ತಂಡದಿಂದ ಗೇಟ್’ಪಾಸ್ ನೀಡುವ ವಿಚಾರ ಧೋನಿಗೆ ಗೊತ್ತಿತ್ತು..!

By Web DeskFirst Published Oct 29, 2018, 5:04 PM IST
Highlights

‘ನಾವು 2ನೇ ವಿಕೆಟ್ ಕೀಪರ್'ನನ್ನು ಸಿದ್ಧಗೊಳಿಸುವ ಯತ್ನದಲ್ಲಿದ್ದೇವೆ. ರಿಶಭ್ ಪಂತ್ ಈಗಾಗಲೇ ತಂಡದಲ್ಲಿದ್ದಾರೆ. ದಿನೇಶ್ ಕಾರ್ತಿಕ್ ಸಹ ಕಳಪೆ ಪ್ರದರ್ಶನವನ್ನೇನೂ ನೀಡಿಲ್ಲ’ ಎಂದು ಪ್ರಸಾದ್ ಹೇಳಿದ್ದಾರೆ. 

ಮುಂಬೈ(ಅ.29]: ಭಾರತ ಟಿ20 ತಂಡದಿಂದ ಧೋನಿಯನ್ನು ಕೈಬಿಟ್ಟು ಬಿಸಿಸಿಐ ಆಯ್ಕೆ ಸಮಿತಿ ವಿವಾದಕ್ಕೆ ಗುರಿಯಾಗಿದೆ. ದೇಶಕ್ಕೆ ಚೊಚ್ಚಲ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕನ ವೃತ್ತಿ ಬದುಕಿನಲ್ಲಿ ಇಂತಹ ಸನ್ನಿವೇಶ ಎದುರಾಗಿರುವುದು ಇದೇ ಮೊದಲು. ಆದರೆ ತನ್ನ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. 

‘ನಾವು 2ನೇ ವಿಕೆಟ್ ಕೀಪರ್'ನನ್ನು ಸಿದ್ಧಗೊಳಿಸುವ ಯತ್ನದಲ್ಲಿದ್ದೇವೆ. ರಿಶಭ್ ಪಂತ್ ಈಗಾಗಲೇ ತಂಡದಲ್ಲಿದ್ದಾರೆ. ದಿನೇಶ್ ಕಾರ್ತಿಕ್ ಸಹ ಕಳಪೆ ಪ್ರದರ್ಶನವನ್ನೇನೂ ನೀಡಿಲ್ಲ’ ಎಂದು ಪ್ರಸಾದ್ ಹೇಳಿದ್ದಾರೆ. ತಂಡದಿಂದ ಕೈಬಿಡುವ ವಿಚಾರ ಧೋನಿಗೆ ತಿಳಿದಿತ್ತೇ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಪ್ರಸಾದ್, ‘ಹೌದು, ಖಂಡಿತವಾಗಿಯೂ. ನಾನೇ ಸ್ವತಃ ಧೋನಿ ಜತೆಗೆ ಮಾತನಾಡಿದ್ದೇನೆ. 2ನೇ ವಿಕೆಟ್ ಕೀಪರ್ ಹುಡುಕಾಟಕ್ಕೆ ಪ್ರಾಮುಖ್ಯತೆ ನೀಡುವ ಬಗ್ಗೆ ವಿವರಿಸಿದ್ದೇನೆ. ಅವರು ಯಾವುದೇ ಬೇಸರವಿಲ್ಲದೆ ಒಪ್ಪಿಕೊಂಡರು’ ಎಂದಿದ್ದಾರೆ. 

2020ರ ಐಸಿಸಿ ಟಿ20 ವಿಶ್ವಕಪ್ ವೇಳೆಗೆ ಧೋನಿ ತಂಡದಲ್ಲಿ ಇರುವುದಿಲ್ಲ ಎನ್ನುವ ಲೆಕ್ಕಾಚಾರದ ಆಧಾರದ ಮೇಲೆ ಬಿಸಿಸಿಐ ಆಯ್ಕೆ ಸಮಿತಿ, ಅವರನ್ನುವಿಂಡೀಸ್, ಆಸ್ಟ್ರೇಲಿಯಾ ಟಿ20 ಸರಣಿಗೆ ಕೈಬಿಡುವ ನಿರ್ಧಾರ ಕೈಗೊಂಡಿರುವುದಾಗಿ ಹೇಳಲಾಗಿದೆ.

click me!