
ನ್ಯೂಯಾರ್ಕ್(ಸೆ.02): ಸುಮಾರು 15 ತಿಂಗಳ ನಿಷೇಧದ ಬಳಿಕ ಮೊದಲ ಬಾರಿಗೆ ಗ್ರ್ಯಾಂಡ್'ಸ್ಲಾಂನಲ್ಲಿ ಆಡುತ್ತಿರುವ ರಷ್ಯಾದ ಮರಿಯಾ ಶರಪೋವಾ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ 4ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
2006ರ ಯುಎಸ್ ಓಪನ್ ಚಾಂಪಿಯನ್, ಮೂರನೇ ಸುತ್ತಿನಲ್ಲಿ ಅಮೆರಿಕದ ಯುವ ಆಟಗಾರ್ತಿ ಸೊಫಿಯಾ ಕೆನಿನ್ ವಿರುದ್ಧ 7-5, 6-2 ನೇರ ಸೆಟ್'ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಪ್ರೀ ಕ್ವಾರ್ಟರ್'ನಲ್ಲಿ ಶರಪೋವಾ ಲಾತ್ವಿಯಾದ ಅನಸ್ತಾಸಿಯಾ ಸೆವಸ್ಟೊವಾ ವಿರುದ್ಧ ಸೆಣಸಾಡಲಿದ್ದಾರೆ.
ಇನ್ನು ಮೂರನೇ ಶ್ರೇಯಾಂಕಿತೆ ಸ್ಪೇನ್'ನ ಗಾರ್ಬೈನ್ ಮುಗುರುಜಾ ಹಾಗೂ 9ನೇ ಶ್ರೇಯಾಂಕಿತೆ ಅಮೆರಿಕದ ವೀನಸ್ ವಿಲಿಯಮ್ಸ್ ಸಹ 3ನೇ ಸುತ್ತಿನಲ್ಲಿ ಸುಲಭ ಜಯ ಸಾಧಿಸಿದರು.
ಸ್ಲೊವಾಕಿಯಾದ ಮಾಗ್ದಲೆನಾ ರೈಬಾರಿಕೊವಾ ವಿರುದ್ಧ ಮುಗುರುಜಾ 6-1, 6-1 ಸೆಟ್'ಗಳಲ್ಲಿ ಜಯಿಸಿದರೆ, ಗ್ರೀಸ್'ನ ಮರಿಯಾ ಸಕ್ಕಾರಿ ವಿರುದ್ಧ ವೀನಸ್ 6-3, 6-4ರಲ್ಲಿ ಗೆದ್ದು 4ನೇ ಸುತ್ತಿಗೆ ಕಾಲಿರಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.