ನೂತನ ಟೆಸ್ಟ್‌ ರ‍್ಯಾಂಕಿಂಗ್ ಪ್ರಕಟ; ಕಿಂಗ್ ಕೊಹ್ಲಿ, ಟೀಂ ಇಂಡಿಯಾ ನಂ.1

By Web DeskFirst Published Nov 12, 2018, 4:59 PM IST
Highlights

ಕೊಹ್ಲಿ ಸದ್ಯ 935 ರೇಟಿಂಗ್‌ ಅಂಕ ಹೊಂದಿದ್ದು, 2ನೇ ಸ್ಥಾನದಲ್ಲಿರುವ ಸ್ಟೀವ್‌ ಸ್ಮಿತ್‌ (847)ಗಿಂತ 88 ಅಂಕ ಮುಂದಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ರಂಗನಾ ಹೆರಾತ್‌ 8ನೇ ಸ್ಥಾನದೊಂದಿಗೆ ನಿವೃತ್ತಿ ಪಡೆದಿದ್ದಾರೆ. 

ದುಬೈ[ನ.12]: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ನೂತನವಾಗಿ ಬಿಡುಗಡೆಗೊಂಡಿರುವ ಐಸಿಸಿ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 
ಕೊಹ್ಲಿ ಸದ್ಯ 935 ರೇಟಿಂಗ್‌ ಅಂಕ ಹೊಂದಿದ್ದು, 2ನೇ ಸ್ಥಾನದಲ್ಲಿರುವ ಸ್ಟೀವ್‌ ಸ್ಮಿತ್‌ (847)ಗಿಂತ 88 ಅಂಕ ಮುಂದಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ರಂಗನಾ ಹೆರಾತ್‌ 8ನೇ ಸ್ಥಾನದೊಂದಿಗೆ ನಿವೃತ್ತಿ ಪಡೆದಿದ್ದಾರೆ. ಹೆರಾತ್‌, ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ಗೂ ಮುನ್ನ 7ನೇ ಸ್ಥಾನದಲ್ಲಿದ್ದರು. ಭಾರತದ ಆರ್‌.ಅಶ್ವಿನ್‌ ಹಾಗೂ ರವೀಂದ್ರ ಜಡೇಜಾ ಕ್ರಮವಾಗಿ 5 ಹಾಗೂ 9ನೇ ಸ್ಥಾನ ಪಡೆದಿದ್ದಾರೆ.

ತಂಡಗಳ ವಿಭಾಗದಲ್ಲಿ ಟೀಂ ಇಂಡಿಯಾ ಮೊದಲ ಸ್ಥಾನದಲ್ಲಿದ್ದರೆ, ಆನಂತರದ ಸ್ಥಾನಗಳಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ಪಾಕಿಸ್ತಾನ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ತಂಡಗಳಿವೆ. ಇನ್ನು ಬ್ಯಾಟ್ಸ್’ಮನ್’ಗಳ ಟಾಪ್ 10 ಪಟ್ಟಿಯಲ್ಲಿ ಬಹುತೇಕ ಎಲ್ಲಾ ಸ್ಥಾನಗಳು ಸ್ಥಿರವಾಗಿದ್ದು, ದಿನೇಶ್ ಚಾಂಡಿಮಲ್ ಒಂದು ಸ್ಥಾನ ಕುಸಿದಿದ್ದು, ದಕ್ಷಿಣ ಆಫ್ರಿಕಾದ ಡೀನ್ ಎಲ್ಗಾರ್ 8ನೇ ಸ್ಥಾನಕ್ಕೆ ಏರಿದ್ದಾರೆ.

ಬ್ಯಾಟ್ಸ್’ಮನ್’ಗಳ ಟಾಪ್-10 ಪಟ್ಟಿ ಹೀಗಿದೆ...
1. ವಿರಾಟ್ ಕೊಹ್ಲಿ
2. ಸ್ಟೀವ್ ಸ್ಮಿತ್
3. ಕೇನ್ ವಿಲಿಯಮ್ಸನ್
4. ಜೋ ರೂಟ್
5. ಡೇವಿಡ್ ವಾರ್ನರ್
6. ಚೇತೇಶ್ವರ್ ಪೂಜಾರ
7. ದೀಮುತ್ ಕರುಣರತ್ನೆ
8. ಡೀನ್ ಎಲ್ಗಾರ್
9. ದಿನೇಶ್ ಚಾಂಡಿಮಲ್
10. ಏಯ್ಡನ್ ಮಾರ್ಕ್’ರಮ್

ಬೌಲರ್’ಗಳ ಟಾಪ್ 10 ಪಟ್ಟಿ
1. ಜೇಮ್ಸ್ ಆ್ಯಂಡರ್ಸನ್
2. ಕಗಿಸೋ ರಬಾಡ
3. ಮೊಹಮ್ಮದ್ ಅಬ್ಬಾಸ್
4. ವೆರ್ನಾನ್ ಫಿಲಾಂಡರ್
5. ರವೀಂದ್ರ ಜಡೇಜಾ
6. ಟ್ರೆಂಟ್ ಬೌಲ್ಟ್
7. ಪ್ಯಾಟ್ ಕಮ್ಮಿನ್ಸ್
8. ರಂಗನಾ ಹೆರಾತ್
9. ರವಿಚಂದ್ರನ್ ಅಶ್ವಿನ್
10. ಜೇಸನ್ ಹೋಲ್ಡರ್

click me!