 67)
ಡೆಕ್ವರ್ತ್ ಲೂಯಿಸ್ ಅನ್ವಯ ಡೆಲ್ಲಿಗೆ 4 ರನ್ ಜಯ
ಪಂದ್ಯ ಶ್ರೇಷ್ಠ : ರಿಶಬ್ ಪಂತ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.