ಕೊಹ್ಲಿ ಇರೋದೇ ತೆಂಡುಲ್ಕರ್ ದಾಖಲೆ ಮುರಿಯೋದಕ್ಕಾ..?

By Web DeskFirst Published Oct 24, 2018, 3:40 PM IST
Highlights

ಈಗಾಗಲೇ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿರುವ ಹಲವಾರು ದಾಖಲೆಗಳನ್ನು ವಿರಾಟ್ ಕೊಹ್ಲಿ ಈಗಾಗಲೇ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಇಂದಿನ ಪಂದ್ಯದಲ್ಲೂ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ 2 ದಾಖಲೆಗಳನ್ನು ಅಳಿಸಿಹಾಕಿದ್ದಾರೆ.

ವಿಶಾಕಪಟ್ಟಣಂ[ಅ.24]: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆಗಳನ್ನು ಬರೆಯುತ್ತಲೇ ಸಾಗುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ಮತ್ತೆರೆಡು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಇದೀಗ ವಿರಾಟ್ ಕೊಹ್ಲಿ ಇರುವುದೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ದಾಖಲೆ ಮುರಿಯುವುದಕ್ಕಾ ಎನ್ನುವ ಅನುಮಾನ ದಟ್ಟವಾಗತೊಡಗಿದೆ. ಕ್ರಿಕೆಟ್ ದೇವರೆಂದೇ ಹೆಸರಾಗಿರುವ ಸಚಿನ್ ತೆಂಡುಲ್ಕರ್ ನಿವೃತ್ತಿಗೂ ಮುನ್ನ ಹಲವಾರು ದಾಖಲೆಗಳನ್ನು ಬರೆದಿದ್ದರು. ಈಗಾಗಲೇ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿರುವ ಹಲವಾರು ದಾಖಲೆಗಳನ್ನು ವಿರಾಟ್ ಕೊಹ್ಲಿ ಈಗಾಗಲೇ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಇಂದಿನ ಪಂದ್ಯದಲ್ಲೂ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ 2 ದಾಖಲೆಗಳನ್ನು ಅಳಿಸಿಹಾಕಿದ್ದಾರೆ.

ಯಾವುದವು ದಾಖಲೆಗಳು...?

* ತವರಿನಲ್ಲಿ ಅತಿ ವೇಗವಾಗಿ 4 ಸಾವಿರ ರನ್ ಪೂರೈಸಿದ ಸಾಧನೆ: ವಿರಾಟ್ ಕೊಹ್ಲಿ ಕೇವಲ 78 ಇನ್ನಿಂಗ್ಸ್’ಗಳಲ್ಲಿ 4 ಸಾವಿರ ರನ್ ಪೂರೈಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಇದಕ್ಕೂ ಮೊದಲು ಭಾರತ ಪರ ಸಚಿನ್ ತೆಂಡುಲ್ಕರ್ 92 ಇನ್ನಿಂಗ್ಸ್’ಗಳಲ್ಲಿ 4 ಸಾವಿರ ರನ್ ಬಾರಿಸಿದ್ದರು. ಎಬಿ ಡಿವಿಲಿಯರ್ಸ್ 91 ಇನ್ನಿಂಗ್ಸ್’ಗಳಲ್ಲಿ 4 ಸಾವಿರ ರನ್ ಬಾರಿಸಿ ಸಚಿನ್ ದಾಖಲೆ ಮುರಿದಿದ್ದರು. ಇದೀಗ ಕೊಹ್ಲಿ ಇವರಿಬ್ಬರ ದಾಖಲೆ ಅಳಿಸಿಹಾಕಿ ಹೊಸ ದಾಖಲೆ ಬರೆದಿದ್ದಾರೆ.

* ಇಂಡೋ-ವಿಂಡೀಸ್ ಏಕದಿನ ಸರಣಿಯಲ್ಲಿ ಕೊಹ್ಲಿಯೇ ಸರದಾರ: ಭಾರತ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಈ ಮೊದಲು ಸಚಿನ್ ತೆಂಡುಲ್ಕರ್ 1573 ರನ್ ಸಿಡಿಸಿದ್ದರು. ಇದೀಗ ಕೊಹ್ಲಿ 1574+ ರನ್ ಸಿಡಿಸುವ ಮೂಲಕ ಆ ದಾಖಲೆಯೂ ಕೊಹ್ಲಿ ಪಾಲಾಗಿದೆ. ಸಚಿನ್ ತೆಂಡುಲ್ಕರ್ ವಿಂಡೀಸ್ ಎದುರು 39 ಇನ್ನಿಂಗ್ಸ್’ಗಳಲ್ಲಿ 1573 ರನ್ ಬಾರಿಸಿದ್ದರೆ, ಕೊಹ್ಲಿ ಕೇವಲ 29 ಇನ್ನಿಂಗ್ಸ್’ಗಳಲ್ಲಿ 1574+ ರನ್ ಬಾರಿಸಿ ಮುನ್ನುಗ್ಗುತ್ತಿದ್ದಾರೆ.

ಈಗಾಗಲೇ ಕೊಹ್ಲಿ ಅರ್ಧಶತಕ ಪೂರೈಸಿದ್ದು, ಇಂದೇ 10 ಸಾವಿರ ರನ್ ಬಾರಿಸುವ ಸನೀಹದಲ್ಲಿದ್ದಾರೆ. ಟಾಸ್ ಗೆದ್ದ ಟೀಂ ಇಂಡಿಯಾ 29 ಓವರ್’ಗಳಲ್ಲಿ 2 ವಿಕೆಟ್ ನಷ್ಟಕ್ಕೆ 153 ರನ್ ಬಾರಿಸಿದ್ದು, ಕೊಹ್ಲಿ 56 ಹಾಗೂ ಅಂಬಟಿ ರಾಯುಡು 62 ರನ್ ಸಿಡಿಸಿದ್ದಾರೆ.

click me!