
ಸಿಡ್ನಿ(ಜ.03): ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್'ಮನ್ ಡೇವಿಡ್ ವಾರ್ನರ್ ಪಾಕಿಸ್ತಾನದ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಸಿಡ್ನಿ ಕ್ರಿಕೆಟ್ ಮೈದಾನದಲ್ಲೇ ಮೂರನೇ ಹಾಗೂ ಟೆಸ್ಟ್ ಕ್ರಿಕೆಟ್'ನಲ್ಲಿ ಒಟ್ಟಾರೆ 18ನೇ ಶತಕವನ್ನು ವಾರ್ನರ್ ಪೂರೈಸಿದ್ದಾರೆ.
ಆರಂಭದಿಂದಲೂ ಸ್ಪೋಟಕ ಬ್ಯಾಟಿಂಗ್ ನಡೆಸಿದ ವಾರ್ನರ್ 78 ಎಸೆತಗಳಲ್ಲಿ ಶತಕ ಪೂರೈಸಿದರು. ಅವರ ಈ ಸೊಗಸಾದ ಇನಿಂಗ್ಸ್'ನಲ್ಲಿ 17 ಭರ್ಜರಿ ಬೌಂಡರಿಗಳೂ ಸೇರಿದ್ದವು. ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್'ಮನ್ ನಂತರ ಮೊದಲ ದಿನದ ಮೊದಲ ಸೆಷನ್'ನಲ್ಲೇ ಶತಕ ಬಾರಿಸಿದ ಆಸ್ಟ್ರೇಲಿಯಾದ ಮೊದಲ ಆರಂಭಿಕ ಆಟಗಾರ ಎಂಬ ಖ್ಯಾತಿಗೆ ವಾರ್ನರ್ ಭಾಜನರಾಗಿದ್ದಾರೆ. 87 ವರ್ಷಗಳ ಹಿಂದೆ ಡಾನ್. ಬ್ರಾಡ್'ಮನ್ ಮೊದಲ ದಿನದ ಮೊದಲ ಸೆಷನ್'ನಲ್ಲಿಯೇ ಶತಕ ಬಾರಿಸಿದ್ದರು.
ಆದರೆ ವಾರ್ನರ್ ಭಾರತದ ಸ್ಫೋಟಕ ಬ್ಯಾಟ್ಸ್'ಮನ್ ಸೆಹ್ವಾಗ್ ನಿರ್ಮಿಸಿದ ದಾಖಲೆ ಮುರಿಯುವಲ್ಲಿ ವಿಫಲರಾದರು. 2006ರಲ್ಲಿ ಸೆಹ್ವಾಗ್ ವೆಸ್ಟ್'ಇಂಡೀಸ್ ವಿರುದ್ಧ 25.3 ಓವರ್'ಗಳಲ್ಲಿ ಮೂರಂಕಿಯ ಮೊತ್ತವನ್ನು ಮುಟ್ಟಿ ಅತಿವೇಗದಲ್ಲಿ ಟೆಸ್ಟ್ ಶತಕ ಬಾರಿಸಿದ ದಾಖಲೆ ಬರೆದಿದ್ದಾರೆ. ಈ ಮೂಲಕ ಮೊದಲ ಸೆಷನ್'ನಲ್ಲಿ ಅತಿವೇಗವಾಗಿ ಶತಕ ಗಳಿಸಿದ ಆಟಗಾರ ಎಂಬ ದಾಖಲೆ ನಿ ಆದರೆ ವಾರ್ನರ್ ಶತಕ ಪೂರೈಸಲು ತೆಗೆದುಕೊಂಡದ್ದು 26.2 ಓವರ್'ಗಳು. ಹೀಗಾಗಿ ಸ್ವಲ್ಪದರಲ್ಲೇ ವಾರ್ನರ್ ಡೆಲ್ಲಿ ಡ್ಯಾಶರ್ ದಾಖಲೆ ಮುರಿಯುವಲ್ಲಿ ಎಡವಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.