ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ: ಟೀಂ ಇಂಡಿಯಾದಲ್ಲಿ ಅಚ್ಚರಿಯ ಆಯ್ಕೆ

By Web DeskFirst Published Feb 24, 2019, 6:45 PM IST
Highlights

ಭುವನೇಶ್ವರ್ ಬದಲಿಗೆ ಉಮೇಶ್ ಯಾದವ್ ಹಾಗೆಯೇ ವಿಜಯ್ ಶಂಕರ್ ಬದಲಿಗೆ ಮಾರ್ಕಂಡೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಎರಡು ಪಂದ್ಯಗಳ ಟಿ20 ಸರಣಿಗೆ ಮೂರು ವಾರಗಳ ಬಳಿಕ ನಾಯಕ ವಿರಾಟ್ ಕೊಹ್ಲಿ ತಂಡಕೂಡಿಕೊಂಡಿದ್ದಾರೆ. 
 

ವೈಜಾಗ್[ಫೆ.24]: ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿದೆ. ಯುವ ಲೆಗ್’ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದಾರೆ.

ಇಲ್ಲಿನ ಡಾ. ವೈ.ಎಸ್ ರಾಜಶೇಖರ ರೆಡ್ಡಿ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಶುಭಾರಂಭ ಮಾಡುವ ವಿಶ್ವಾಸದಲ್ಲಿವೆ. ಭಾರತ ತಂಡವು ಕೆಲವು ಅಚ್ಚರಿಯ ನಿರ್ಧಾರದೊಂದಿಗೆ ಕಣಕ್ಕಿಳಿದಿದ್ದು, ಶಿಖರ್ ಧವನ್’ಗೆ ವಿಶ್ರಾಂತಿ ನೀಡಲಾಗಿದೆ. ರೋಹಿತ್ ಜತೆಗೆ ಕನ್ನಡಿಗ ಕೆ.ಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇನ್ನು ಭುವನೇಶ್ವರ್ ಬದಲಿಗೆ ಉಮೇಶ್ ಯಾದವ್ ಹಾಗೆಯೇ ವಿಜಯ್ ಶಂಕರ್ ಬದಲಿಗೆ ಮಾರ್ಕಂಡೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಎರಡು ಪಂದ್ಯಗಳ ಟಿ20 ಸರಣಿಗೆ ಮೂರು ವಾರಗಳ ಬಳಿಕ ನಾಯಕ ವಿರಾಟ್ ಕೊಹ್ಲಿ ತಂಡಕೂಡಿಕೊಂಡಿದ್ದಾರೆ. 

ಇನ್ನು ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು ಆ್ಯರೋನ್ ಫಿಂಚ್ ಮುನ್ನಡೆಸುತ್ತಿದ್ದು, ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ಪೀಟರ್ ಹ್ಯಾಂಡ್ಸ್’ಕಂಬ್ ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದಾರೆ. 

ತಂಡಗಳು ಹೀಗಿವೆ:

ಭಾರತ:

1st T20I. India XI: R Sharma, L Rahul, V Kohli, R Pant, MS Dhoni, D Karthik, K Pandya, U Yadav, Y Chahal, M Markande, J Bumrah https://t.co/qKQdie3Ayg

— BCCI (@BCCI)

ಆಸ್ಟ್ರೇಲಿಯಾ: 

1st T20I. Australia XI: A Finch, D Short, M Stoinis, G Maxwell, P Handscomb, A Turner, N Coulter-Nile, P Cummins, J Richardson, J Behrendorff, A Zampa https://t.co/qKQdie3Ayg

— BCCI (@BCCI)
click me!