ಪರ್ತ್ ಟೆಸ್ಟ್: ಶತಕದ ಬೆನ್ನಲ್ಲೇ ಕೊಹ್ಲಿ ಔಟ್, ಸೊನ್ನೆ ಸುತ್ತಿದ ಶಮಿ

By Web DeskFirst Published Dec 16, 2018, 10:35 AM IST
Highlights

ಟೆಸ್ಟ್ ವೃತ್ತಿ ಜೀವನದ 25ನೇ ಶತಕ ಸಿಡಿಸಿದ ಕೊಹ್ಲಿ ಸಾಕಷ್ಟು ಎಚ್ಚರಿಕೆಯ ಆಟಕ್ಕೆ ಮುಂದಾದರು. ಸಿಕ್ಕ ಅವಕಾಶಗಳಲ್ಲಿ ಬೌಂಡರಿ ಬಾರಿಸುತ್ತಾ ತಂಡಕ್ಕೆ ರನ್ ಕಾಣಿಕೆ ಹೆಚ್ಚಿಸುತ್ತಿದ್ದ ಕೊಹ್ಲಿ, ಪ್ಯಾಟ್ ಕಮ್ಮಿನ್ಸ್ ಬೌಲಿಂಗ್’ನಲ್ಲಿ ವಿಕೆಟ್ ಹೊರಗೆ ಹೋಗುತ್ತಿದ್ದ ಚೆಂಡನ್ನು ಕೆಣಕಿ ಪೀಟರ್ ಹ್ಯಾಂಡ್ಸ್’ಕಂಬ್’ಗೆ ಕ್ಯಾಚಿತ್ತು ಹೊರ ನಡೆದರು. 

ಪರ್ತ್[ಡಿ.16]: ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 123 ರನ್ ಬಾರಿಸಿ ಪ್ಯಾಟ್ ಕಮ್ಮಿನ್ಸ್’ಗೆ ವಿಕೆಟ್ ಒಪ್ಪಿಸಿದ್ದಾರೆ. ಇದರ ಬೆನ್ನಲ್ಲೇ ಮೊಹಮ್ಮದ್ ಶಮಿ ಕೂಡಾ ವಿಕೆಟ್ ಒಪ್ಪಿಸಿದ್ದಾರೆ. ಇದು ಟೀಂ ಇಂಡಿಯಾ ಪಾಲಿಗೆ ಹಿನ್ನಡೆಯಾಗಿ ಪರಿಣಮಿಸಿದ್ದಾರೆ.

ಟೆಸ್ಟ್ ವೃತ್ತಿ ಜೀವನದ 25ನೇ ಶತಕ ಸಿಡಿಸಿದ ಕೊಹ್ಲಿ ಸಾಕಷ್ಟು ಎಚ್ಚರಿಕೆಯ ಆಟಕ್ಕೆ ಮುಂದಾದರು. ಸಿಕ್ಕ ಅವಕಾಶಗಳಲ್ಲಿ ಬೌಂಡರಿ ಬಾರಿಸುತ್ತಾ ತಂಡಕ್ಕೆ ರನ್ ಕಾಣಿಕೆ ಹೆಚ್ಚಿಸುತ್ತಿದ್ದ ಕೊಹ್ಲಿ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್’ನಲ್ಲಿ ವಿಕೆಟ್ ಹೊರಗೆ ಹೋಗುತ್ತಿದ್ದ ಚೆಂಡನ್ನು ಕೆಣಕಿ ಪೀಟರ್ ಹ್ಯಾಂಡ್ಸ್’ಕಂಬ್’ಗೆ ಕ್ಯಾಚಿತ್ತು ಹೊರ ನಡೆದರು. ಮಂದಗತಿಯಲ್ಲಿ ಬ್ಯಾಟಿಂಗ್ ನಡೆಸಿದ ಕೊಹ್ಲಿ ಬರೋಬ್ಬರಿ 214 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಇಂಗ್ಲೆಂಡ್ ವಿರುದ್ಧ ನಾಗ್ಪುರ ಟೆಸ್ಟ್ ಬಳಿಕ ಅತಿ ದೀರ್ಘ ಎಸೆತಗಳನ್ನು ಬಳಸಿಕೊಂಡು ಶತಕ ಸಿಡಿಸಿದರು. ನಾಗ್ಪುರ ಟೆಸ್ಟ್’ನಲ್ಲಿ ಕೊಹ್ಲಿ 289 ಎಸೆತಗಳಳನ್ನು ಎದುರಿಸಿ ಶತಕ ಪೂರೈಸಿದ್ದರು.

ಕೊಹ್ಲಿ ವಿಕೆಟ್ ಒಪ್ಪಿಸಿದ ಬೆನ್ನಲ್ಲೇ ಕ್ರೀಸ್’ಗಿಳಿದ ಮೊಹಮ್ಮದ್ ಶಮಿ ಶೂನ್ಯ ಸುತ್ತಿ ಲಯನ್’ಗೆ ವಿಕೆಟ್ ಒಪ್ಪಿಸಿದರು. ಇದೀಗ ಟೀಂ ಇಂಡಿಯಾ 252 ರನ್’ಗಳಿಗೆ 7 ವಿಕಟ್ ಕಳೆದುಕೊಂಡಿದ್ದು, ಇನ್ನೂ 74 ರನ್’ಗಳ ಹಿನ್ನಡೆಯಲ್ಲಿದೆ.

click me!
Last Updated Dec 16, 2018, 10:38 AM IST
click me!