ಆಸಿಸ್’ಗೆ ಆರಂಭದಲ್ಲೇ ಆಘಾತ; 2 ವಿಕೆಟ್ ಪತನ

Published : Feb 24, 2019, 09:07 PM IST
ಆಸಿಸ್’ಗೆ ಆರಂಭದಲ್ಲೇ ಆಘಾತ; 2 ವಿಕೆಟ್ ಪತನ

ಸಾರಾಂಶ

ಮೊದಲ ಓವರ್’ನಿಂದಲೇ ಆಕ್ರಮಣಕಾರಿಯಾಟಕ್ಕೆ ಮುಂದಾದ ಭಾರತ ಕೇವಲ 4 ರನ್ ಬಿಟ್ಟುಕೊಟ್ಟಿತು. ಎರಡನೇ ಓವರ್’ನಲ್ಲಿ ಚಹಲ್ ಕೇವಲ ಒಂದು ರನ್ ನೀಡಿದರು. ಈ ವೇಳೆ ಇಲ್ಲದ ರನ್ ಕದಿಯಲ್ ಹೋಗಿ ಸ್ಟೋನಿಸ್ ರನೌಟ್ ಬಲೆಗೆ ಬಿದ್ದರು.

ವೈಜಾಗ್[ಫೆ.24]: ಟೀಂ ಇಂಡಿಯಾ ನೀಡಿರುವ ಸ್ಪರ್ಧಾತ್ಮಕ ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ ತಂಡವು ಆರಂಭದಲ್ಲೇ ಆಘಾತಕ್ಕೆ ಒಳಗಾಗಿದ್ದು ಕೇವಲ 5 ರನ್ ಬಾರಿಸುವಷ್ಟರಲ್ಲೇ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿದೆ.

ಆಸಿಸ್’ಗೆ ಸ್ಪರ್ಧಾತ್ಮಕ ಗುರಿ ನೀಡಿದ ಟೀಂ ಇಂಡಿಯಾ

ಮೊದಲ ಓವರ್’ನಿಂದಲೇ ಆಕ್ರಮಣಕಾರಿಯಾಟಕ್ಕೆ ಮುಂದಾದ ಭಾರತ ಕೇವಲ 4 ರನ್ ಬಿಟ್ಟುಕೊಟ್ಟಿತು. ಎರಡನೇ ಓವರ್’ನಲ್ಲಿ ಚಹಲ್ ಕೇವಲ ಒಂದು ರನ್ ನೀಡಿದರು. ಈ ವೇಳೆ ಇಲ್ಲದ ರನ್ ಕದಿಯಲ್ ಹೋಗಿ ಸ್ಟೋನಿಸ್ ರನೌಟ್ ಬಲೆಗೆ ಬಿದ್ದರು. ಇದಾದ ಬೆನ್ನಲ್ಲೇ ನಾಯಕ ಆ್ಯರೋನ್ ಫಿಂಚ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಬುಮ್ರಾ ಬೌಲಿಂಗ್’ನಲ್ಲಿ ಫಿಂಚ್ ಎಲ್’ಬಿ ಬಲೆಗೆ ಬಿದ್ದರು.

ಇದೀಗ ಆಸ್ಟ್ರೇಲಿಯಾ 3 ಓವರ್ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು ಕೇವಲ 9 ರನ್ ಬಾರಿಸಿದೆ. ಡಾರ್ಶಿ ಶಾರ್ಟ್ ಹಾಗೂ ಗ್ಲೇನ್ ಮ್ಯಾಕ್ಸ್’ವೆಲ್ ಕ್ರೀಸ್’ನಲ್ಲಿದ್ದಾರೆ. 

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ಭಾರತ 7 ವಿಕೆಟ್ ಕಳೆದುಕೊಂಡು 126 ರನ್ ಬಾರಿಸಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!
U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!