ಐಪಿಎಲ್ ಹರಾಜು: ಆಟಗಾರರ ಖರೀದಿಗೆ ತಂಡದಲ್ಲಿರುವ ಬಾಕಿ ಹಣವೆಷ್ಟು?

By Web Desk  |  First Published Dec 14, 2018, 8:22 PM IST

ಜೈಪುರದಲ್ಲಿ ನಡೆಯಲಿರುವ ಐಪಿಎಲ್ ಹರಾಜಿಗೆ ಸಕಲ ಸಿದ್ಧತೆಗಳು ನಡೆದಿದೆ. ಆಟಗಾರರನ್ನ ಖರೀದಿಸಲು ಫ್ರಾಂಚೈಸಿಗಳ ಬಳಿ ಇರೋ ಹಣವೆಷ್ಟು? ಎಷ್ಟು ಆಟಗಾರರನ್ನ ಖರೀದಿಸಬಹುದು? ಇಲ್ಲಿದೆ ಲಿಸ್ಟ್.


ಜೈಪುರ(ಡಿ.14): ಐಪಿಎಲ್ ಹರಾಜಿಗೆ ಫ್ರಾಂಚೈಸಿಗಳು ಲೆಕ್ಕಾಚಾರ ಆರಂಭಗೊಂಡಿದೆ. ಯಾರನ್ನ ಖರೀದಿಸಬೇಕು? ಎಷ್ಟು ಹಣ ಖರ್ಚು ಮಾಡಬೇಕು ಅನ್ನೋ ಲೆಕ್ಕ ಶುರುವಾಗಿದೆ. ಡಿಸೆಂಬರ್ 18 ರಂದು ಜೈಪುರದಲ್ಲಿ ನಡೆಯಲಿರುವ ಹರಾಜಿಗೆ 346 ಆಟಗಾರರನ್ನ ಶಾರ್ಟ್ ಲಿಸ್ಟ್ ಮಾಡಲಾಗಿದೆ.

ಇದನ್ನೂ ಓದಿ: ಐಪಿಎಲ್ ಹರಾಜು: 346 ಆಟಗಾರರ ಶಾರ್ಟ್‌ಲಿಸ್ಟ್-ಯಾರಿಗಿದೆ ಅವಕಾಶ?

Latest Videos

undefined

ಹರಾಜಿಕೆ ಸಿದ್ದವಾಗಿರುವ ಫ್ರಾಂಚೈಸಿಗಳು ಅಳೆದು ತೂಗಿ ಆಟಗಾರರನ್ನ ಖರೀದಿಸಬೇಕಿದೆ. ಕಾರಣ ತಮ್ಮಲ್ಲಿರುವ ಹಣ ಹಾಗೂ  ಗರಿಷ್ಠ ಆಟಗಾರರ ಸಂಖ್ಯೆ ಗಮನದಲ್ಲಿರಿಸಿ ಆಟಗಾರರನ್ನ ಖರೀದಿಸಬೇಕಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿ ಗರಿಷ್ಠ ಹಣವಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಬಳಿ ಕನಿಷ್ಠ ಹಣವಿದೆ. ಇಲ್ಲಿದೆ ಫ್ರಾಂಚೈಸಿಗಳಲ್ಲಿರುವ ಬಾಕಿ ಹಣ ಹಾಗೂ ಇತರ ವಿವರ.

ಫ್ರಾಂಚೈಸಿ ಒಟ್ಟು ಆಟಗಾರರು ವಿದೇಶಿ ಆಟಗಾರರು ಖರ್ಚು ಮಾಡಿದ ಹಣ ಬಾಕಿ ಹಣ ಗರಿಷ್ಠ ಖರೀದಿ 
ಸಿಎಸ್‌ಕೆ 23 8 73.60 ಕೋಟಿ 8.40 ಕೋಟಿ 2
ಡೆಲ್ಲಿ 15 5 56.50 ಕೋಟಿ 25.50 ಕೋಟಿ 10
ಪಂಜಾಬ್ 10 4 45.80 ಕೋಟಿ 36.20 ಕೋಟಿ 15
ಕೆಕೆಆರ್ 13 3 66.80 ಕೋಟಿ 15.20 ಕೋಟಿ 12
ಮುಂಬೈ 18 7 70.85 ಕೋಟಿ 11.15 ಕೋಟಿ 7
ಆರ್‌ಆರ್ 16 5 61.05 ಕೋಟಿ 20.95 ಕೋಟಿ 9
ಆರ್‌ಸಿಬಿ 15 6 63.85 ಕೋಟಿ 18.15 ಕೋಟಿ 10
ಎಸ್‌ಆರ್‌ಎಚ್ 20 6 72.30 ಕೋಟಿ 9.70 ಕೋಟಿ 5
ಒಟ್ಟು 130 44 510.75 ಕೋಟಿ 145.25 ಕೋಟಿ 70

 

click me!