ಸೌಥ್ ಆಫ್ರಿಕಾದಿಂದ ಮತ್ತೊಮ್ಮೆ ವಿಶ್ವದಾಖಲೆಯ ರನ್​​ ಚೇಸ್​​: ಮತ್ತೆ ಕಾಂಗರೊಗಳ ಮಣಿಸಿದ ಹರಿಣಗಳು

By Internet DeskFirst Published Oct 6, 2016, 5:42 AM IST
Highlights

ಡರ್ಬನ್(ಅ.06): ಹರಿಣಗಳು ಮತ್ತೊಮ್ಮೆ ವಿಶ್ವದಾಖಲೆಯ ರನ್​​ ಚೇಸ್​​ ಮಾಡಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಜಯಿಸಿದೆ, ಈ ಮೂಲಕ ಆಸೀಸ್ ತಂಡ ಹರಿಣಗಳ ಮುಂದೆ ಮುಖಭಂಗ ಅನುಭವಿಸಿದೆ. 

ಡರ್ಬನ್​​ನಲ್ಲಿ ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​​ ಮಾಡಿದ ಕಾಂಗರೂಗಳು ನಿಗದಿತ 50 ಓವರ್​​ಗಳಲ್ಲಿ 6 ವಿಕೆಟ್​​ ನಷ್ಟಕ್ಕೆ 371ರನ್​​ ಗಳಿಸಿದರು. ಗುರಿ ಬೆನ್ನತ್ತಿದ ಆಫ್ರಿಕಾ, ಡೇವಿಡ್​​ ಮಿಲ್ಲರ್​​ ಅವರ ಸ್ಫೋಟಕ ಶತಕದ ನೆರವಿನಿಂದ ಹರಿಣಗಳು ಭರ್ಜರಿ ಜಯ ಸಾಧಿಸಿದೆ. ಮಿಲ್ಲರ್​​ 79 ಎಸೆತಗಳಲ್ಲಿ ಅಜೇಯ 118 ರನ್​​​ ದಾಖಲಿಸಿದರು. 

Latest Videos

ಸೌಥ್ ಆಫ್ರಿಕಾ ತಂಡ ಇನ್ನು 4 ಎಸೆತ ಭಾಕಿ ಇರುವಾಗಲೇ 6 ವಿಕೆಟ್​​ ನಷ್ಟಕ್ಕೆ 372ರನ್​​ ಮಾಡುವ ಮೂಲಕ ಗೆಲುವಿನ ನಗೆ ಬೀರಿತು. ಇದು ವಿಶ್ವದಾಖಲೆಯ 2ನೇ ಗರಿಷ್ಠ ರನ್​ ಚೇಸ್​​ ಗೆಲುವಾಗಿದೆ.
2006ರಲ್ಲಿ ಇದೇ ಕಾಂಗರೂಗಳ ವಿರುದ್ಧ ಆಫ್ರಿಕನ್ನರೇ 434 ರನ್​​​ ಚೇಸ್​​ ಮಾಡಿರೋದು ವಿಶ್ವದಾಖಲೆಯ ಮೊದಲ ಚೇಸಿಂಗ್​​ ಸ್ಕೋರ್​​ ಆಗಿದೆ.

click me!