ಕೊಹ್ಲಿಗೆ ಒಲಿಂಪಿಕ್ ಚಿನ್ನದ ಪದಕ ವಿಜೇತನ ಟಾಂಗ್: ನನ್ನ ಕೋಚ್'ಅನ್ನು ದ್ವೇಷಿಸುತ್ತಿದ್ದೆ ! ಕೇಜ್ರಿವಾಲ್ ಕೂಡ ಬೆಂಬಲ

By Suvarna Web DeskFirst Published Jun 21, 2017, 10:53 PM IST
Highlights

ನಾನು ಅವರನ್ನು ದ್ವೇಷಿಸುತ್ತಿದ್ದೆ ! ಆದರೆ ಅವರ ಜೊತೆ 20 ವರ್ಷ ಕಳೆದಿದ್ದೇನೆ.

ನವದೆಹಲಿ(ಜೂ.21): ಅನಿಲ್ ಕುಂಬ್ಳೆ ಹಾಗೂ ವಿರಾಟ್ ಕೊಹ್ಲಿ ವಿರಸಕ್ಕೆ ವಿವಿಧ ಕ್ಷೇತ್ರದ ಗಣ್ಯರು ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರೂ ಕುಂಬ್ಳೆಗೆ ಬೆಂಬಲ ವ್ಯಕ್ತಪಡಿಸಿ ಕೊಹ್ಲಿಯ ನಡವಳಿಕೆಯನ್ನು ಟೀಕಿಸಿದ್ದಾರೆ.

ಒಲಿಂಪಿಕ್ಸ್'ನ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಏಕೈಕ ಚಿನ್ನದ ಪದಕ ಗೆಲ್ಲಿಸಿಕೊಟ್ಟ ಶೂಟರ್ ಅಭಿನವ್ ಬಿಂದ್ರಾ ಭಾರತ ತಂಡದ ನಾಯಕ ಕೊಹ್ಲಿ ಮನಸ್ಥಿತಿಯ ಬಗ್ಗೆ ಟ್ವಿಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಟಗಾರರು ತಮ್ಮ ಕೋಚ್'ಗಳ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಿಲ್ಲ.

ಅವರು ಆಟಗಾರರ ಬಗ್ಗೆ ಟೀಕೆ ಮಾಡಿದರೂ ಅದು ತಂಡ ಹಾಗೂ ಆಟಗಾರನ ಅಭ್ಯದಯಕ್ಕೆ ಸಂಬಂಧಿಸಿರುತ್ತದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಂದ್ರಾ ' ನನ್ನ ಅತೀ ದೊಡ್ಡ ಗುರು ಕೋಚ್ ಜರ್ಮನಿಯ ಉವ್ ರಿಸ್ಟೀರೆರ್'. ನಾನು ಅವರನ್ನು ದ್ವೇಷಿಸುತ್ತಿದ್ದೆ ! ಆದರೆ ಅವರ ಜೊತೆ 20 ವರ್ಷ ಕಳೆದಿದ್ದೇನೆ. ನನ್ನ ಶ್ರೇಯೋಭಿವೃದ್ಧಿಗೆ ಮಹತ್ವವಾದ ಕೊಡುಗೆಯನ್ನು ನೀಡಿದ್ದಾರೆ. ಇವರು ಯಾವಾಗಲು ನನಗಿಷ್ಟವಾಗದ ಹಲವು ವಿಷಯಗಳ ಬಗ್ಗೆ ಹೇಳುತ್ತಿದ್ದರು. ಆದರೆ ನಾನದನ್ನು ಕೇಳಿಸಿಕೊಳ್ಳುತ್ತಿರಲಿಲ್ಲ.' ಈಗ ಸುಮ್ಮನೆ ಹೇಳುತ್ತಿದ್ದೇನೆ' ಎಂದಿದ್ದಾರೆ.

ಸದ್ಯ ನಿವೃತ್ತಿ ಹೊಂದಿರುವ ಬಿಂದ್ರ 2008ರ ಬೀಜಿಂಗ್'ನಲ್ಲಿ ನಡೆದ ಒಲಿಂಪಿಕ್ಸ್'ನ 20 ಮೀಟರ್ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲಿಸಿಕೊಟ್ಟಿದ್ದರು.

ಕೇಜ್ರೀವಾಲ್,ಗುಟ್ಟಾ ಬೆಂಬಲ !

ಬಿಂದ್ರಾ ಟ್ವೀಟ್'ಗೆ ರೀಟ್ವೀಟ್ ಮಾಡಿರುವ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ 'ಜ್ವಾಲಾ ಗುಟ್ಟಾ'' ತರಬೇತಿಯ  ಸಮಯದಲ್ಲಿ ಟೀಕೆಗಳು ಸಹ ಮುಖ್ಯವಾಗಿರುತ್ತವೆ. ನನ್ನ ಗುರುಗಳು ಸಹ ಅದನ್ನೇ ಮಾಡುತ್ತಿದ್ದರು.' ಎಂದಿದ್ದಾರೆ.

ಇದೇ ವಿಷಯಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ರೀಟ್ವೀಟ್ ಮಾಡಿ' ಅಣ್ಣಜೀ ನನ್ನ ಅತೀ ದೊಡ್ಡ ಗುರು ಎಂದಿದ್ದು ಸದಾ ಟೀಕೆ ಮಾಡುವ ಕಾಂಗ್ರೆಸ್ ಮುಖಂಡ ದ್ವಿಗ್ವಿಜಯ್ ಸಿಂಗ್ ಅವರನ್ನು ತಮಾಷೆಯಿಂದಲೇ ಹೊಗಳಿದ್ದಾರೆ'.

ಕೊಹ್ಲಿ ಜೊತೆಗಿನ ವಿರಸದಿಂದಲೇ ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕೋಚ್ ಹುದ್ದೆ ತ್ಯಜಿಸಲು ವಿರಾಟ್ ಅವರೆ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.

click me!