‘ಆಟಗಾರರ ಸುರಕ್ಷತೆ ಹಾಗೂ ಭದ್ರತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಭದ್ರತೆಗೆ ಸಿದ್ಧಪಡಿಸಿರುವ ಯೋಜನೆಗಳನ್ನು ಬಿಸಿಸಿಐಗೆ ವಿವರಿಸುತ್ತೇವೆ. ಬಿಸಿಸಿಐ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಲಿ. ಮತ್ತಿನ್ಯಾವುದೇ ವ್ಯವಸ್ಥೆ ಅಗತ್ಯವಿದ್ದರೆ ಕಲ್ಪಿಸುತ್ತೇವೆ. ಎಲ್ಲಾ ತಂಡಗಳಿಗೂ ಸೂಕ್ತ ಭದ್ರತೆ ನೀಡಲಾಗುವುದು’ ಎಂದು ಶಶಾಂಕ್ ಹೇಳಿದ್ದಾರೆ.
ದುಬೈ(ಫೆ.24): ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ವೇಳೆ ಭಾರತೀಯ ಆಟಗಾರರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಕೋರಿ ಬಿಸಿಸಿಐ ಬರೆದಿದ್ದ ಪತ್ರಕ್ಕೆ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಉತ್ತರಿಸಿದ್ದಾರೆ.
ಪಾಕ್ ವಿರುದ್ಧ ವಿಶ್ವಕಪ್: ಕೊನೆಗೂ ತುಟಿಬಿಚ್ಚಿದ ವಿರಾಟ್ ಕೊಹ್ಲಿ
‘ಆಟಗಾರರ ಸುರಕ್ಷತೆ ಹಾಗೂ ಭದ್ರತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಭದ್ರತೆಗೆ ಸಿದ್ಧಪಡಿಸಿರುವ ಯೋಜನೆಗಳನ್ನು ಬಿಸಿಸಿಐಗೆ ವಿವರಿಸುತ್ತೇವೆ. ಬಿಸಿಸಿಐ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಲಿ. ಮತ್ತಿನ್ಯಾವುದೇ ವ್ಯವಸ್ಥೆ ಅಗತ್ಯವಿದ್ದರೆ ಕಲ್ಪಿಸುತ್ತೇವೆ. ಎಲ್ಲಾ ತಂಡಗಳಿಗೂ ಸೂಕ್ತ ಭದ್ರತೆ ನೀಡಲಾಗುವುದು’ ಎಂದು ಶಶಾಂಕ್ ಹೇಳಿದ್ದಾರೆ.
ಪುಲ್ವಾಮಾ ದಾಳಿ: ಪಾಕಿಸ್ತಾನ ವಿರುದ್ಧ ಭಾರತ ವಿಶ್ವಕಪ್ ಪಂದ್ಯ ಆಡ್ಬೇಕಾ?
ಬಿಸಿಸಿಐ ಹಾಗೂ ಸುಪ್ರೀಂ ಕೋರ್ಟ್ ನೇಮಿತ ಆಡಳಿತ ಸಮಿತಿ[CoA] ಶುಕ್ರವಾರ ಈ ಕುರಿತಂತೆ ಸಭೆ ಸೇರಿ ಚರ್ಚೆ ನಡೆಸಿತಾದರೂ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿರಲಿಲ್ಲ. ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಬಿಸಿಸಿಐ, ಐಸಿಸಿಗೆ ಪತ್ರಬರೆದಿತ್ತು.