ಮಿಲ್ಲರ್ ಆಟಕ್ಕೆ ಚೆಚ್ಚಿಬಿದ್ದ ಕಾಂಗರೊ ಪಡೆ, 69 ಎಸೆತಗಳಲ್ಲಿ 118ರನ್ ಬಾರಿಸಿದ ಡೇವಿಡ್ ವಿಡಿಯೋ ನೋಡಿ...!

By Internet DeskFirst Published Oct 6, 2016, 7:55 AM IST
Highlights

ದರ್ಬನ್(ಅ.06): ಮತ್ತೊಂದು ಹೈವೊಲ್ಟೆಜ್ ಪಂದ್ಯದಲ್ಲಿ ಕ್ರಿಕೆಟ್ ದೈತ್ಯ ಆಸ್ಟ್ರೇಲಿಯಾ ತಂಡವನ್ನು ದಕ್ಷಿಣ ಆಫ್ರಿಕಾದ ಹರಿಣಗಳು ಭರ್ಜರಿಯಾಗಿ ಬೇಟೆಯಾಡಿವೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ರನ್ ಚೇಜರ್ಸ್ ಪಟ್ಟವನ್ನು ಅಲಂಕರಿಸಿರುವ ಹರಿಣಗಳು ಈಗ ಎರಡನೇ ಗರಿಷ್ಠ ರನ್ ಚೇಜರ್ಸ್ ಎಂಬ ಹಣೆ ಪಟ್ಟಿಯನ್ನು ಪಡೆದುಕೊಂಡಿವೆ. 

ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸೀಸ್ ತಂಡ ಹರಿಣಗಳ ಬೌಲರ್ ಗಳನ್ನು ಚೆಂಡಾಡಿ ನಿಗದಿತ 50 ಓವರ್ ಗಳಲ್ಲಿ 372 ರನ್ ಗಳನ್ನು ಕಲೆ ಹಾಕಿತ್ತು. ಆಸೀಸ್ ಪರ ಡೇವಿಡ್ ವಾರ್ನರ್ 117 ರನ್ ಕಲೆ ಹಾಕಿದರೆ, ನಾಯಕ ಸ್ಟಿವನ್ ಸ್ಮಿತ್ 108 ರನ್ ಗಳ ಕೊಡುಗೆ ನೀಡಿದರು. 

ಈ ಗುರಿಯನ್ನು ಬೆನ್ನಟಿದ ದಕ್ಷಿಣ ಆಫ್ರಿಕಾ ತಂಡದ ಬೆನ್ನೆಲುಬಾಗಿದ್ದು ಡೇವಿಲ್ ಮಿಲ್ಲರ್, ಒಂದು ಹಂತದಲ್ಲಿ ದಕ್ಷಿಣಾ ಆಫ್ರಿಕಾ ತಂಡ 6 ವಿಕೆಟ್ ಗೆ 265 ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಭರ್ಜರಿ ಬ್ಯಾಟ್ ಬೀಸಿದ ಡೇವಿಡ್ ಮಿಲ್ಲರ್ 79 ಎಸೆತಗಳಲ್ಲಿ 118 ರನ್ ದಾಖಲಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ. ಇವರ ಈ ಆಟದಲ್ಲಿ 6 ಭರ್ಜರಿ ಸಿಕ್ಸರ್ ಮತ್ತು 10 ಬೌಂಡರಿಗಳು ಸೇರಿಕೊಂಡಿದೆ.

ಈ ಗೆಲುವಿನ ಮೂಲಕ ಆಸೀಸ್ ತಂಡ 5 ಪಂದ್ಯಗಳ ಸರಣಿಯಲ್ಲಿ 3 ಪಂದ್ಯದಲ್ಲಿ ಸೋಲನುಭವಿಸುವ ಮೂಲರ ಎರಡು ಪಂದ್ಯಗಳು ಬಾಕಿ ಇರುವಂತೆ ಸರಣಿ ಕಳೆದುಕೊಂಡಿದೆ. 
 

 

click me!