ಚುನಾವಣೆಗೆ ಸ್ಪರ್ಧಿಸಲು ರೆಡಿಯಾದ ಹಾಲಿ ಕ್ರಿಕೆಟಿಗ..!

By Web DeskFirst Published Nov 12, 2018, 3:03 PM IST
Highlights

ಭಾನುವಾರ ಅವರು ಆಡಳಿತ ಪಕ್ಷ ಬಾಂಗ್ಲಾದೇಶ ಅವಾಮಿ ಲೀಗ್‌ನ ನಾಮನಿರ್ದೇಶನ ಪತ್ರವನ್ನು ಪಡೆದುಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. 

ಢಾಕಾ[ನ.12]: ಬಾಂಗ್ಲಾದೇಶ ಏಕದಿನ ಕ್ರಿಕೆಟ್‌ ತಂಡದ ನಾಯಕ ಮಶ್ರಫೆ ಮೊರ್ತಜಾ ಮುಂದಿನ ತಿಂಗಳು (ಡಿ.23) ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. 

ಭಾನುವಾರ ಅವರು ಆಡಳಿತ ಪಕ್ಷ ಬಾಂಗ್ಲಾದೇಶ ಅವಾಮಿ ಲೀಗ್‌ನ ನಾಮನಿರ್ದೇಶನ ಪತ್ರವನ್ನು ಪಡೆದುಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಮಶ್ರಫೆ ತಮ್ಮ ತವರೂರು ನರೈಲ್‌ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಈಗಾಗಲೇ ಸಾಮಾಜಿಕ ಕಾರ್ಯಗಳಿಂದ ಹೆಸರು ವಾಸಿಯಾಗಿದ್ದಾರೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಬಾಂಗ್ಲಾದ ಸಕ್ರಿಯ ಕ್ರಿಕೆಟಿಗನೊಬ್ಬ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಮೊರ್ತಜಾ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಶ್ರಫೆ ಬಾಂಗ್ಲಾದೇಶ ಪರ 36 ಟೆಸ್ಟ್, 199 ಏಕದಿನ ಹಾಗೂ 54 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. 2016ರ ಶ್ರೀಲಂಕಾ ಪ್ರವಾಸದ ವೇಳೆ ಟಿ20 ಮಾದರಿ ಕ್ರಿಕೆಟ್’ಗೆ ಗುಡ್’ಬೈ ಹೇಳಿರುವ ಬಲಗೈ ವೇಗಿ ಏಕದಿನ ಹಾಗೂ ಟೆಸ್ಟ್ ತಂಡದಲ್ಲಿ ಬಾಂಗ್ಲಾದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

click me!