ಧೋನಿ ಮಾಸ್ಟರ್ ಕ್ಲಾಸ್ ರನೌಟ್‌ಗೆ ಟ್ವಿಟರಿಗರ ಮೆಚ್ಚುಗೆ!

Published : Mar 09, 2019, 12:12 PM IST
ಧೋನಿ ಮಾಸ್ಟರ್ ಕ್ಲಾಸ್ ರನೌಟ್‌ಗೆ  ಟ್ವಿಟರಿಗರ ಮೆಚ್ಚುಗೆ!

ಸಾರಾಂಶ

ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಎಂ.ಎಸ್.ಧೋನಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಲಿಲ್ಲ. ಇದು ತವರಿನ ಅಭಿಮಾನಿಗಳಿಗೆ ನಿರಾಸೆ ತಂದಿತ್ತು. ಆದರೆ ಧೋನಿ ಮಾಡಿದ ರನೌಟ್‌ಗೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ರಾಂಚಿ(ಮಾ.09): ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ಆದರೆ ತವರಿನಲ್ಲಿ ಧೋನಿ ಅದ್ಬುತ ರನೌಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ರನೌಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ: ಅಂತಿಮ 2 ಏಕದಿನ ಪಂದ್ಯಕ್ಕೆ ಬದಲಾವಣೆ - ಧೋನಿಗೆ ವಿಶ್ರಾಂತಿ!

ಆಸ್ಟ್ರೇಲಿಯಾ ಬ್ಯಾಟಿಂಗ್ ವೇಳೆ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರ ಮುಂದುವರಿದಿತ್ತು. 41.5ನೇ ಓವರ್‌ನಲ್ಲಿ ಶಾನ್ ಮಾರ್ಶ್ ಸಿಂಗಲ್ ರನ್‌ಗಾಗಿ ಓಡಿದರು.  ಕವರ್‌ನಲ್ಲಿದ್ದ ರವೀಂದ್ರ ಜಡೇಜಾ ಕ್ಷಣಮಾತ್ರದಲ್ಲೇ ಧೋನಿಯತ್ತ ಬಾಲ್ ಎಸೆದರು. ಬಾಲ್ ಹಿಡಿದು ರನೌಟ್ ಮಾಡುವಷ್ಟು ಸಮಯ ಇರಲಿಲ್ಲ. ಹೀಗಾಗಿ ಧೋನಿ ಬರುತ್ತಿದ್ದ ಬಾಲನ್ನು ಹಾಗೇ ಸ್ಟಂಪ್‌ನತ್ತ ತಿರುಗಿಸಿ ಮ್ಯಾಕ್ಸ್‌ವೆಲ್ ರನೌಟ್ ಮಾಡಿದರು.

 

 

ಇದನ್ನೂ ಓದಿ: ಪಂದ್ಯ ಸೋತರೂ ABD ದಾಖಲೆ ಮುರಿದ ವಿರಾಟ್ ಕೊಹ್ಲಿ!

ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 313 ರನ್ ಸಿಡಿಸಿತು. ಬೃಹತ್ ಗುರಿ ಬೆನ್ನಟ್ಟಿದ ಭಾರತ 281ರನ್‌ಗೆ ಆಲೌಟ್ ಆಗೋ ಮೂಲಕ ಸೋಲೊಪ್ಪಿಕೊಂಡಿತು. ತವರಿನಲ್ಲಿ ಧೋನಿ 26 ರನ್ ಸಿಡಿಸಿ ನಿರಾಸೆ ಮೂಡಿಸಿದರು.

 

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ ಬರೆದ ರೋಹಿತ್ ಶರ್ಮಾ; ಈ ದಾಖಲೆ ಮುರಿಯಲು ಕೊಹ್ಲಿ, ಬಟ್ಲರ್‌ಗೂ ಸಾಧ್ಯವಿಲ್ಲ!
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್; ಸಂಗಕ್ಕಾರ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ!