ಕೊಹ್ಲಿ ಜತೆಗಿನ ಹೋಲಿಕೆ ಬಗ್ಗೆ ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್ ಹೇಳಿದ್ದೇನು..?

Published : Nov 02, 2018, 01:21 PM IST
ಕೊಹ್ಲಿ ಜತೆಗಿನ ಹೋಲಿಕೆ ಬಗ್ಗೆ ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್ ಹೇಳಿದ್ದೇನು..?

ಸಾರಾಂಶ

‘ವರ್ಷಗಳು ಉರುಳಿದಂತೆ ಕೊಹ್ಲಿ ಬೆಳೆಯುತ್ತಿರುವ ವೇಗ ಹಾಗೂ ರೀತಿ ಅಚ್ಚರಿ ಮೂಡಿಸುತ್ತದೆ. ಅವರಲ್ಲಿ ಪ್ರತಿಭೆಯಿದೆ ಎನ್ನುವುದನ್ನು ನಾನು ಸದಾ ಗಮನಿಸಿದ್ದೇನೆ. ಅವರೊಬ್ಬ ಶ್ರೇಷ್ಠ ಕ್ರಿಕೆಟಿಗನಾಗಿ ಬೆಳೆಯುತ್ತಾರೆ ಎಂದು ನನಗೆ ಸದಾ ಅನಿಸುತ್ತಿತ್ತು. ಆದರೆ ನನ್ನೊಂದಿಗೆ ಅಥವಾ ಯಾರೊಂದಿಗೂ ಹೋಲಿಕೆ ಮಾಡುವುದು ಸರಿಯಲ್ಲ. ಪ್ರತಿಯೊಬ್ಬರೂ ಬೇರೆ ಬೇರೆ ರೀತಿಯ ಸವಾಲುಗಳನ್ನು ಎದುರಿಸಿದ್ದಾರೆ’ ಎಂದು ಸಚಿನ್‌ ಹೇಳಿದ್ದಾರೆ.

ಮುಂಬೈ[ನ.02]: ವಿರಾಟ್‌ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು, ಆದರೆ ಹೋಲಿಕೆಗಳಲ್ಲಿ ನನಗೆ ನಂಬಿಕೆಯಿಲ್ಲ ಎಂದು ‘ಕ್ರಿಕೆಟ್‌ ದೇವರು’ ಎಂದೇ ಕರೆಸಿಕೊಳ್ಳುವ ಸಚಿನ್‌ ತೆಂಡುಲ್ಕರ್‌ ಅಭಿಪ್ರಾಯಿಸಿದ್ದಾರೆ. 

ಇದನ್ನು ಓದಿ: ಕೊಹ್ಲಿ ಇರೋದೇ ತೆಂಡುಲ್ಕರ್ ದಾಖಲೆ ಮುರಿಯೋದಕ್ಕಾ..?

‘ವರ್ಷಗಳು ಉರುಳಿದಂತೆ ಕೊಹ್ಲಿ ಬೆಳೆಯುತ್ತಿರುವ ವೇಗ ಹಾಗೂ ರೀತಿ ಅಚ್ಚರಿ ಮೂಡಿಸುತ್ತದೆ. ಅವರಲ್ಲಿ ಪ್ರತಿಭೆಯಿದೆ ಎನ್ನುವುದನ್ನು ನಾನು ಸದಾ ಗಮನಿಸಿದ್ದೇನೆ. ಅವರೊಬ್ಬ ಶ್ರೇಷ್ಠ
ಕ್ರಿಕೆಟಿಗನಾಗಿ ಬೆಳೆಯುತ್ತಾರೆ ಎಂದು ನನಗೆ ಸದಾ ಅನಿಸುತ್ತಿತ್ತು. ಆದರೆ ನನ್ನೊಂದಿಗೆ ಅಥವಾ ಯಾರೊಂದಿಗೂ ಹೋಲಿಕೆ ಮಾಡುವುದು ಸರಿಯಲ್ಲ. ಪ್ರತಿಯೊಬ್ಬರೂ ಬೇರೆ ಬೇರೆ ರೀತಿಯ
ಸವಾಲುಗಳನ್ನು ಎದುರಿಸಿದ್ದಾರೆ’ ಎಂದು ಸಚಿನ್‌ ಹೇಳಿದ್ದಾರೆ.

ಇದನ್ನು ಓದಿ: 38ನೇ ಶತಕ ಸಿಡಿಸಿದ ಕಿಂಗ್ ಕೊಹ್ಲಿ ಗುಡ್ಡೆಹಾಕಿದ ದಾಖಲೆಗಳೆಷ್ಟು...?

ಪ್ರತಿಪಂದ್ಯದಲ್ಲೂ ಸಚಿನ್ ತೆಂಡುಲ್ಕರ್ ಅವರ ಒಂದಲ್ಲಾ ಒಂದು ದಾಖಲೆಗಳನ್ನು ಹಿಂದಿಕ್ಕುತ್ತಾ ಸಾಗುತ್ತಿರುವ ವಿರಾಟ್ ಕೊಹ್ಲಿ ಅವರನ್ನು ಅಭಿಮಾನಿಗಳು ಈಗಾಗಲೇ ಮಾಸ್ಟರ್ ಬ್ಲಾಸ್ಟರ್’ಗೆ ಹೋಲಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸಚಿನ್’ಗಿಂತ ವೇಗವಾಗಿ 10 ಸಾವಿರ ರನ್ ಪೂರೈಸಿದ ಸಾಧನೆಯನ್ನು ವಿರಾಟ್ ಮಾಡಿದ್ದರು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!
ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!