
ಮುಂಬೈ ಜೂನ್ 13: ಆ ಹದ್ದು ಖಂಡಿತವಾಗಿಯೂ ಯೋಗ ಮಾಡಿತ್ತು. ಗಾಯಗೊಂಡಿದ್ದ ಹದ್ದೊಂದು ಮುಂಬೈನ ಸಚಿನ್ ಮನೆಯ ಬಾಲ್ಕನಿಗೆ ಬಂದು ಕುಳಿತಿದ್ದಾಗ ಅದನ್ನು ಸ್ವತಃ ಮಾಸ್ಟರ್ ಬ್ಲಾಸ್ಟರ್ ಉಪಚರಿಸಿ ಚೇತರಿಸಿಕೊಳ್ಳುವಂತೆ ಮಾಡಿದ್ದಾರೆ.
ಹದ್ದನ್ನು ನಿಧಾನವಾಗಿ ಗಮನಿಸುವ ಸಚಿನ್ ನೀರು ನೀಡುವ ಯತ್ನ ಮಾಡುತ್ತಾರೆ. ನಂತರ ತಾವೆ ಹೊರ ಹೋಗಿ ಮಾಂಸದ ತುಂಡುಗಳನ್ನು ಹದ್ದಿಗೆ ನೀಡುತ್ತಾರೆ. ಹದ್ದು ಹಾರಲು ಸಾಧ್ಯವಾಗದೆ ನಿಶ್ಯಕ್ತವಾಗಿದ್ದನ್ನು ಗಮನಿಸುವ ಸಚಿನ್ ಒಂದೊಂದೆ ವಿವರಣೆಯನ್ನು ನೀಡುತ್ತ ಹೋಗುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೖರಲ್ ಆಗುತ್ತಿದ್ದು ಈಗಾಗಲೇ ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಗೆ ಒಳಗಾಗಿದೆ.
ಮಹಿಳೆಯ ಸೂಪರ್ ಸ್ಪೀಡ್ ಗೆ ವಿರೇಂದ್ರ ಸೆಹ್ವಾಗ್ ಬೋಲ್ಡ್
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮೈದಾನದಲ್ಲಿ ಅಬ್ಬರಿಸಿವುದನ್ನು ನಿಲ್ಲಿಸಿದ್ದರೂ ತಮ್ಮ ಮಾನವೀಯ ಕೆಲಸಗಳಿಂದ ಮತ್ತೆ ಮತ್ತೆ ಸುದ್ದಿ ಮಾಡುತ್ತಿದ್ದಾರೆ. ಹದ್ದನ್ನು ಉಪಚರಿಸಿದ ಸಚಿನ್ ಜನರಿಗೆ ಕಿವಿಮಾತನ್ನು ಹೇಳಿದ್ದಾರೆ. ವಾತಾವರಣ ಹದಗೆಟ್ಟಿದ್ದು ಪಕ್ಷಿಗಳಿಗೆ ಕುಡಿಯಲು ಸರಿಯಾದ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ.ಪ್ರತಿಯೊಬ್ಬರು ತಮ್ಮ ಮನೆಯ ಬಾಲ್ಕನಿ ಬಳಿ ಪಾತ್ರೆಯೊಂದರಲ್ಲಿ ನೀರಿಡಬೇಕು ಎಂಬ ಸಲಹೆಯನ್ನು ನೀಡಿದ್ದಾರೆ. ಹದ್ದಿಗೆ ಕ್ರಿಕೆಟ್ ದೇವರು ಉಪಚರಿಸುತ್ತಿರುವ ವಿಡಿಯೋ ನೀವು ನೋಡಿಕೊಂಡು ಬನ್ನಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.