
ಮೈಸೂರು(ಆ.26): ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದ ಚಿರತೆಯನ್ನು ದತ್ತು ಸ್ವೀಕಾರವನ್ನು ನವೀಕರಿಸಿಕೊಂಡಿದ್ದಾರೆ. ಈ ಮೂಲಕ ವೇದಾ ತಮ್ಮ ಸಾಮಾಜಿ ಕಾರ್ಯವನ್ನ ಮುಂದುವರಿಸಿದ್ದಾರೆ.
ವೇದಾ ₹35 ಸಾವಿರ ಪಾವತಿಸಿ ಭಾವನಾ ಎಂಬ ಹೆಸರಿನ ಚಿರತೆಯನ್ನು ಮುಂದಿನ ಸೆ.9 ರಿಂದ 2019ರ ಸೆ.8ರವರೆಗೆ ನವೀಕರಿಸಿರುವುದಕ್ಕಾಗಿ ಮೃಗಾಲಯವು ಅವರನ್ನು ಅಭಿನಂದಿಸಿದೆ. ಚಿರತೆ ದತ್ತು ಸ್ವೀಕಾರದ ನವೀಕರಣಕ್ಕೆ ವೇದಾ ಕೃಷ್ಣಮೂರ್ತಿ ತೋರಿಸುತ್ತಿರುವ ಆಸಕ್ತಿ ಪ್ರಶಂಸನೀಯ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಹೇಳಿದ್ದಾರೆ.
ಭಾರತ ತಂಡದ ಪ್ರಮುಖ ಆಟಗಾರ್ತಿಯಾಗಿ ಗುರುತಿಸಿಕೊಂಡಿರುವ ಕನ್ನಡತಿ ವೇದಾ ಕೃಷ್ಣಮೂರ್ತಿ, ಇತ್ತೀಚೆಗೆ ನಡೆದ ಚಾಲೆಂಜರ್ ಟಿ20 ಟ್ರೋಫಿ ಟೂರ್ನಿಯಲ್ಲಿ ಇಂಡಿಯಾ ಗ್ರೀನ್ ತಂಡವನ್ನ ಮುನ್ನಡೆಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.