ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ, ಬಿಗ್‌ಬಾಸ್ ಖ್ಯಾತಿಯ ಎನ್.ಸಿ ಅಯ್ಯಪ್ಪ!

Published : Jan 20, 2019, 03:30 PM ISTUpdated : Jan 20, 2019, 05:45 PM IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ, ಬಿಗ್‌ಬಾಸ್ ಖ್ಯಾತಿಯ ಎನ್.ಸಿ ಅಯ್ಯಪ್ಪ!

ಸಾರಾಂಶ

ಕ್ರಿಕೆಟಿಗ, ಬಿಗ್‌ಬಾಸ್ ಖ್ಯಾತಿಯ ಎನ್.ಸಿ.ಅಯ್ಯಪ್ಪ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ಯಾಂಡಲ್‌ವುಡ್ ನಟಿ ಕೈಹಿಡಿದಿರುವ ಅಯ್ಯಪ್ಪ ವಿವಾಹ ಮಹೋತ್ಸವ ಹೇಗಿತ್ತು? ಇಲ್ಲಿದೆ ವಿವರ.  

ವಿರಾಜಪೇಟೆ(ಜ.20): ಕರ್ನಾಟಕ ರಣಜಿ ತಂಡದಲ್ಲಿ ಮಿಂಚಿ ಬಳಿಕ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಕನ್ನಡಿಗರ ಮನೆ ಮಾತಾದ ಕೊಡಗಿನ ಎನ್.ಸಿ ಅಯ್ಯಪ್ಪ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗಿನ ಕುವರಿ, ಸ್ಯಾಂಡಲ್‌ವುಡ್ ನಟಿ ಅನು ಪೂವಮ್ಮ ಜೊತೆ ಅಯ್ಯಪ್ಪ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: ವಿಶ್ವಕಪ್: ಸಚಿನ್ ತೆಂಡುಲ್ಕರ್ 4 ದಾಖಲೆ ಯಾವುತ್ತೂ ಪುಡಿಯಾಗಲ್ಲ!

ಕೊಡಗಿನ ವಿರಾಜಪೇಟೆಯ ಕೊಡವ ಸಮಾಜದಲ್ಲಿ ಸಿದ್ದಗೊಂಡಿದ್ದ ವರ್ಣರಂಜಿತ ಸಭಾಂಗಣದಲ್ಲಿ ಇಂದು(ಜ.20) ತಮ್ಮ ಅಪಾರ ಸಂಖ್ಯೆಯ ಬಂಧು ಬಳಗದವರ ಸಮ್ಮುಖದಲ್ಲಿ ಹಸೆಮಣೆ ಏರಿದರು. ಕೊಡವ ಸಂಪ್ರದಾಯದಂತೆ ಮಂಟಪದಲ್ಲಿನ ಕಾವೇರಿ ಮಾತೆ ಹಾಗು ಇಗ್ಗುತಪ್ಪನಿಗೆ ಪೂಜೆ ಸಲ್ಲಿಸಿದ ನಂತರ, ದಂಪತಿ ಮುಹೂರ್ತ ನೆರವೇರಿತು. ಬಳಿಕ ವಿವಾಹಕ್ಕೆ ಆಗಮಿಸಿದ್ದ ಎಲ್ಲರೂ ವಧು ವರರಿಗೆ ಶುಭಾಶಯ ಕೋರಿದರು,  ಕೊಡವ ಸಂಪ್ರದಾಯದ ಪ್ರಕಾರ ವಧುವರರಿಬ್ಬರು ಪರಸ್ಪರ ಆಹ ಬದಲಾಯಿಸಿಕೊಳ್ಳೋ ಮೂಲಕ ವಿವಾಹ ಮುಹೂರ್ತ ಕೊನೆಯಾಯಿತು.

"

ಇದನ್ನೂ ಓದಿ: ತನ್ನ ಪ್ರೇಯಸಿಯನ್ನು ಜಗತ್ತಿಗೆ ಪರಿಚಯಿಸಿದ ಪಂತ್

 2016ರಲ್ಲಿ ಅಯ್ಯಪ್ಪ ಹಾಗೂ ಅನು ಪೂವಮ್ಮ ಮೊದಲಬಾರಿಗೆ ಭೇಟಿಯಾಗಿದ್ದರು. ಬಳಿಕ ಸ್ನೇಹ ಪ್ರೀತಿಗೆ ತಿರುಗಿ ಇದೀಗ ಮದುವೆಯ ಅರ್ಥ ಪಡೆದುಕೊಂಡಿದೆ.  ಅನು ಪೂವಮ್ಮ ಮೂಲತಃ ಕೊಡಗಿನವರಾಗಿದ್ದು, ಕಳೆದ ಮೇನಲ್ಲಿಯೇ ಈ ಜೋಡಿಯು ಕೊಡವ ಸಂಪ್ರದಾಯದಂತೆ ಬೆಂಗಳೂರಿನ ಕೊಡವ ಸಮಾಜದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 

ಇಂದು ಬೆಳಿಗ್ಗೆಯಿಂದಲೆ ವಿರಾಜಪೇಟೆಯ ಕೊಡವ ಸಮಾಜದಲ್ಲಿ ಕೊಡವ ಸಂಪ್ರದಾಯದಲ್ಲಿ ಚಿತ್ರನಟಿ ಪ್ರೇಮ ಅವರ ಕುಟುಂಬಸ್ಥರು ಸೇರಿದಂತೆ ಅಪಾರ ಸಂಖ್ಯೆಯ ಗಣ್ಯರು, ಬಂಧುಗಳು ಶುಭಕೋರಿ ನವ ವಧುವರರನ್ನು ಹಾರೈಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?