ಜೈಲು ಶಿಕ್ಷೆಯಿಂದ ಪಾರಾದ ರೋನಾಲ್ಡೋಗೆ 150 ಕೋಟಿ ದಂಡ

First Published Jun 16, 2018, 4:51 PM IST
Highlights

ಪೋರ್ಚುಗಲ್ ತಂಡವನ್ನ ಸೋಲಿನಿಂದ ಪಾರು ಮಾಡಿದ ಜನಪ್ರೀಯ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೋನಾಲ್ಡೋಗೆ 150 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ರೋನಾಲ್ಡೋಗೆ ದಂಡ ವಿಧಿಸಿದ್ದು ಯಾಕೆ?

ಮ್ಯಾಡ್ರಿಡ್(ಜೂ.16): ಪೋರ್ಚುಗಲ್ ಸ್ಟಾರ್ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೋನಾಲ್ಡೋ, ಫಿಫಾ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಸಿಡಿಸಿ ತಂಡವನ್ನ ಸೋಲಿನಿಂದ ಪಾರು ಮಾಡಿದ್ದಾರೆ. ಇದರ ಬೆನ್ನಲ್ಲೇ, ರೋನಾಲ್ಡೋ ಜೈಲು ಶಿಕ್ಷೆಯಿಂದಲೂ ಪಾರಾಗಿದ್ದಾರೆ.

2011-14 ರ ಅವಧಿಯಲ್ಲಿ ತೆರೆಗೆ ವಂಚನೆ ಆರೋಪದಲ್ಲಿ ರೋನಾಲ್ಡೋ ವಿರುದ್ದ ಪ್ರಕರಣ ದಾಖಲಾಗಿತ್ತು. ಕಳೆದ ವರ್ಷ ನ್ಯಾಯಾಲಯದ ಮುಂದೆ ಹಾಜರಾದ ರೋನಾಲ್ಡೋ ತೆರಿಗೆ ವಂಚನೆ ಮಾಡಿಲ್ಲ ಎಂದು ವಾದಿಸಿದ್ದರು. ಇದೀಗ ರೋನಾಲ್ಡೋ ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ರೋನಾಲ್ಡೋಗೆ 2 ವರ್ಷ ಜೈಲು ಶಿಕ್ಷೆ ಹಾಗೂ 150 ಕೋಟಿ ರೂಪಾಯಿ ದಂಡ ವಿಧಿಸಿದೆ. 

ಸ್ಪೇನ್ ಕಾನೂನಿನ ಪ್ರಕಾರ 2 ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಶಿಕ್ಷೆಗೆ ಒಳಗಾಗಿದ್ದರೆ,  ಜೈಲಿನಲ್ಲಿ ಕಳೆಯುವ ಅಗತ್ಯವಿಲ್ಲ. ಹೀಗಾಗಿ ರೋನಾಲ್ಡೋ ಜೈಲು ಶಿಕ್ಷೆಯಿಂದ ಪಾರಾಗಿದ್ದಾರೆ. ಆದರೆ ದಂಡ ಪಾವತಿ ಮಾಡೋದಾಗಿ ಕ್ರಿಸ್ಟಿಯಾನೋ ರೋನಾಲ್ಡೋ ಸ್ಪಷ್ಟಪಡಿಸಿದ್ದಾರೆ. 

click me!