ಹೊಸ ಇನಿಂಗ್ಸ್ ಆರಂಭಿಸಲು ರೆಡಿಯಾದ ಶ್ರೀಶಾಂತ್

Published : Sep 02, 2017, 09:26 PM ISTUpdated : Apr 11, 2018, 01:12 PM IST
ಹೊಸ ಇನಿಂಗ್ಸ್ ಆರಂಭಿಸಲು ರೆಡಿಯಾದ ಶ್ರೀಶಾಂತ್

ಸಾರಾಂಶ

ಈ ಹಿಂದೆ ಕೆಲ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡಿದ್ದ ಶ್ರೀಶಾಂತ್, ಆ ಬಳಿಕ ಟೀಂ-5 ಎಂಬ ಮಲೆಯಾಳಂ ಚಿತ್ರದಲ್ಲೂ ನಟಿಸಿದ್ದರು. ಇದೀಗ ಬಾಲಿವುಡ್'ನಲ್ಲಿ ಮಿಂಚಲು ಶ್ರೀಶಾಂತ್ ರೆಡಿಯಾಗಿದ್ದಾರೆ.  

ಬೆಂಗಳೂರು(ಸೆ.02): ವಿವಾದಾತ್ಮಕ ಕ್ರಿಕೆಟಿಗ ಎಸ್. ಶ್ರೀಶಾಂತ್ ಬಾಲಿವುಡ್'ನಲ್ಲಿ ಹೊಸ ಇನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ.

ಹೌದು, ಅತಿ ಶೀಘ್ರದಲ್ಲಿಯೇ ತೆರೆಕಾಣಲಿರುವ ಬಾಲಿವುಡ್'ನ ಥ್ರಿಲ್ಲರ್ ಸಿನಿಮಾ ಅಕ್ಸರ್-2 ಚಿತ್ರದಲ್ಲಿ ಶ್ರೀಶಾಂತ್ ಕಾಣಿಸಿಕೊಳ್ಳಲ್ಲಿದ್ದಾರೆ. ಅಭಿನವ್ ಶುಕ್ಲ, ಜರೀನಾ ಖಾನ್ ಹಾಗೂ ಗೌತಮ್ ರೋಡಿ ಅವರೊಂದಿಗೆ ಕೇರಳ ಕ್ರಿಕೆಟಿಗ ಅಕ್ಸರ್-2 ಸಿನಿಮಾದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ವಿವಾದದ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಶಾಂತ್, " ಈ ಕುರಿತಂತೆ ಬಿಸಿಸಿಐ ಅನ್ನು ಕೇಳಿ. ನಾನೀಗ ಶ್ರೀಶಾಂತ್'ನನ್ನು ಒಬ್ಬ ಕಲಾವಿದನಾಗಿ ಜನರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದರ ಬಗ್ಗೆ ಸಾಕಷ್ಟು ಕುತೂಹಲದಿಂದಿದ್ದೇನೆ" ಎಂದಿದ್ದಾರೆ.

ಈ ಹಿಂದೆ ಕೆಲ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡಿದ್ದ ಶ್ರೀಶಾಂತ್, ಆ ಬಳಿಕ ಟೀಂ-5 ಎಂಬ ಮಲೆಯಾಳಂ ಚಿತ್ರದಲ್ಲೂ ನಟಿಸಿದ್ದರು. ಇದೀಗ ಬಾಲಿವುಡ್'ನಲ್ಲಿ ಮಿಂಚಲು ಶ್ರೀಶಾಂತ್ ರೆಡಿಯಾಗಿದ್ದಾರೆ.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್ ಗುಂಡಿನ ದಾಳಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಕ್ರಿಕೆಟಿಗ ವಾನ್, ಭಯಾನಕ ಘಟನೆ
IPL 2026 ಮಿನಿ ಹರಾಜಿನಲ್ಲಿ ಈ 4 ಆಟಗಾರರ ಮೇಲೆ ಕಣ್ಣಿಟ್ಟಿವೆ ಎಲ್ಲಾ ಫ್ರಾಂಚೈಸಿಗಳು!