ಕ್ರಿಸ್ಟಿಯಾನೋ ರೋನಾಲ್ಡೋ ಟ್ಯಾಟು ಹಾಕಿಸಿಕೊಂಡಿಲ್ಲ ಯಾಕೆ?

Published : Jun 16, 2018, 03:02 PM IST
ಕ್ರಿಸ್ಟಿಯಾನೋ ರೋನಾಲ್ಡೋ ಟ್ಯಾಟು ಹಾಕಿಸಿಕೊಂಡಿಲ್ಲ ಯಾಕೆ?

ಸಾರಾಂಶ

ಫುಟ್ಬಾಲ್ ಪಟುಗಳು ತಮ್ಮ ಮೈಮೇಲೆ ಟ್ಯಾಟು ಹಾಕಿಸಿಕೊಳ್ಳೋದು ಹೊಸ ವಿಚಾರವಲ್ಲ. ಬಹುತೇಕ ಎಲ್ಲಾ ಕ್ರೀಡಾಪಟುಗಳು ಟ್ಯಾಟು ಹಾಕಿಸಿಕೊಂಡಿರುತ್ತಾರೆ. ಆದರೆ ಜನಪ್ರೀಯ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೋನಾಲ್ಡೋ ಇದುವರೆಗೂ ಟ್ಯಾಟು ಹಾಕಿಲ್ಲ,ಯಾಕೆ?

ಮಾಸ್ಕೋ(ಜೂ.16): ಫುಟ್ಬಾಲ್ ಪಟುಗಳು ಟ್ಯಾಟು ಹಾಸಿಕೊಳ್ಳೋದು ಸರ್ವೇ ಸಾಮಾನ್ಯ. ಇದೀಗ ಎಲ್ಲಾ ಕ್ರೀಡಾಪಟುಗಳು ಟ್ಯಾಟು ಟ್ರೆಂಡ್ ಬೆಳೆಸಿಕೊಂಡಿದ್ದಾರೆ. ಇದಕ್ಕೆ ಟೀಮ್ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕನ್ನಡಿಗ ಕೆಎಲ್ ರಾಹುಲ್ ಕೂಡ ಹೊರತಾಗಿಲ್ಲ. ಆದರೆ ಇಡೀ ವಿಶ್ವದ ಜನಪ್ರೀಯ ಫುಟ್ಬಾಲ್ ತಾರೆ ಪೋರ್ಚುಗಲ್‌ನ ರೋನಾಲ್ಡೋ ಇದುವರೆಗೂ  ಟ್ಯಾಟು ಹಾಕಿಸಿಕೊಂಡಿಲ್ಲ. ಅಚ್ಚರಿಯಾದರೂ, ಇದು ಸತ್ಯ.

ಫುಟ್ಬಾಲ್ ಸ್ಟಾರ್‌ಗಳಾದ ಅರ್ಜೆಂಟೀನಾದ ಲಿಯೋನಲ್ ಮೆಸ್ಸಿ, ಬ್ರೆಜಿಲ್‌ನ ನೇಯ್ಮಾರ್ ಹೀಗೆ ಬಹುತೇಕ ಎಲ್ಲಾ ಫುಟ್ಬಾಲ್ ಪಟುಗಳು ಟ್ಯಾಟು ಹಾಕಿಸಿಕೊಂಡಿದ್ದಾರೆ. ಆದರೆ ರೋನಾಲ್ಡೋ ಇದುವರೆಗೂ ಟ್ಯಾಟು ಹಾಕಿಸಿಕೊಂಡಿಲ್ಲ. ಇದರ ಹಿಂದೆ ಒಂದು ಕಥೆ ಇದೆ.

ಕ್ರಿಸ್ಟಿಯಾನೋ ರೋನಾಲ್ಡೋ ಟ್ಯಾಟು ಹಾಕಿಸಿಕೊಳ್ಳದೇ ಇರಲು ಮುಖ್ಯ  ಕಾರಣ, ಈತ ನಿಯಮಿತ ರಕ್ತದಾನಿ. ತಾವು ಎಲ್ಲೇ ಇದ್ದರೂ, ಯಾವುದೇ ದೇಶದಲ್ಲಿದ್ದರೂ ಪ್ರತೀ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುತ್ತಾರೆ. 2009ರಲ್ಲಿ ರೊನಾಲ್ಡೋ ಮೊದಲ ಬಾರಿಗೆ ರಕ್ತದಾನ ಮಾಡಿದ್ದರು. ಆ ಬಳಿಕ ರಕ್ತದಾನದ ಮಹತ್ವ ಅರಿತ ಅವರು 2011ರಿಂದ ನಿಯಮಿತವಾಗಿ ರಕ್ತದಾನ ಮಾಡುತ್ತಿದ್ದಾರೆ. ಅವರು ರಕ್ತದಾನದ ಕಾರ್ಯವನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದರೆ ಅವರ ಪೋರ್ಚುಗಲ್ ನಿವಾಸದಲ್ಲಿ ರಕ್ತಾದಾನ ಮಾಡುವುದಕ್ಕಾಗಿಯೇ ವಿಶೇಷ ಕೊಠಡಿ ಮೀಸಲಿಟ್ಟು, ಅದರಲ್ಲಿ ಪುಟ್ಟ ಲ್ಯಾಬ್ ಕೂಡ ತೆರೆದಿದ್ದಾರೆ.

ರಕ್ತದಾನಕ್ಕಾಗಿಯೋ ರೋನಾಲ್ಡೋ ಟ್ಯಾಟು ಹಾಕಿಸಿಕೊಂಡಿಲ್ಲ. ವೈದ್ಯರ ಪ್ರಕಾರ ಟ್ಯಾಟು ಹಾಕಿಸಿಕೊಂಡ ವ್ಯಕ್ತಿ ಕನಿಷ್ಠ 3 ರಿಂದ 6 ತಿಂಗಳ ಕಾಲ ರಕ್ತದಾನ ಮಾಡುವಂತಿಲ್ಲ. ಇದೇ ಕಾರಣಕ್ಕಾಗಿ ರೋನಾಲ್ಡೋ ತಮಗೆ ಇಷ್ಟವಿದ್ದರೂ ಟ್ಯಾಟು ಮಾತ್ರ ಹಾಕಿಸಿಕೊಂಡಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!